ಎಚ್ಚರ: ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮಗೇ ಹಾನಿ

By Shwetha
|

ಫೇಸ್‌ಬುಕ್ ಎಂಬ ಸಾಮಾಜಿಕ ತಾಣವನ್ನು ಮೆಚ್ಚದವರು ಯಾರಿದ್ದಾರೆ ಹೇಳಿ? ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಫೇಸ್‌ಬುಕ್‌ನಲ್ಲಿ ತಮ್ಮ ಖಾತೆಯನ್ನು ತೆರೆದು ಇಂದು ಸಂಪರ್ಕವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಫೋಟೋ ಶೇರಿಂಗ್, ಸಂವಾದ, ಹೀಗೆ ಬೇರೆ ವೈಶಿಷ್ಟ್ಯತೆಗಳನ್ನು ಹೊಂದಿ ಫೇಸ್‌ಬುಕ್ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಓದಿರಿ: ಫೇಸ್‌ಬುಕ್ ಒಡೆಯನ ಶ್ವಾನಕ್ಕೆ 2 ಮಿಲಿಯನ್ ಫಾಲೋವರ್ಸ್ ಅಂತೆ

ಆದರೆ ನಾವು ಇಂದಿನ ಲೇಖನದಲ್ಲಿ ನೀಡುತ್ತಿರುವ ಕೆಲವೊಂದು ಅಂಶಗಳು ಫೇಸ್‌ಬುಕ್ ಅನ್ನು ತ್ಯಜಿಸುವಂತೆ ಮಾಡುವುದು ಖಂಡಿತ. ಹೌದು ನಿಮ್ಮನ್ನು ಶಾಕ್‌ಗೊಳಿಸುವ ಈ ಅಂಶಗಳು ಫೇಸ್‌ಬುಕ್ ಖಾತೆಯನ್ನು ಅಳಿಸುವಂತೆ ನಿಮ್ಮನ್ನು ಪ್ರಚೋದಿಸುವುದು ಖಂಡಿತ. ಹಾಗಿದ್ದರೆ ಆ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳುವ ಬಯಕೆ ನಿಮ್ಮದಾಗಿದ್ದಲ್ಲಿ ಮುಂದೆ ಓದಿ

ಸಮಯ ಕೊಲ್ಲುತ್ತದೆ

ಸಮಯ ಕೊಲ್ಲುತ್ತದೆ

ಸಂಶೋಧನೆಗಳ ಪ್ರಕಾರ ಫೇಸ್‌ಬುಕ್ ನಿಮ್ಮ ಸಮಯವನ್ನು ಕೊಲ್ಲುತ್ತದೆಯಂತೆ. 10 ವರ್ಷಗಳಿಂದ ಸೈಟ್‌ನಲ್ಲಿ ವ್ಯಸ್ತರಾಗಿರುವ ಬಳಕೆದಾರರು ದಿನಕ್ಕೆ 17 ನಿಮಿಷಗಳಷ್ಟು ಫೇಸ್‌ಬುಕ್‌ನಲ್ಲಿ 40 ಕ್ಕಿಂತಲೂ ಹೆಚ್ಚಿನ ನಮೂದುಗಳನ್ನು ಮಾಡಿದ್ದಾರೆ.

ಫೇಸ್‌ಬುಕ್ ನಿಮ್ಮನ್ನು ಬಳಸಿಕೊಳ್ಳುತ್ತದೆ

ಫೇಸ್‌ಬುಕ್ ನಿಮ್ಮನ್ನು ಬಳಸಿಕೊಳ್ಳುತ್ತದೆ

ನಿಮ್ಮ ಭಾವನೆಗಳಿಗೆ ಹಾನಿಯಾಗುವ ಕೆಲವೊಂದು ಸಂಪಾದನೆಗಳನ್ನು ಫೇಸ್‌ಬುಕ್‌ನಲ್ಲಿ ಹೆಚ್ಚು ಲೈಕ್ ಬರುವುದಕ್ಕಾಗಿ ಕಂಪೆನಿ ಮಾಡುತ್ತಿದೆ. ಸೇವೆಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಜನರನ್ನು ಫೇಸ್‌ಬುಕ್‌ನಲ್ಲಿ ವ್ಯಸ್ತರಾಗಿಸಲು ಈ ರೀತಿ ಮಾಡುತ್ತಿದ್ದೇವೆ ಎಂಬುದು ಫೇಸ್‌ಬುಕ್ ವಾದವಾಗಿದೆ.

ಜಾಹೀರಾತುಗಳಲ್ಲಿ ನಿಮ್ಮನ್ನು ಗುರಿಯಾಗಿಸುವುದು

ಜಾಹೀರಾತುಗಳಲ್ಲಿ ನಿಮ್ಮನ್ನು ಗುರಿಯಾಗಿಸುವುದು

ನೀವು ಏನಾದರೂ ಉತ್ಪನ್ನವನ್ನು ಖರೀದಿ ಮಾಡಬೇಕೆಂದು ಫೇಸ್‌ಬುಕ್‌ನಲ್ಲಿ ತಡಕಾಡಿದರೆ ಸಾಕು ಆರು ತಿಂಗಳ ನಂತರ ಫೇಸ್‌ಬುಕ್ ಆ ಉತ್ಪನ್ನವನ್ನು ಖರೀದಿಸುವಂತೆ ನಿಮ್ಮನ್ನು ನೆನಪಿಸುತ್ತಿರುತ್ತದೆ. ನಿಮ್ಮನ್ನು ಬಳಸಿ ತನ್ನ ಪ್ರಚಾರವನ್ನು ಕಂಪೆನಿ ಚೆನ್ನಾಗಿ ಮಾಡಿಕೊಳ್ಳುತ್ತಿದೆ.

ಆರೋಗ್ಯಕ್ಕೆ ಹಾನಿಕರ

ಆರೋಗ್ಯಕ್ಕೆ ಹಾನಿಕರ

ಫೇಸ್‌ಬುಕ್ ಹಾನಿಕಾರಕ ವೆಬ್‌ಸೈಟ್ ಆಗಿದ್ದು, ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.

ಅಪರಿಚಿತರು

ಅಪರಿಚಿತರು

ಫೇಸ್‌ಬುಕ್ ತನ್ನ ಖಾತೆಯಲ್ಲಿ ಹೊಂದಿರುವ 338 ಜನರು ಯಾರೆಂಬುದು ಸ್ವತಃ ಅದಕ್ಕೆ ತಿಳಿದಿಲ್ಲವಂತೆ. ಅದರಲ್ಲಿ ಕೆಲವರು ಮರಣ ಹೊಂದಿದ್ದರೆ ಮತ್ತೆ ಕೆಲವರದು ಅದು ನಿಜವಾದ ಖಾತೆಯೇ ಎಂಬುದು ಗೊಂದಲದಲ್ಲಿದೆ.

ಗೌಪ್ಯತೆ

ಗೌಪ್ಯತೆ

ಇನ್ನು ನಿಮ್ಮ ಗೌಪ್ಯತೆಯ ಬಗ್ಗೆ ನಿಮಗೆ ಕಾಳಜಿ ಇಲ್ಲ ಎಂದಾದಲ್ಲಿ ಭವಿಷ್ಯದಲ್ಲಿ ಅಭದ್ರತೆ ನಿಮ್ಮನ್ನು ಕಾಡುವುದು ಖಂಡಿತ. ನಿಮ್ಮ ಖಾತೆಯನ್ನು ಇತರರು ಹ್ಯಾಕ್ ಮಾಡುವ ಸಂಭವ ಇರುತ್ತದೆ.

ನೀವು ಪೋಸ್ಟ್ ಮಾಡದೇ ಇದ್ದರೂ ನಡೆಯುತ್ತದೆ

ನೀವು ಪೋಸ್ಟ್ ಮಾಡದೇ ಇದ್ದರೂ ನಡೆಯುತ್ತದೆ

ಇನ್ನು ಫೇಸ್‌ಬುಕ್ ಖಾತೆಯಲ್ಲಿ ನೀವು ಪೋಸ್ಟ್ ಮಾಡಿಯೇ ಆಗಬೇಕು ಎಂಬ ನಿಯಮವೇನಿಲ್ಲ. ನೀವು ಯಾರೊಂದಿಗೆ ಇದ್ದೀರಿ, ಎಲ್ಲಿಗೆ ಹೋಗುತ್ತಿದ್ದೀರಿ, ಏನು ಮಾಡುತ್ತಿದ್ದೀರಿ ಈ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳಲು ಯಾರಿಗೂ ಅಷ್ಟು ಆಸಕ್ತಿ ಇರುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.

Most Read Articles
Best Mobiles in India

English summary
Before you log in or tap Facebook app on your smartphone again, here are a few reasons to quit Facebook in 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more