Home
ಸುದ್ದಿಜಾಲ

ಪೊಕೊ C51 ಮೊಬೈಲ್‌ಗೆ ಈಗ ಶೇ. 43% ರಷ್ಟು ನೇರ ಡಿಸ್ಕೌಂಟ್‌!

ಅಮೆಜಾನ್‌ ಇ ಕಾಮರ್ಸ್‌ ತಾಣವು ದೈತ್ಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಸಂಸ್ಥೆಯು ಮೊಬೈಲ್‌ ಫೋನ್‌ಗಳಿಗೆ ಒಂದಿಲ್ಲೊಂದು ಬೊಂಬಾಟ್‌ ರಿಯಾಯಿತಿ ಲಭ್ಯ ಮಾಡುತ್ತಾ ಮುನ್ನಡೆದಿದೆ. ಸದ್ಯ ಎಲ್ಲ ಮಾದರಿಯ ಫೋನ್‌ಗಳಿಗೂ ಡಿಸ್ಕೌಂಟ್‌ ನೀಡಿದ್ದು, ಆ ಪೈಕಿ ಪೊಕೊ ಸಂಸ್ಥೆಯ ಪೊಕೊ C51 ಮೊಬೈಲ್‌ ಕೂಡಾ ಭಾರೀ ಬೆಲೆ ಇಳಿಕೆ ಪಡೆದಿದ್ದು, ಗ್ರಾಹಕರ ಗಮನ ಸೆಳೆದಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಪೊಕೊ C51 ಮೊಬೈಲ್‌ ಶೇ. 43% ರಷ್ಟು ರಿಯಾಯಿತಿ ಪಡೆದಿದೆ. ಗ್ರಾಹಕರು ಈ ಫೋನಿನ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಇದೀಗ ಕೊಡುಗೆಯಲ್ಲಿ 6,299 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಇತರೆ ಕೆಲವು ಡಿಸ್ಕೌಂಟ್‌ ಸಹ ಖರೀದಿದಾರರಿಗೆ ಸಿಗಲಿವೆ.

ಪೊಕೊ C51 ಮೊಬೈಲ್‌ಗೆ ಈಗ ಶೇ. 43% ರಷ್ಟು ನೇರ ಡಿಸ್ಕೌಂಟ್‌!

ಇನ್ನು ಪೊಕೊ C51 ಫೋನ್‌ 4 GB ಸಾಮರ್ಥ್ಯದ ಆಂತರೀಕ RAM ಪಡೆದಿದ್ದರೂ ಕೂಡಾ, ಸುಮಾರು 7 GB ವರೆಗೆ ವರ್ಚುವಲ್ RAM ಬೆಂಬಲ ಪಡೆದಿದೆ. ಗ್ರಾಹಕರು ಈ ಮೊಬೈಲ್‌ ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಹಾಗಾದರೇ ಪೊಕೊ C51 ಫೋನ್‌ ಯಾವೆಲ್ಲಾ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಪೊಕೊ C51 ಮೊಬೈಲ್‌ಗೆ ಈಗ ಶೇ. 43% ರಷ್ಟು ನೇರ ಡಿಸ್ಕೌಂಟ್‌!

ಪೊಕೊ C51 ಮೊಬೈಲ್‌ - ಫೀಚರ್ಸ್‌

ಪೊಕೊ C51 ಮೊಬೈಲ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಪಡೆದಿದೆ. ಇದು 6.52 ಇಂಚಿನ ಎಲ್‌ಸಿಡಿ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ವನ್ನು ಪಡೆದಿದೆ. ಇದರ ಜೊತೆಗೆ ವಾಟರ್‌ ಸ್ಟೈಲ್‌ ನಾಚ್‌ ರಚನೆಯ ಈ ಡಿಸ್‌ಪ್ಲೇಯು 269 ppi ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ.

ಪೊಕೊ C55 ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್‌ ಪ್ರೊಸೆಸರ್‌ ಪವರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6 GB RAM ಮತ್ತು 128 GB ಆಂತರೀಕ ಸ್ಟೋರೇಜ್‌ನಲ್ಲಿ ಇದೆ. ಈ ಮೊಬೈಲ್‌ನಲ್ಲಿ ನೀವು RAM ಅನ್ನು 11 GB ವರೆಗೆ ವಿಸ್ತರಿಸುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.

ಪೊಕೊ C55 ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯ ಸೌಲಭ್ಯ ಸಹ ಪಡೆದಿದೆ. ಇದರಲ್ಲಿ ಈ ಫೋನಿನ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಇದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸಲ್‌ ಡೆಪ್ತ್ ಸೆನ್ಸಾರ್‌ ಪಡೆದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಪೊಕೊ C55 ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್‌ ಕೂಡಾ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ವೈಫೈ, ಬ್ಲೂಟೂತ್ 5.0, FM ರೇಡಿಯೋ, ರೆಕಾರ್ಡಿಂಗ್, USB micro USB 2.0, OTG ಅನ್ನು ಪಡೆದಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌, ಕಂಪಾಸ್‌, ಅನ್ನು ಸಪೋರ್ಟ್‌ ಮಾಡಲಿದೆ.

ಈ ಫೋನ್‌ 6 GB RAM ಮತ್ತು 128 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಗ್ರಾಹಕರು ಈ ಮೊಬೈಲ್‌ ಅನ್ನು ಅಮೆಜಾನ್‌ ತಾಣದಲ್ಲಿ ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದು.

Best Mobiles in India

English summary
POCO C51 received amazing price drop on amazon. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+