ಇಂದು ಪೊಕೊ C51 ಫಸ್ಟ್ ಸೇಲ್!..ಇದರ ಆಫರ್ ಬೆಲೆಗೆ ಗ್ರಾಹಕರು ಫಿದಾ!
ಪೊಕೊ ಸಂಸ್ಥೆಯು ಇತ್ತೀಚಿಗಷ್ಟೆ ನೂತನವಾಗಿ ಬಿಡುಗಡೆ ಮಾಡಿರುವ ಪೊಕೊ C51 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಏ. 10) ಮಧ್ಯಾಹ್ನ 12 ರಿಂದ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಮೊದಲ ಸೇಲ್ ಆರಂಭವಾಗಲಿದೆ. ಇನ್ನು ಈ ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರುವುದು ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ.
ಹೌದು, ಪೊಕೊ C51 ಸ್ಮಾರ್ಟ್‌ಫೋನ್ ಇಂದು ಮೊದಲ ಮಾರಾಟ ನಡೆಯಲಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಸೆನ್ಸಾರ್ 8 ಮೆಗಾ ಪಿಕ್ಸಲ್ ಆಗಿದೆ. ಹಾಗೆಯೇ ಈ ಫೋನ್4GB + 64 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಒಳಗೊಂಡಿದೆ. ಇದರೊಂದಿಗೆ 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಇದರ ಬೆಲೆಯು 8,499ರೂ ಆಗಿದ್ದು, ಫಸ್ಟ್ ಸೇಲ್‌ನ ಕೊಡುಗೆಯಲ್ಲಿ 7,799ರೂ. ಗೆ ಖರೀದಿಸಬಹುದಾಗಿದೆ. ಇನ್ನುಳಿದಂತೆ ಈ ಫೋನಿನ ಬೆಲೆ ಎಷ್ಟು ಮತ್ತು ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪೊಕೊ C51 ಡಿಸ್‌ಪ್ಲೇ : ಪೊಕೊ C51 ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 6.52 ಇಂಚಿನ ಎಲ್‌ಸಿಡಿ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ವಾಟರ್ ಸ್ಟೈಲ್ ನಾಚ್ ರಚನೆಯ ಈ ಡಿಸ್‌ಪ್ಲೇಯು 269 ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ.
ಪೊಕೊ C51 ಪ್ರೊಸೆಸರ್ ಕಾರ್ಯ : ಪೊಕೊ C51 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೇಯೇ 4GB + 64 GB ಸ್ಟೋರೇಜ್ ಸಾಮರ್ಥ್ಯವನ್ನು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆ ಇದೆ.

ಪೊಕೊ C51 ಕ್ಯಾಮೆರಾ ಸೆನ್ಸಾರ್ : ಪೊಕೊ C51 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ QVGA ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಒಳಗೊಂಡಿದೆ.
ಪೊಕೊ C51 ಬ್ಯಾಟರಿ ಮತ್ತು ಇತರೆ : ಪೊಕೊ C51 ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v.5, ಹಾಟ್‌ಸ್ಪಾಟ್, ವೈಫೈ, ಅನ್ನು ಬೆಂಬಲಿಸಲಿದೆ.
ಪೊಕೊ C51 ಬೆಲೆ ಮತ್ತು ಲಭ್ಯತೆ : ಪೊಕೊ C51 ಸ್ಮಾರ್ಟ್‌ಫೋನ್ 4 GB RAM + 64 GB ವೇರಿಯಂಟ್ ಬೆಲೆಯು 9,999ರೂ. ಆಗಿದ್ದು, ಆರಂಭಿಕ ಕೊಡುಗೆಯಾಗಿ 7,799 ರೂ. ಪ್ರೈಸ್‌ಟ್ಯಾಗ್ ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಇದೇ ಏಪ್ರಿಲ್ 10 ರಿಂದ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ.


Click it and Unblock the Notifications








