ಇಂದು ಪೊಕೊ C75 5G ಫಸ್ಟ್ ಸೇಲ್!..ಭರ್ಜರಿ ಆಫರ್ ಇದೆ, ಗ್ರಾಹಕರಿಗೆ ಉಳಿತಾಯ!
ಪೊಕೊ ಕಂಪನಿಯ ಪೊಕೊ C75 5G (Poco C75 5G) ಫೋನ್ ಅಗ್ಗದ ಪ್ರೈಸ್‌ಟ್ಯಾಗ್‌ನಿಂದ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಈ ಮೊಬೈಲ್ ಇಂದು (ಡಿಸೆಂಬರ್ 19 ರಂದು) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದ ಮೂಲಕ ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನಿನ ಆರಂಭಿಕ ಕೊಡುಗೆಯ ಬೆಲೆ 7,999ರೂ. ಆಗಿದೆ. ಇನ್ನು ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ.
ಹೌದು, ಪೊಕೊ ಕಂಫನಿಯ ಇತ್ತೀಚಿನ ಪೊಕೊ C75 5G ( Poco C75 5G ) ಫೋನಿನ ಮಾರಾಟ ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ತಾಣದಲ್ಲಿ ಶುರು ಆಗಲಿದೆ. ಈ ಮೊಬೈಲ್‌ನ 4 GB RAM ಮತ್ತು 64 GB ವೇರಿಯಂಟ್ ಆಯ್ಕೆ ಪಡೆದಿದ್ದು, ಇದರ ಜೊತೆಗೆ 5160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದುಕೊಂಡಿದೆ.

ಪೊಕೊ C75 5G (Poco C75 5G) ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಅಲ್ಲದೇ ಇದು ಅಕ್ವಾ ಬ್ಲಿಸ್, ಸಿಲ್ವರ್ ಹಾಗೂ ಗ್ರೀನ್ ಕಲರ್ ಆಯ್ಕೆ ಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಪೊಕೊ C75 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೊಕೊ C75 5G - ಫೀಚರ್ಸ್ ಹೀಗಿವೆ
ಪೊಕೊ C75 5G ಮೊಬೈಲ್ 6.68 ಇಂಚಿನ ಡಿಸ್‌ಪ್ಲೇ ಅನ್ನು ಇದು ಪಡೆದಿದ್ದು, ಇದು ಹೆಚ್‌ಡಿ ಪ್ಲಸ್ ವಾಟರ್‌ಡ್ರಾಪ್ LCD ಡಿಸ್‌ಪ್ಲೇ ಆಗಿದೆ. ಹಾಗೆಯೇ ಡಿಸ್‌ಪ್ಲೇಯು 120 Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 600 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಹೊಸ ಪೊಕೊ C75 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಅಲ್ಲದೇ ಆಂಡ್ರಾಯ್ಡ್ 16 ಅಪ್‌ಡೇಟ್ ಬೆಂಬಲ ಕೂಡಾ ಬೆಂಬಲ ಇದು ಪಡೆದುಕೊಂಡಿದೆ. ಇದು 4 GB RAM + 64 GB ಸ್ಟೋರೇಜ್ ಸಪೋರ್ಟ್ ಪಡೆದಿದ್ದು, ಇದರೊಂದಿಗೆ 4GB RAM ಬೂಸ್ಟ್ ತಂತ್ರಜ್ಞಾನ ಲಭ್ಯವಿದೆ.
ಪೊಕೊ C75 5G ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಈ ಫೋನಿನ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಸೆಕೆಂಡರಿ 2 ಎಂಪಿ ಸೆನ್ಸಾರ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ.
ಪೊಕೊ C75 5G ಫೋನ್ 5000 mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP 52 ರೇಟಿಂಗ್ ಪಡೆದಿದೆ. ಇದು ಸೈಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ. ಜೊತೆಗೆ 3.5 ಎಂಎಂ ಆಡಿಯೊ ಜಾಕ್, ವೈಫೈ, ಬ್ಲೂಟೂತ್ V5, ಡ್ಯುಯಲ್ ಸಿಮ್ ಬೆಂಬಲ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ.


Click it and Unblock the Notifications








