ಭಾರತದಲ್ಲಿ POCO C55 ಲಾಂಚ್; ಬೆಲೆ 9,499ರೂ. ಅಷ್ಟೇ!
ಪೊಕೊ ಸಂಸ್ಥೆಯ ಫೋನ್‌ಗಳು ಇಂದು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿವೆ. ಇಂದಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇತರೆ ಬ್ರ್ಯಾಂಡ್‌ಗಳಿಗೆ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿರುವ ಪೊಕೊ ಇದೀಗ ಮಾರುಕಟ್ಟೆಯಲ್ಲಿ ಪೊಕೊ C55 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ಮಾರುಕಟ್ಟೆಯಲ್ಲಿ ದೂಳೆಬ್ಬಿಸುವುದಂತೂ ಪಕ್ಕಾ.

ಹೌದು, ಕೈಗೆಟಕುವ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ವಿಭಾಗಕ್ಕೆ ಈಗ ಹೊಸದಾಗಿ ಪೊಕೊ C55 (POCO C55) ಸ್ಮಾರ್ಟ್‌ಫೋನ್ ಸೇರಿಕೊಳ್ಳಲಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 120Hz ಟಚ್ ಸ್ಯಾಂಪಲಿಂಗ್ ರೇಟ್ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್ ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಪೊಕೊ C55 ಫೋನ್ ಡಿಸ್‌ಪ್ಲೇ ಮಾಹಿತಿ
ಪೊಕೊ C55 ಸ್ಮಾರ್ಟ್‌ಫೋನ್ 6.71 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, ಇದು 720x1650 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಜೊತೆಗೆ 120Hz ಟಚ್ ಸ್ಯಾಂಪಲಿಂಗ್ ರೇಟ್ ಬೆಂಬಲಿದ್ದು, ಪಾಂಡಾ ಗ್ಲಾಸ್ ಲೇಯರ್ ಮೂಲಕ ಹೆಚ್ಚಿನ ರಕ್ಷಣೆ ನೀಡಲಾಗಿದೆ.
ಪೊಕೊ C55 ಫೋನ್ ಪ್ರೊಸೆಸರ್ ಯಾವುದು?
ಪೊಕೊ C55 ಫೋನ್ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಕಂಪೆನಿಯ ಸ್ವಂತ MIUI 13 ಲೇಯರ್‌ನೊಂದಿಗೆ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗಲಿದೆ. ಅದರಂತೆ 6GB RAM ನೊಂದಿಗೆ 64GB ಹಾಗೂ 4GB ಯೊಂದಿಗೆ 64GB ಹಾಗೂ 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆ ಸಹ ನೀಡಲಾಗಿದ್ದು, ಜೊತೆಗೆ RAM ಅನ್ನು 11GB ವರೆಗೆ ವಿಸ್ತರಿಸಬಹುದಾದ ಆಯ್ಕೆ ಸಹ ನೀಡಲಾಗಿದೆ.

ಪೊಕೊ C55 ಫೋನ್ ಕ್ಯಾಮೆರಾ ರಚನೆ
ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50MP ಪ್ರಾಥಮಿಕ ಸೆನ್ಸರ್ f/1.8 ನೊಂದಿಗೆ ಕಂಡುಬಂದರೆ 2MP ಡೆಪ್ತ್ ಕ್ಯಾಮೆರಾವನ್ನು f/2.4 ಹೊಂದಿದೆ. ಹಾಗೆಯೇ 5MP ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಈ ಫೋನ್ ಪಡೆದುಕೊಂಡಿದೆ.
ಪೊಕೊ C55 ಫೋನ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ
ಪೊಕೊ C55 ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು,10W ಚಾರ್ಜಿಂಗ್ ಬೆಂಬಲ ಇದರಲ್ಲಿದೆ. ಇನ್ನುಳಿದಂತೆ ಈ ಫೋನ್ ರಿಯರ್ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಹೊಂದಿದ್ದು, IP52 ರೇಟಿಂಗ್‌ನೊಂದಿಗೆ ಇದು ಧೂಳು ಮತ್ತು ಸ್ಪ್ಲಾಶ್ ನಿರೋಧಕವಾಗಿದೆ.
ಪೊಕೊ C55 ಫೋನ್ ಬೆಲೆ ಹಾಗೂ ಲಭ್ಯತೆ
ಪೊಕೊ C55 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ನಲ್ಲಿ ಕಂಡುಬರುತ್ತಿದ್ದು, 4GB+64GB ವೇರಿಯಂಟ್‌ಗೆ 9,499 ರೂ. ಹಾಗೂ 6GB+128GB ವೇರಿಯಂಟ್‌ನ ಸ್ಮಾರ್ಟ್‌ಫೋನ್‌ಗೆ 10,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಅಂತೆಯೇ ಈ ಫೋನ್ ಫಾರೆಸ್ಟ್ ಗ್ರೀನ್, ಪವರ್ ಬ್ಲಾಕ್ ಮತ್ತು ಕೂಲ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದ್ದು, ನೀವು ಫೆಬ್ರವರಿ 28 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಬಹುದಾಗಿದೆ.

ಪೊಕೊ C55 ಫೋನ್ ಮಾರಾಟದಲ್ಲಿ ಆಫರ್ ಇದೆಯಾ?
ಮೊದಲ ದಿನದ ಮಾರಾಟದಲ್ಲಿ 500 ರೂಪಾಯಿಗಳ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಈ ಕೊಡುಗೆ HDFC ಬ್ಯಾಂಕ್ ಕಾರ್ಡ್‌ಗಳು, SBI ಬ್ಯಾಂಕ್ ಕಾರ್ಡ್‌ಗಳು ಮತ್ತು ICICI ಬ್ಯಾಂಕ್ ಕಾರ್ಡ್‌ಗಳಲ್ಲಿ ಲಭ್ಯ. ಈ ರಿಯಾಯಿತಿಯೊಂದಿಗೆ, ಪೊಕೊ C55 ಫೋನ್ ಅನ್ನು ನೀವು ಮೊದಲ ದಿನದಂದು 8,499 ಮತ್ತು ರೂ 9,999 ರೂ. ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








