ಅಗ್ಗದ ಬೆಲೆಗೆ ಎಂಟ್ರಿ ಕೊಟ್ಟೆ ಬಿಡ್ತು ಪೊಕೊ C51 ಫೋನ್!..ಬೊಂಬಾಟ್ ಫೀಚರ್ಸ್!
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಪೊಕೊ ಬ್ರ್ಯಾಂಡ್ ಈಗಾಗಲೇ ಕೆಲವು ಮಾಡೆಲ್ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಪೊಕೊ ಈಗ ದೇಶಿಯ ಮಾರುಕಟ್ಟೆಗೆ ಹೊಸದಾಗಿ ಪೊಕೊ C51 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಭರ್ಜರಿ ಫೀಚರ್ಸ್ ಹೊಂದಿದೆ.
ಹೌದು, ಪೊಕೊ ಕಂಪೆನಿ ತನ್ನ ಬಹುನಿರೀಕ್ಷಿತ ಪೊಕೊ C51 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿದ್ದು, ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಒಳಗೊಂಡಿದೆ.

ಪೊಕೊ C51 ಸ್ಮಾರ್ಟ್‌ಫೋನ್ 4 GB ಸಾಮರ್ಥ್ಯದ ಆಂತರೀಕ RAM ಹೊಂದಿದ್ದರೂ, ಸುಮಾರು 7 GB ವರೆಗೆ ವರ್ಚುವಲ್ RAM ಸಪೋರ್ಟ್ ಲಭ್ಯವಾಗಲಿದೆ ಎಂದು ಸಂಸ್ಥೆಯು ಹೇಳಿದೆ. ಇನ್ನು ಈ ಫೋನ್ ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ. ಇನ್ನುಳಿದಂತೆ ಪೊಕೊ C51 ಫೋನ್ ಯಾವೆಲ್ಲಾ ಫೀಚರ್ಸ್ ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಪೊಕೊ C51 ಡಿಸ್‌ಪ್ಲೇ : ಪೊಕೊ C51 ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 6.52 ಇಂಚಿನ ಎಲ್‌ಸಿಡಿ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ವಾಟರ್ ಸ್ಟೈಲ್ ನಾಚ್ ರಚನೆಯ ಈ ಡಿಸ್‌ಪ್ಲೇಯು 269 ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ.

ಪೊಕೊ C51 ಪ್ರೊಸೆಸರ್ ಕಾರ್ಯ : ಪೊಕೊ C51 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೇಯೇ 4GB + 64 GB ಸ್ಟೋರೇಜ್ ಸಾಮರ್ಥ್ಯವನ್ನು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆ ಇದೆ.
ಪೊಕೊ C51 ಕ್ಯಾಮೆರಾ ಸೆನ್ಸಾರ್ : ಪೊಕೊ C51 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ QVGA ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಪೊಕೊ C51 ಬ್ಯಾಟರಿ ಮತ್ತು ಇತರೆ : ಪೊಕೊ C51 ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v.5, ಹಾಟ್‌ಸ್ಪಾಟ್, ವೈಫೈ, ಅನ್ನು ಬೆಂಬಲಿಸಲಿದೆ.
ಪೊಕೊ C51 ಬೆಲೆ ಮತ್ತು ಲಭ್ಯತೆ : ಪೊಕೊ C51 ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್ ಬೆಲೆಯು 9,999ರೂ. ಆಗಿದ್ದು, ಆರಂಭಿಕ ಕೊಡುಗೆಯಾಗಿ 7,799ರೂ. ಪ್ರೈಸ್‌ಟ್ಯಾಗ್ ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಇದೇ ಏಪ್ರಿಲ್ 10 ರಿಂದ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ.


Click it and Unblock the Notifications








