ಟಚ್‌ಸ್ಕ್ರೀನ್ ಟೇಬಲ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ!
ಹೋಟೆಲ್‌ಗೆ ಹೋಗಿ ಮೆನು ಕಾರ್ಡ್ ನೋಡಿ ಬೇಕಾದ ಆಹಾರವನ್ನು ಆರ್ಡರ್ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನೀವು ಕುಳಿತ ಟೇಬಲ್‌ನಲ್ಲೇ ನಿಮಗೆ ಬೇಕಾದ ರೀತಿ ಆಹಾರವನ್ನು ತಯಾರಿಸಿ,ಆರ್ಡರ್ ಮಾಡುವ ಕಾಲ ಬಂದರೂ ಆಶ್ಚರ್ಯವಿಲ್ಲ.
ಹೌದು .ಹೀಗೊಂದು ಸಾಧ್ಯತೆ ಸೃಷ್ಟಿಸಿದ್ದು ಪಿಜ್ಜಾ ಹಟ್ ಕಂಪೆನಿ. ಈ ಕಂಪೆನಿ ಹೊಸ 'ಟಚ್‌ಸ್ಕ್ರೀನ್ ಟೇಬಲ್ ಟಾಪ್' ಟೇಬಲ್ ಮಾದರಿ ಇರುವ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ. ಮುಂದುಗಡೆ ಇರುವ ಟಚ್‌ಸ್ಕ್ರೀನ್ ಟೇಬಲ್‌ನಲ್ಲಿ ಬೇಕಾದ ಪಿಜ್ಜಾವನ್ನು ಗ್ರಾಹಕರೇ ತಯಾರಿಸಿ ಸ್ಮಾರ್ಟ್‌ಫೋನ್ ಮೂಲಕ ಬಿಲ್ಲು ಪಾವತಿಸಿ ಆರ್ಡರ್ ಮಾಡುವ ಹೊಸ ಪರಿಕಲ್ಪನೆಯಿದು.
ಇನ್ನೂ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಪಿಜ್ಜಾ ಹಟ್ ಈ ರೀತಿಯಾಗಿ ಪಿಜ್ಜಾವನ್ನು ವಿತರಣೆ ಮಾಡುವ ಬಗ್ಗೆ ಪ್ರಯೋಗ ನಡೆಸುತ್ತಿದೆ. ಮುಂದಿನ ಪುಟದಲ್ಲಿ ಈ ಟಚ್‌ಸ್ಕ್ರೀನ್ ಪಿಜ್ಜಾ ಟೇಬಲ್ ಹೇಗಿದೆ ಎಂದು ತೋರಿಸುವ ಚಿತ್ರ ಮತ್ತು ವಿಡಿಯೋ ನೀಡಲಾಗಿದೆ.
ಇದನ್ನೂ ಓದಿ: ವಿಶ್ವದ ಮೊದಲ ಟ್ವೀಟರ್ ಹೋಟೆಲ್ ಹೇಗಿದೆ ನೋಡಿದ್ದೀರಾ?

ಟಚ್‌ಸ್ಕ್ರೀನ್ ಟೇಬಲ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ!
ಟಚ್‌ಸ್ಕ್ರೀನ್ ಪಿಜ್ಜಾ ಟೇಬಲ್

ಟಚ್‌ಸ್ಕ್ರೀನ್ ಟೇಬಲ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ!
ಪಿಜ್ಜಾ ಗಾತ್ರವನ್ನು ಆಯ್ಕೆ ಮಾಡುವುದು ಹೀಗೆ

ಟಚ್‌ಸ್ಕ್ರೀನ್ ಟೇಬಲ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ!
ಪಿಜ್ಜಾವನ್ನು ತಯಾರಿಸಿ ಆರ್ಡರ್ ಮಾಡುವುದು ಹೀಗೆ
ಟಚ್‌ಸ್ಕ್ರೀನ್ ಟೇಬಲ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ!
ವಿಡಿಯೋ ವೀಕ್ಷಿಸಿ

Click it and Unblock the Notifications