Home
ಸುದ್ದಿಜಾಲ

Poco: ಕೊನೆಗೂ ಭಾರತಕ್ಕೆ ಲಗ್ಗೆ ಇಟ್ಟ ಅಗ್ಗದ ಬೆಲೆಯ ಈ ಪೊಕೊ ಫೋನ್‌: 50MP ಕ್ಯಾಮೆರಾ.. ದೊಡ್ಡ ಡಿಸ್‌ಪ್ಲೇ

ಪೊಕೊ (Poco) ಫೋನ್‌ಗಳಿಗೆ ಇತರೆ ಫೋನ್‌ಗಳಂತೆ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಯಾಕೆಂದರೆ ಈ ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಅನ್ನು ನೀಡಲಿದ್ದು, ಇದರೊಂದಿಗೆ ಈಗ ಲಾಂಚ್‌ ಆಗುವ ಮುನ್ನವೇ ಭಾರೀ ಸದ್ದು ಮಾಡಿದ್ದ ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಲಾಗಿದೆ.

ಹೌದು, ಪೊಕೊ ಇದೀಗ ಪೊಕೊ C65 ಸ್ಮಾರ್ಟ್‌ಫೋನ್‌ (Poco C65 smartphone) ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಚಿಪ್‌ಸೆಟ್ ಹಾಗೂ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಸೇರಿದಂತೆ ಇನ್ನೂ ಅನೇಕ ವಿಶೇಷ ಫೀಚರ್ಸ್‌ನೊಂದಿಗೆ ಈ ಫೋನ್‌ ಕಾಣಿಸಿಕೊಂಡಿದೆ. ಹಾಗಿದ್ರೆ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕೊನೆಗೂ ಭಾರತಕ್ಕೆ ಲಗ್ಗೆ ಇಟ್ಟ ಅಗ್ಗದ ಬೆಲೆಯ ಈ ಪೊಕೊ ಫೋನ್‌: 50MP ಕ್ಯಾಮೆರಾ..

ಪೊಕೊ C65 ಡಿಸ್ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1650 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಜೊತೆಗೆ 90 Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸೇರಿದಂತೆ ಡಿಸ್‌ಪ್ಲೇ ಸಂಬಂಧ ವಿವಿಧ ಸುಧಾರಿತ ಫೀಚರ್ಸ್‌ ಅನ್ನು ಈ ಫೋನ್‌ ಹೊಂದಿದೆ. ಅಷ್ಟೇ ಅಲ್ಲದೆ ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ದೊಡ್ಡ ಡಿಸ್‌ಪ್ಲೇ ಆಯ್ಕೆಯ ಫೋನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಪೊಕೊ C65 ಪ್ರೊಸೆಸರ್‌ ಮಾಹಿತಿ: ಇನ್ನು ಈ ಫೋನ್ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿದ್ದು, ಈ ಮೂಲಕ ವಿಡಿಯೋ ಸ್ಕ್ರೀಮಿಂಗ್‌ ಮಾಡುವುದಾಗಲೀ ಅಥವಾ ಗೇಮಿಂಗ್‌ ಆಡುವಾಗ ಆಗಲಿ ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಮಾಲಿ G52 MC2 GPU ಗ್ರಾಫಿಕ್ಸ್ ಕಾರ್ಡ್ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ MIUI 14 ಆಧಾರಿತ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್‌ ಮಾಡಲಿದೆ.

ಕೊನೆಗೂ ಭಾರತಕ್ಕೆ ಲಗ್ಗೆ ಇಟ್ಟ ಅಗ್ಗದ ಬೆಲೆಯ ಈ ಪೊಕೊ ಫೋನ್‌: 50MP ಕ್ಯಾಮೆರಾ..

ಇದರ ಜೊತೆಗೆ ಈ ಫೋನ್‌ ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಸ್ವೀಕರಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಫೋನ್ 4GB RAM + 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಮತ್ತು 6GB RAM + 128GB ಇಂಟರ್‌ ಸ್ಟೋರೇಜ್ ಆಯ್ಕೆ ಮೆಮೊರಿ ಹಾಗೂ 8GB RAM + 256GB ಇಂಟರ್‌ ಸ್ಟೋರೇಜ್ ಆಯ್ಕೆಯ ಮೂರು ಮೂರು ವೇರಿಯಂಟ್‌ನಲ್ಲಿ ನಿಮಗೆ ಲಭ್ಯ ಇದೆ. ಹೆಚ್ಚಿನ ಸ್ಟೋರೇಜ್‌ ಬೇಕು ಎಂದರೆ ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಳ್ಳಬಹುದು.

ಪೊಕೊ C65 ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌ + 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ + ಎಐ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಮೂಲಕ ಯಾರೆಲ್ಲಾ ಕ್ಯಾಮೆರಾ ಪ್ರಿಯರಿದ್ದಾರೋ ಅವರು ಈ ಬೆಲೆಗೆ ಈ ಫೋನ್‌ ಅನ್ನು ಕಣ್ಣು ಮುಚ್ಚಿಕೊಂಡು ಖರೀದಿ ಮಾಡಬಹುದಾಗಿದೆ.

ಪೊಕೊ C65 ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಕಾಣಿಸಿಕೊಂಡಿದ್ದು, 18 ವ್ಯಾಟ್ಸ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್‌ 4G LTE, ಡ್ಯುಯಲ್-ಬ್ಯಾಂಡ್ ವೈ ಫೈ, ಬ್ಲೂಟೂತ್, ಜಿಪಿಎಸ್‌, ಯುಎಸ್‌ಬಿ ಟೈಪ್- ಸಿ ಪೋರ್ಟ್ ಸೇರಿದಂತೆ ವಿವಿಧ ಸಂಪರ್ಕ ಬೆಂಬಲವನ್ನು ಇದು ಪಡೆದಿದೆ ಹಾಗ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್‌ನೊಂದಿಗೆ ಪ್ರೀಮಿಯಂ ಅನುಭವ ನೀಡಲಿದೆ.

ಕೊನೆಗೂ ಭಾರತಕ್ಕೆ ಲಗ್ಗೆ ಇಟ್ಟ ಅಗ್ಗದ ಬೆಲೆಯ ಈ ಪೊಕೊ ಫೋನ್‌: 50MP ಕ್ಯಾಮೆರಾ..

ಪೊಕೊ C65 ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ ಬೆಲೆ ವಿಚಾರಕ್ಕೆ ಬರುವುದಾದರೆ 4GB RAM + 128GB ಸ್ಟೋರೇಜ್ ನ ಫೋನ್‌ಗೆ 8,499 ರೂ., 6GB RAM + 128GB ಸ್ಟೋರೇಜ್ ಫೋನ್‌ಗೆ 9,499 ರೂ.ಗಳು ಮತ್ತು 8GB RAM + 256GB ಸ್ಟೋರೇಜ್ ಫೋನ್‌ಗೆ 10,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ಅನ್ನು ಡಿಸೆಂಬರ್ 18 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್‌ ಮಾಡಲಾಗುತ್ತದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಖರೀದಿ ಮಾಡಿದ್ರೆ 1000ರೂ ಗಳ ರಿಯಾಯಿತಿ ಸಹ ಲಭ್ಯ. ಇನ್ನು ಈ ಫೋನ್ ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ ಇರಲಿವೆ.

Best Mobiles in India

English summary
Poco has just unveiled the Poco C65 smartphone. This smartphone comes with many more special features including MediaTek chipset and 5000mAh capacity battery option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+