ಡಿಸೆಂಬರ್ 17 ರಂದು ಅತೀ ಕಡಿಮೆ ಬೆಲೆಗೆ ಈ ಫೋನ್ ಲಾಂಚ್; 1TB ಸ್ಟೋರೇಜ್!
ಪೊಕೊ ಮೊಬೈಲ್ ಸಂಸ್ಥೆಯ ನೂತನ ಪೊಕೊ C75 5G (POCO C75 5G) ಮೊಬೈಲ್ ಇದೇ ಡಿಸೆಂಬರ್ 17ರಂದು ಅಧಿಕೃತವಾಗಿ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಈಗಾಗಲೇ ಲೀಕ್ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ ಪೊಕೊ C75 5G (POCO C75 5G) ಫೋನ್ ಸ್ನ್ಯಾಪ್‌ಡ್ರಾಗನ್ 4s ಜೆನ್ 2 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿರುವುದು ಖಚಿತ ಎನ್ನಲಾಗಿದೆ.
ಹೌದು, ಪೊಕೊ ಕಂಪನಿಯು ಪೊಕೊ C75 5G (POCO C75 5G) ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲು ಸಜ್ಜಾಗಿದೆ. ಇದು ಅಗ್ಗದ ಬೆಲೆಯ ಫೋನ್ ಎನಿಸಿದ್ದರೂ, ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ.

ಇದೇ ರೀತಿ ಪೊಕೊ C75 5G (POCO C75 5G) ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೌಲಭ್ಯ ಪಡೆದಿರಲಿದೆ. ಹಾಗೆಯೇ ಈ ಫೋನಿನ ಇನ್ನೊಂದು ಪ್ರಮುಖ ಹೈಲೈಟ್ ಎಂದರೆ ಇದು 5160mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಲಿದೆ. ಇನ್ನುಳಿದಂತೆ ಪೊಕೊ C75 5G (POCO C75 5G) ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಪೊಕೊ C75 5G ನಿರೀಕ್ಷಿತ ಫೀಚರ್ಸ್
ಪೊಕೊ C75 5G ಮೊಬೈಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಸೌಲಭ್ಯದಲ್ಲಿ ಕಾಣಿಸಿಕೊಳ್ಳಲಿದ್ದು, ಉತ್ತಮ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಗಳು ಇವೆ. ಹಾಗೆಯೇ ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4s ಜೆನ್ 2 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯದಲ್ಲಿ ಕಾರ್ಯ ನಿರ್ವಹಿಸುವುದು ಖಚಿತ ಎನ್ನಲಾಗಿದೆ.
ಪೊಕೊ C75 5G ಮೊಬೈಲ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಜೊತೆಗೆ ಶಿಯೋಮಿ ಹೈಪರ್ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 8GB RAM ಆಯ್ಕೆ ಪಡೆದಿರಲಿದ್ದು, ಹಾಗೆಯೇ 4GB ಟರ್ಬೋ RAM ಸಪೋರ್ಟ್ ಒಳಗೊಂಡಿರಲಿದೆ. ಇದು ಎಸ್‌ಡಿ ಮೆಮೊರಿ ಕಾರ್ಡ್ ಮೂಲಕ 1TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಸೌಲಭ್ಯ ಪಡೆದಿರಲಿದೆ.
ಪೊಕೊ C75 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಇರಲಿದೆ. ಹಾಗೆಯೇ ಈ ಮೊಬೈಲ್ 5160mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರಲಿದ್ದು, ಅಲ್ಲದೇ ಸೈಡ್ ಮೌಂಟ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಪೋರ್ಟ್ ಕೂಡಾ ಒಳಗೊಂಡಿರಲಿದೆ. ಅಲ್ಲದೇ ಡ್ಯುಯಲ್ ಸಿಮ್ ಬೆಂಬಲ ಸಹ ಪಡೆದಿರಲಿದೆ.
ಭಾರತದಲ್ಲಿ ಪೊಕೊ C75 5G ಮೊಬೈಲ್ ಇದೇ ಡಿಸೆಂಬರ್ 17 ರಂದು ಬಿಡುಗಡೆ ಆಗಲಿದೆ ಎಂದು ಪೊಕೊ ದೃಢಪಡಿಸಿದೆ. ಈ ಬಗ್ಗೆ ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಸಹ ತನ್ನ ವೆಬ್‌ಸೈಟ್‌ನಲ್ಲಿರುವ ಮೈಕ್ರೋಸೈಟ್ ತೆರೆದಿದೆ.
ಹಾಗೆಯೇ ಪೊಕೊ C75 5G ಜೊತೆಗೆ ಪೊಕೊ M7 ಪ್ರೊ 5G (POCO M7 Pro 5G) ಮೊಬೈಲ್ ಕೂಡಾ ಇದೇ ಡಿಸೆಂಬರ್ 17 ರಂದು ಬಿಡುಗಡೆ ಆಗಲಿದೆ. ಇನ್ನು ಈ ಫೋನ್ 6.67 ಇಂಚಿನ ಪುಲ್ ಹೆಚ್‌ಡಿ+ ಡಿಸ್‌ಪ್ಲೇ ಪಡೆದಿರಲಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಪಡೆದಿರಲಿದ್ದು, GOLED ಸ್ಕ್ರೀನ್ ಹೊಂದಿರಲಿದೆ. ಈ ಡಿಸ್‌ಪ್ಲೇಯು 2100 nits ಗರಿಷ್ಠ ಬ್ರೈಟ್ನೆಸ್ ಪಡೆದಿರಲಿದೆ.


Click it and Unblock the Notifications








