Home
ಸುದ್ದಿಜಾಲ

50ಎಂಪಿ ಕ್ಯಾಮೆರಾದ ಈ ಫೋನ್‌ ಬೆಲೆಯಲ್ಲಿ ಈಗ ಭಾರೀ ಡಿಸ್ಕೌಂಟ್‌!

ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಎಲ್ಲ ಮಾದರಿಯ ಫೋನ್‌ಗಳಿಗೆ ಏನಾದರೊಂದು ರಿಯಾಯಿತಿ ಲಭ್ಯ ಇರುತ್ತವೆ. ಮುಖ್ಯವಾಗಿ ಎಂಟ್ರಿ ಲೆವೆಲ್ ಫೋನ್‌ಗಳು ಆಕರ್ಷಕ ಕೊಡುಗೆಯ ಮೂಲಕ ಗಮನ ಸೆಳೆಯುತ್ತವೆ. ಸದ್ಯ ಪೊಕೊ ಸಂಸ್ಥೆಯ ಪೊಕೊ C65 ಸ್ಮಾರ್ಟ್‌ಫೋನ್‌ ಗ್ರಾಹಕರು ಹುಬ್ಬೇರಿಸುವಂತಹ ರಿಯಾಯಿತಿ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಪೊಕೊ C65 ಸ್ಮಾರ್ಟ್‌ಫೋನ್‌ ಶೇ. 31% ರಷ್ಟು ನೇರ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ನ 4 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 7,499ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಲಭ್ಯವಿರುವ ಇತರೆ ಬ್ಯಾಂಕ್‌ ರಿಯಾಯಿತಿ ಸಹ ಪಡೆದುಕೊಂಡರೆ, ಇನ್ನಷ್ಟು ಡಿಸ್ಕೌಂಟ್‌ನಲ್ಲಿ ಫೋನ್‌ ಖರೀದಿ ಮಾಡಬಹುದು.

50ಎಂಪಿ ಕ್ಯಾಮೆರಾದ ಈ ಫೋನ್‌ ಬೆಲೆಯಲ್ಲಿ ಈಗ ಭಾರೀ ಡಿಸ್ಕೌಂಟ್‌!

ಅಂದಹಾಗೆ ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇನ್ನುಳಿದಂತೆ ಪೊಕೊ C65 ಸ್ಮಾರ್ಟ್‌ಫೋನಿನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಪೊಕೊ C65 ಮೊಬೈಲ್‌ - ಫೀಚರ್ಸ್‌

ಪೊಕೊ C65 ಮೊಬೈಲ್‌ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 1650 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ 90 Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸೇರಿದಂತೆ ಡಿಸ್‌ಪ್ಲೇ ಸಂಬಂಧ ವಿವಿಧ ಅಪ್‌ಡೇಟ್‌ ಫೀಚರ್ಸ್‌ ಅನ್ನು ಈ ಫೋನ್‌ ಹೊಂದಿದೆ.

50ಎಂಪಿ ಕ್ಯಾಮೆರಾದ ಈ ಫೋನ್‌ ಬೆಲೆಯಲ್ಲಿ ಈಗ ಭಾರೀ ಡಿಸ್ಕೌಂಟ್‌!

ಈ ಫೋನ್ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿದ್ದು, ಈ ಮೂಲಕ ವಿಡಿಯೋ ಸ್ಕ್ರೀಮಿಂಗ್‌ ಮಾಡುವುದಾಗಲೀ ಅಥವಾ ಗೇಮಿಂಗ್‌ ಆಡುವಾಗ ಆಗಲಿ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದರೊಂದಿಗೆ ಮಾಲಿ G52 MC2 GPU ಗ್ರಾಫಿಕ್ಸ್ ಕಾರ್ಡ್ ಆಯ್ಕೆ ನೀಡಲಾಗಿದೆ. ಹಾಗೆಯೇ ಈ ಫೋನ್ MIUI 14 ಆಧಾರಿತ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್ ಅನ್ನು ಪಡೆದಿದೆ.

ಇನ್ನು ಈ ಫೋನ್ 4GB RAM + 128GB ಆಂತರೀಕ ಸ್ಟೋರೇಜ್‌ ಆಯ್ಕೆ ಹಾಗೂ 6GB RAM + 128GB ಆಂತರೀಕ ಸ್ಟೋರೇಜ್ ಆಯ್ಕೆ ಮೆಮೊರಿ ಹಾಗೂ 8GB RAM + 256GB ಆಂತರೀಕ ಸ್ಟೋರೇಜ್ ಆಯ್ಕೆಯ ಮೂರು ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ.

ಪೊಕೊ ಸಂಸ್ಥೆಯ ಈ ಫೋನ್ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌ ಆಗಿದ್ದು, ಉಳಿದಂತೆ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ + ಎಐ ಲೆನ್ಸ್‌ನೊಂದಿಗೆ ಆಯ್ಕೆ ಪಡೆದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಪೊಕೊ C65 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿದ್ದು, 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್‌ 4G LTE, ಡ್ಯುಯಲ್-ಬ್ಯಾಂಡ್ ವೈ ಫೈ, ಬ್ಲೂಟೂತ್, ಜಿಪಿಎಸ್‌, ಯುಎಸ್‌ಬಿ ಟೈಪ್- ಸಿ ಪೋರ್ಟ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಸಪೋರ್ಟ್‌ ಒಳಗೊಂಡಿದೆ. ಇನ್ನು ಈ ಫೋನ್ ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಖರೀದಿಗೆ ಲಭ್ಯ ಇವೆ.

Best Mobiles in India

English summary
POCO C65 Available at Great Price Drop in Flipkart website India. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+