ನಾಳೆ ಮಾರುಕಟ್ಟೆಗೆ ಬರಲಿದೆ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್!..ರಿಂಗ್ ಡಿಸೈನ್ ಇದೆ!
ಪೊಕೊ ಮೊಬೈಲ್ ಕಂಪನಿಯ ಪೊಕೊ C61 ಮೊಬೈಲ್ ನಾಳೆ (ಮಾರ್ಚ್ 26 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈಗಾಗಲೇ ಲೀಕ್ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ ಈ ಮೊಬೈಲ್ ಹಿಂಬದಿಯಲ್ಲಿ ರೇಡಿಯಂಟ್ ರಿಂಗ್ ಡಿಸೈನ್ ಅನ್ನು ಒಳಗೊಂಡಿರುವುದು ಖಚಿತ ಆಗಿದೆ.
ಹೌದು, ಪೊಕೊ ಕಂಪನಿಯು ಪೊಕೊ C61 ಸ್ಮಾರ್ಟ್‌ಫೋನ್ ಅನ್ನು ನಾಳೆ ಭಾರತೀಯ ಮಾರುಕಟ್ಟೆಗೆ ಬಿಡುಡಗೆ ಮಾಡಲಿದೆ. ಇದು ಅಗ್ಗದ ಬೆಲೆಯ ಮೊಬೈಲ್ ಎನಿಸಿದ್ದರೂ, ಕೆಲವೊಂದು ಆಕರ್ಷಕ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಇದು 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ.

ಪೊಕೊ C61 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೌಲಭ್ಯ ಪಡೆದಿರಲಿದ್ದು, ಮೀಡಿಯಾ ಟೆಕ್ ಹಿಲಿಯೋ G36 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿರಲಿದೆ. ಇದಲ್ಲದೇ ಈ ಫೋನ್ ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಪಡೆದಿರಲಿದೆ. ಇನ್ನುಳಿದಂತೆ ಪೊಕೊ C61 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಪೊಕೊ C61 ನಿರೀಕ್ಷಿತ ಫೀಚರ್ಸ್
ಪೊಕೊ C61 ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಜೊತೆಗೆ ಬರಲಿದೆ. ಈ ಡಿಸ್‌ಪ್ಲೇಯು 720 x 1650 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಡಿಸ್‌ಪ್ಲೇ 90 Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರಲಿದ್ದು, ಹಾಗೆಯೇ 88.9% 20:9 ರಚನೆಯ ಅನುಪಾತವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಬರಲಿರುವ ಪೊಕೊದ ಈ ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G36 ಚಿಪ್‌ಸೆಟ್ ಪ್ರೊಸೆಸರ್ ಪವರ್ ಅನ್ನು ಹೊಂದಿರಲಿದ್ದು, ಆಂಡ್ರಾಯ್ಡ್ 14 ಓಎಸ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳು ಇವೆ. ಹಾಗೆಯೇ 4 GB RAM + 128 GB ಆಂತರೀಕ ಸ್ಟೋರೇಜ್ ಅಯ್ಕೆಯಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಇರಲಿದೆ.
ಹಾಗೆಯೇ ಪೊಕೊ C61 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿರುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಇರಲಿದೆ. ದ್ವಿತೀಯ ಕ್ಯಾಮೆರಾ ಬೇಸಿಕ್ ಲೆನ್ಸ್ ಸೌಲಭ್ಯ ಪಡೆದಿರಲಿದೆ. ಅದೇ ರೀತಿ ಫೋನಿನ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಬಹುದು ಎಂದು ಅಂದಾಜಿಸಲಾಗಿದೆ.
ಪೊಕೊ C61 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದ್ದು, ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಒದಗಿಸುವ ನಿರೀಕ್ಷೆಗಳಿವೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಆಯ್ಕೆಗಳು ಇರಲಿವೆ ಎನ್ನಲಾಗಿದೆ. ಇದರ ಜೊತೆಗೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋಮೀಟರ್, ಕಂಪಾಸ್ ನಂತಹ ಆಯ್ಕೆಗಳು ಇರಬಹುದು.
ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಪೊಕೊ C61 ಫೋನ್ ಮಾರ್ಚ್ 26 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂದು ಪೊಕೊ ದೃಢಪಡಿಸಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ತಾಣವು ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಪ್ರಾರಂಭಿಸಿದ್ದು, ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಫೋನ್ ಲಗ್ಗೆ ಇಡಲಿದೆ ಎನ್ನುವ ಸೂಚನೆ ಇದೆ.


Click it and Unblock the Notifications








