Home
ಸುದ್ದಿಜಾಲ

ಪೊಕೊ ಸಂಸ್ಥೆಯ ಈ ಅಗ್ಗದ ಮೊಬೈಲ್‌ ಈಗ ಇನ್ನಷ್ಟು ಅಗ್ಗ!..ಬಿಗ್ ಬ್ಯಾಟರಿ!

ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ರಮುಖ ಫೋನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಆಗಿ ಕಾಣಿಸಿಕೊಂಡಿರುವ ಪೊಕೊ ಸಂಸ್ಥೆಯು ಭಿನ್ನ ರೇಂಜ್‌ನ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಸಂಸ್ಥೆಯ ಪೊಕೊ C55 ಮೊಬೈಲ್‌ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಆದರೆ ಇದೀಗ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆ ಇಳಿಕೆಯಿಂದ ಮತ್ತಷ್ಟು ಸಸ್ತಾ ಬೆಲೆಗೆ ಖರೀದಿಗೆ ಲಭ್ಯ.

ಹೌದು, ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ನಲ್ಲಿ ಪೊಕೊ C55 ಮೊಬೈಲ್‌ ಶೇ. 46% ರಷ್ಟು ನೇರ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರು ಈ ಫೋನಿನ 6 GB RAM + 128 GB ವೇರಿಯಂಟ್‌ ಮೊಬೈಲ್‌ ಅನ್ನು 7,499ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಅಲ್ಲದೇ ಇದರೊಂದಿಗೆ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ರಿಯಾಯಿತಿ ಪಡೆದುಕೊಂಡರೆ, ಮತ್ತಷ್ಟು ಸಸ್ತಾ ದರದಲ್ಲಿ ದೊರೆಯುತ್ತದೆ.

ಪೊಕೊ ಸಂಸ್ಥೆಯ ಈ ಅಗ್ಗದ ಮೊಬೈಲ್‌ ಈಗ ಇನ್ನಷ್ಟು ಅಗ್ಗ!..ಬಿಗ್ ಬ್ಯಾಟರಿ!

ಅಂದಹಾಗೆ ಎಂಟ್ರಿ ಲೆವೆಲ್ ಮಾದರಿಯಲ್ಲಿ ಇರುವ ಈ ಫೋನ್‌ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮೊದಲ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇನ್ನುಳಿದಂತೆ ಪೊಕೊ C55 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೊಕೊ C55 ಫೋನಿನ ಫೀಚರ್ಸ್‌ ಹೀಗಿವೆ

ಪೊಕೊ C55 ಫೋನ್‌ 6.71 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 720 x 1650 ಪಿಕ್ಸೆಲ್ ರೆಸಲ್ಯೂಶನ್ ಪಡೆದುಕೊಂಡಿದೆ. ಇದರ ಜೊತೆಗೆ 120Hz ಟಚ್‌ ಸ್ಯಾಂಪಲಿಂಗ್‌ ರೇಟ್‌ ಸಪೋರ್ಟ್‌ ಇದ್ದು, ಪಾಂಡಾ ಗ್ಲಾಸ್‌ ಲೇಯರ್‌ ಮೂಲಕ ಹೆಚ್ಚಿನ ರಕ್ಷಣೆ ನೀಡುತ್ತದೆ.

ಪೊಕೊ ಸಂಸ್ಥೆಯ ಈ ಅಗ್ಗದ ಮೊಬೈಲ್‌ ಈಗ ಇನ್ನಷ್ಟು ಅಗ್ಗ!..ಬಿಗ್ ಬ್ಯಾಟರಿ!

ಪೊಕೊದ ಈ ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದ್ದು, ಇದರೊಂದಿಗೆ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಸಪೋರ್ಟ್‌ ಕೂಡಾ ಪಡೆದಿದೆ. ಹಾಗೆಯೇ 6GB RAM ಹಾಗೂ 4GB RAM ಜೊತೆಗೆ 64GB ಹಾಗೂ 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜತೆಗೆ RAM ಅನ್ನು 11GB ವರೆಗೆ ವಿಸ್ತರಿಸಬಹುದಾದ ಆಯ್ಕೆ ಕೂಡಾ ಇದೆ.

ಈ ಫೋನಿನ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, 50 ಮೆಗಾ ಪಿಕ್ಸೆಲ್‌ ಮುಖ್ಯ ಸೆನ್ಸರ್‌ f/1.8 ಅನ್ನು ಒಳಗೊಂಡಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಡೆಪ್ತ್ ಸೆನ್ಸಾರ್‌ನ f/2.4 ಅನ್ನು ಪಡೆದಿದೆ. ಇದರ ಜೊತೆಗೆ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಪೊಕೊ ಸಂಸ್ಥೆಯ ಈ ಅಗ್ಗದ ಮೊಬೈಲ್‌ ಈಗ ಇನ್ನಷ್ಟು ಅಗ್ಗ!..ಬಿಗ್ ಬ್ಯಾಟರಿ!

ಅಲ್ಲದೇ ಪೊಕೊ C55 ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಬೆಂಬಲ ಕೂಡಾ ಪಡೆದಿದೆ. ಇನ್ನುಳಿದಂತೆ ಈ ಮೊಬೈಲ್‌ ರಿಯರ್‌ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಸೌಲಭ್ಯ ಪಡೆದಿದ್ದು, IP52 ರೇಟಿಂಗ್‌ನೊಂದಿಗೆ ಇದು ಧೂಳು ಮತ್ತು ಸ್ಪ್ಲಾಶ್ ನಿರೋಧಕವಾಗಿದೆ.

ಇನ್ನು ಪೊಕೊ C55 ಮೊಬೈಲ್‌ 4GB + 64GB ವೇರಿಯಂಟ್‌ ಹಾಗೂ 6GB + 128GB ವೇರಿಯಂಟ್‌ನ ಆಯ್ಕೆಯಲ್ಲಿ ಖರೀದಿಸಬಹುದು. ಇನ್ನು ಈ ಫೋನ್ ಫಾರೆಸ್ಟ್ ಗ್ರೀನ್, ಪವರ್ ಬ್ಲಾಕ್ ಮತ್ತು ಕೂಲ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
Poco C55 mobile price down in flipkart. offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+