Poco: ಪೊಕೊ C61 ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರ್ಚ್ 26 ಕ್ಕೆ ಲಾಂಚ್! ಏನೆಲ್ಲಾ ಫೀಚರ್ಸ್ ನಿರೀಕ್ಷಿಸಬಹುದು?
ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಿದ್ದು, ಈ ನಡುವೆ ಬಹುನಿರೀಕ್ಷಿತ ಪೊಕೊ (Poco) ಫೋನ್ ಲಾಂಚ್‌ಗೆ ದಿನಾಂಕ ನಿಗದಿ ಮಾಡಲಾಗಿದೆ.
ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಪೊಕೊದ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಈ ಫೋನ್ ಕಳೆದ ವರ್ಷ ದೇಶದಲ್ಲಿ ಲಾಂಚ್ ಆಗಿರುವ ಪೊಕೊ C51 ಸ್ಮಾರ್ಟ್‌ಫೋನ್‌ನ (Poco C51 smartphone) ಉತ್ತರಾಧಿಕಾರಿಯಾಗಲಿದೆ. ಹಾಗೆಯೇ ಈ ಹೊಸ ಫೋನ್ 6GB RAM ಆಯ್ಕೆ ಹೊಂದಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. ಹಾಗಿದ್ರೆ ಇದು ಯಾವಾಗ ಲಾಂಚ್ ಆಗಲಿದೆ?, ಇದರ ನಿರೀಕ್ಷಿತ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಪೊಕೊ C61 ಸ್ಮಾರ್ಟ್‌ಫೋನ್: ಪೊಕೊ ಇದೀಗ ತನ್ನ ಮುಂದಿನ ಸ್ಮಾರ್ಟ್‌ಫೋನ್ (Poco C61 smartphone) ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದರ ಪ್ರಕಾರ ಪೊಕೊ C61 ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರ್ಚ್ 26 ರಂದು ಮಧ್ಯಾಹ್ನ 12 ಕ್ಕೆ ಅನಾವರಣ ಆಗಲಿದೆ. ಕಂಪನಿಯ ಪ್ರಕಾರ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ಸೇಲ್‌ಗೆ ಲಭ್ಯವಿರುತ್ತದೆ. ಈಗಾಗಲೇ ಫ್ಲಿಪ್‌ಕಾರ್ಟ್ ಅದರ ವಿನ್ಯಾಸ ಮತ್ತು ಕೆಲವು ಫೀಚರ್ಸ್ ಅನ್ನು ಕೀಟಲೆ ಮಾಡಲು ಮೈಕ್ರೋಸೈಟ್ ಅನ್ನು ಸಹ ಕ್ರಿಯೇಟ್ ಮಾಡಿದೆ.
ಪೊಕೊ C61 ನಿರೀಕ್ಷಿತ ಫೀಚರ್ಸ್: ಈ ಸ್ಮಾರ್ಟ್‌ಫೋನ್ ಬಗ್ಗೆ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್‌ನಲ್ಲಿ ಕೆಲವು ಮಾಹಿತಿಗಳು ಲಭ್ಯ ಇವೆ. ಅವುಗಳ ಆಧಾರದಂತೆ ಈ ಮುಂಬರುವ ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆಯ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ ಎನ್ನಲಾಗಿದೆ. ಹಾಗೆಯೇ 6GB RAM ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಸುಧಾರಿತ ಬಹುಕಾರ್ಯಕಕ್ಕಾಗಿ 12GB ವರೆಗೆ ವಿಸ್ತರಿಸಬಹುದಾದ ಆಯ್ಕೆಯನ್ನೂ ಸಹ ನೀಡಲಾಗುತ್ತದಂತೆ ಅಲ್ಲದೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಕೆಲವು ಲೀಕ್ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ 6.71 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರಲಿದೆ ಎನ್ನಲಾಗಿದ್ದು, ಮೀಡಿಯಾಟೆಕ್ ಹಿಲಿಯೋ G36 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಪಡೆಯುವ ಸಾಧ್ಯತೆಯಿದೆ.
ಅಲ್ಲದೆ ಈ ಸ್ಮಾರ್ಟ್‌ಫೋನ್ ರೆಡ್ಮಿ A3 ಸ್ಮಾರ್ಟ್‌ಫೋನ್‌ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎನ್ನಲಾಗಿದೆ. ಎರಡು ಭಿನ್ನ RAM ಮತ್ತು ಇಂಟರ್ ಸ್ಟೋರೇಜ್ ವೇರಿಯಂಟ್‌ನಲ್ಲಿ ಬರಲಿದೆ ಎನ್ನಾಗಿದೆ. ಅಂದರೆ 4GB + 64GB ಮತ್ತು 6GB + 128GB ಅನ್ನು ನಿರೀಕ್ಷೆ ಮಾಡಲಾಗಿದೆ. ಬೆಲೆ ಬಗ್ಗೆ ಹೇಳುವುದಾರೆ ಈ ಫೋನ್‌ನ 4GB + 64GB ರೂಪಾಂತರವು 7,499 ರೂಗಳಲ್ಲಿ, ಮತ್ತು 6GB + 128GB ರೂಪಾಂತರವು 8,499 ರೂ.ಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

ಇನ್ನು ರೆಡ್ಮಿ A3 ಸ್ಮಾರ್ಟ್‌ಫೋನ್‌ನ 3GB + 64GB ವೇರಿಯಂಟ್ 7,299 ರೂ.ಗಳ ಬೆಲೆ ಹೊಂದಿದೆ. ಈ ಕಾರಣಕ್ಕೆ ಪೊಕೊ ಸಹ ಇದೇ ಬೆಲೆಯ ಆಸುಪಾಸಿನಲ್ಲಿ ಅಥವಾ ಇದೇ ರೀತಿಯ ವೇರಿಯಂಟ್‌ನಲ್ಲಿ ಫೋನ್ ಅನ್ನು ಲಾಂಚ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತಿದೆ. ಅದಾಗ್ಯೂ ಈ ವಿಷಯದ ಬಗ್ಗೆ ಪೊಕೊ ಈವರೆಗೂ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ. ಈ ಸಂಬಂಧ ನಿಮಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿ ಇರಿ.


Click it and Unblock the Notifications








