Subscribe to Gizbot

ಈ ಆನ್‌ಲೈನ್ ಆಟದಿಂದ ದೇಹದ ತೂಕ ಕಳೆದುಕೊಳ್ಳಿ

Written By:

ನಿಮ್ಮ ದೇಹದ ತೂಕ ಏರಿಕೆಯಾಗುತ್ತಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಸಂಶೋಧಕರು ಆನ್‌ಲೈನ್ ಗೇಮ್ ಅನ್ನು ಅಭಿವೃದ್ಧಿಪಡಿಸಿದ್ದು ಈ ಆಟವನ್ನು ಆಡುತ್ತಿದ್ದರೆ ತೂಕ ಇಳಿಯುವುದು ಖಂಡಿತ.

ಈ ಆನ್‌ಲೈನ್ ಆಟದಿಂದ ದೇಹದ ತೂಕ ಕಳೆದುಕೊಳ್ಳಿ

ಸರಳ ಕಂಪ್ಯೂಟರೀಕೃತ ಗೇಮ್ ಇದಾಗಿದ್ದು ಜನರ ಪ್ರತೀದಿನದ ನಡತೆಯನ್ನು ಇದು ಬದಲಾಯಿಸುತ್ತದೆ ಎಂದು ಎಕ್ಸೇಟರ್ ವಿಶ್ವವಿದ್ಯಾನಿಲಯದ ನಟಾಲಿಯಾ ಲಾರೆನ್ಸ್ ತಿಳಿಸಿದ್ದಾರೆ. ಕೆಲವೊಂದು ಚಿತ್ರಗಳಿಗೆ ಜನರು ಕ್ಲಿಕ್ ಮಾಡಬೇಕಾಗುತ್ತದೆ. ಉದಾಹರಣೆಗೆ ಅವರು ಬಿಸ್ಕೆಟ್ ಚಿತ್ರವನ್ನು ಕ್ಲಿಕ್ ಮಾಡಿದಾಗ ಆನ್‌ಲೈನ್ ಆಟ ಹಣ್ಣು ಮತ್ತು ಇತರ ಕ್ಯಾಲೋರಿ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೂಚಿಸುತ್ತದೆ. ಹೀಗೆ ತಮ್ಮ ದೇಹದಲ್ಲಿ ಕ್ಯಾಲೋರಿ ಹೆಚ್ಚಿಸುವ ಆಹಾರಗಳ ಮೇಲೆ ನಿಷೇಧವನ್ನು ಹೇರಬಹುದಾಗಿದೆ.

ಓದಿರಿ: ಎಚ್ಚರ: ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮಗೇ ಹಾನಿ

41 ವ್ಯಕ್ತಿಗಳನ್ನು ಬಳಸಿ 10 ನಿಮಿಷದ ಸೆಶನ್ ಅನ್ನು ಸಂಸ್ಥೆ ನಡೆಸಿದ್ದು ತಮ್ಮ ಕ್ಯಾಲೋರಿ ಕಳೆದುಕೊಳ್ಳಲು ಈ ಆಟ ಇವರಿಗೆ ಸಹಾಯ ಮಾಡಿದೆ. ಇನ್ನು ಕ್ಯಾಲೋರಿ ಕಡಿಮೆಗೊಳಿಸುವ ಆಹಾರಗಳನ್ನು ಇದು ಸೂಚಿಸುತ್ತದೆ ಎನ್ನಲಾಗಿದೆ.

English summary
If you are worried about gaining extra kilos, playing a simple online game developed by researchers in Britain may help you stay fit. The new computerised game can help people control their snacking impulses and lose weight, the researchers said.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot