ಭಾರೀ ಡಿಸ್ಕೌಂಟ್‌ನಲ್ಲಿ ಹೊಸ ಪೊಕೊ ಸ್ಮಾರ್ಟ್‌ಫೋನ್ ಖರೀದಿಗೆ ಇದೇ ಸೂಕ್ತ ಸಮಯ!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಸಹ ಇ-ಕಾಮರ್ಸ್‌ನಂತೆ ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ ಸೇಲ್ ಅನ್ನು ಆಯೋಜಿಸುತ್ತಿವೆ. ಆ ಪೈಕಿ ಪೊಕೊ ಬ್ರ್ಯಾಂಡ್ ಸಹ ಈಗ ಮೂರನೇ ವರ್ಷಾಚರಣೆಯ ಸಂಭ್ರಮದಲ್ಲಿ ವಿಶೇಷ ಸೇಲ್ ಆಯೋಜಿಸಿದೆ. ಈ ಸೇಲ್‌ನಲ್ಲಿ ತನ್ನ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಕೊಡುಗೆಗಳನ್ನು ಘೋಷಿಸಿದೆ.

ಹೌದು, ಪೊಕೊ ಕಂಪೆನಿ ತನ್ನ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪೊಕೊ ಆನಿವರ್ಸರಿ ಸೇಲ್ ಅನ್ನು ಆಯೋಜಿಸಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಸೇಲ್ ಇದೇ ಫೆ.4 (ನಾಳೆಯಿಂದ) ರಿಂದ ಫೆ.7ರ ವರೆಗೂ ನಡೆಯಲಿದೆ. ಈ ವಿಶೇಷ ಸೇಲ್‌ನಲ್ಲಿ ಪೊಕೊ ಕಂಪನಿಯ ಕೆಲವು ಇತ್ತೀಚಿಗಿನ ಫೋನ್‌ಗಳ ಜೊತೆಗೆ ಜನಪ್ರಿಯ ಮಾಡೆಲ್‌ಗಳಿಗೂ ರಿಯಾಯಿತಿ ಘೋಷಿಸಿವೆ. ಹಾಗಾದರೇ ಪೊಕೊ ಆನಿವರ್ಸರಿ ಸೇಲ್‌ನಲ್ಲಿ ಆಫರ್ ಪಡೆದ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಪೊಕೊ X3 ಸ್ಮಾರ್ಟ್‌ಫೋನ್
ಪೊಕೊ x3 ಸ್ಮಾರ್ಟ್‌ಫೋನ್ 6GB + 64GB ಮತ್ತು 8GB RAM + 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್ ಹೊಂದಿದೆ. ಈ ವಿಶೇಷ ಸೇಲ್‌ನಲ್ಲಿ 6GB + 64GB ವೇರಿಯಂಟ್‌ನ ಈ ಫೋನ್ 14,499ರೂ.ಗಳಿಗೆ ಲಭ್ಯವಾಗಲಿದೆ.

ಪೊಕೊ M2 ಪ್ರೊ
ಪೊಕೊ M2 ಪ್ರೊ ಸ್ಮಾರ್ಟ್‌ಫೋನ್ 6GB + 64GB ಮತ್ತು 6GB RAM + 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720G SoC ಪ್ರೊಸೆಸರ್ ಹೊಂದಿದೆ. ಈ ವಿಶೇಷ ಸೇಲ್‌ನ ಬೇಸ್ ವೇರಿಯಂಟ್‌ನ ಈ ಫೋನ್ 11,999ರೂ.ಗಳಿಗೆ ಲಭ್ಯವಾಗಲಿದೆ.

ಪೊಕೊ M2 ಫೋನ್
ಪೊಕೊ M2 ಸ್ಮಾರ್ಟ್‌ಫೋನ್ 6GB + 64GB ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಮೀಡಿಯಾಟೆಕ್ ಹಿಲಿಯೋ G80 ಪ್ರೊಸೆಸರ್ ಹೊಂದಿದೆ. ಈ ವಿಶೇಷ ಸೇಲ್‌ನ ಬೇಸ್ ವೇರಿಯಂಟ್‌ನ ಈ ಫೋನ್ 9,499ರೂ.ಗಳಿಗೆ ಲಭ್ಯವಾಗಲಿದೆ.

ಪೊಕೊ C3 ಫೋನ್ (4GB)
ಪೊಕೊ C3 ಸ್ಮಾರ್ಟ್‌ಫೋನ್ 3GB + 32GB ಮತ್ತು 4GB + 64GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಮೀಡಿಯಾಟೆಕ್ ಹಿಲಿಯೋ G35 ಪ್ರೊಸೆಸರ್ ಹೊಂದಿದೆ. ಈ ವಿಶೇಷ ಸೇಲ್‌ನ ಬೇಸ್ ವೇರಿಯಂಟ್‌ನ ಈ ಫೋನ್ 7,499ರೂ.ಗಳಿಗೆ ಲಭ್ಯವಾಗಲಿದೆ.


Click it and Unblock the Notifications