Home
ಸುದ್ದಿಜಾಲ

ನಾಳೆ ಪೊಕೊ C75 5G ಸೇಲ್‌ ಪ್ರಾರಂಭ!..ಬೆಲೆ ಜಸ್ಟ್‌ 7,999ರೂ.!..1TB ಸ್ಟೋರೇಜ್‌!

ಪೊಕೊ ಕಂಪನಿಯು ಇತ್ತೀಚಿಗೆ ಹೊಸದಾಗಿ ಭಾರತದಲ್ಲಿ ಬಿಡುಗಡೆ ಮಾಡಿರುವ ಪೊಕೊ C75 5G (Poco C75 5G) ಫೋನ್‌ ಈಗಾಗಲೇ ಬೆಲೆ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಮೊಬೈಲ್‌ ನಾಳೆ (ಡಿಸೆಂಬರ್‌ 19 ರಂದು) ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನಿನ ಆರಂಭಿಕ ಕೊಡುಗೆಯ ಬೆಲೆ 7,999ರೂ. ಆಗಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಆಗಿದೆ.

ಹೌದು, ಪೊಕೊ ಸಂಸ್ಥೆಯ ಇತ್ತೀಚಿನ ಪೊಕೊ C75 5G ( Poco C75 5G ) ಫೋನಿನ ಮಾರಾಟ ನಾಳೆ (ಡಿ 19) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಶುರು ಆಗಲಿದೆ. ಈ ಫೋನ್‌ 4 GB RAM ಮತ್ತು 64 GB ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದರ ಜೊತೆಗೆ 5160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದುಕೊಂಡಿದೆ.

ನಾಳೆ ಪೊಕೊ C75 5G ಸೇಲ್‌ ಪ್ರಾರಂಭ!..ಬೆಲೆ ಜಸ್ಟ್‌ 7,999ರೂ.!..1TB ಸ್ಟೋರೇಜ್‌

ಪೊಕೊ C75 5G (Poco C75 5G) ಫೋನ್‌ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇದು ಅಕ್ವಾ ಬ್ಲಿಸ್‌, ಸಿಲ್ವರ್ ಹಾಗೂ ಗ್ರೀನ್‌ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಪೊಕೊ C75 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೊಕೊ C75 5G ಫೋನಿನ ಫೀಚರ್ಸ್‌ ಹೀಗಿವೆ

ಪೊಕೊ C75 5G ಫೋನ್‌ 6.68 ಇಂಚಿನ ಡಿಸ್‌ಪ್ಲೇ ಅನ್ನು ಇದು ಪಡೆದಿದ್ದು, ಇದು ಹೆಚ್‌ಡಿ ಪ್ಲಸ್ ವಾಟರ್‌ಡ್ರಾಪ್ LCD ಡಿಸ್‌ಪ್ಲೇ ಆಗಿದೆ. ಹಾಗೆಯೇ ಡಿಸ್‌ಪ್ಲೇಯು 120 Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 600 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಹೊಸ ಪೊಕೊ C75 5G ಫೋನ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಅಲ್ಲದೇ ಆಂಡ್ರಾಯ್ಡ್ 16 ಅಪ್‌ಡೇಟ್‌ ಬೆಂಬಲ ಕೂಡಾ ಬೆಂಬಲ ಇದು ಪಡೆದುಕೊಂಡಿದೆ. ಇದು 4 GB RAM + 64 GB ಸ್ಟೋರೇಜ್‌ ಸಪೋರ್ಟ್‌ ಪಡೆದಿದ್ದು, ಇದರೊಂದಿಗೆ 4GB RAM ಬೂಸ್ಟ್ ತಂತ್ರಜ್ಞಾನ ಲಭ್ಯವಿದೆ.

ಪೊಕೊ C75 5G ಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಈ ಫೋನಿನ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಸೆಕೆಂಡರಿ 2ಎಂಪಿ ಸೆನ್ಸಾರ್‌ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ.

ಪೊಕೊ C75 5G ಫೋನ್‌ 5000 mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP 52 ರೇಟಿಂಗ್ ಪಡೆದಿದೆ. ಇದು ಸೈಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ. ಜೊತೆಗೆ 3.5 ಎಂಎಂ ಆಡಿಯೊ ಜಾಕ್, ವೈಫೈ, ಬ್ಲೂಟೂತ್ V5, ಡ್ಯುಯಲ್ ಸಿಮ್ ಬೆಂಬಲ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ.

Best Mobiles in India

English summary
Poco C75 5G Goes on Sale December 19 at 12 PM: Offer, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+