Home
ಸುದ್ದಿಜಾಲ

ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌!

ಚೀನಾ ಮೂಲದ ಜನಪ್ರಿಯ ಶಿಯೋಮಿ ಕಂಪನಿಯ ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ ಎನಿಸಿಕೊಂಡ 'ಪೊಕೊ ಎಫ್‌ 1' ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಸಖತ್ ಮಾರಾಟ ಕಂಡಿದೆ. ಇತ್ತೀಚಿಗೆ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇಳಿಕೆ ಮಾಡಿದ್ದ ಕಂಪನಿಯು ಇದೀಗ ಮತ್ತೆ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ ಪ್ರಿಯರು 'ಪೊಕೊ ಎಫ್ 1' ಖರೀದಿಗೆ ಮುಗಿಬಿಳುವ ಟೈಮ್‌ ಇದಾಗಿದೆ.

ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌!

ಹೌದು, ಶಿಯೋಮಿಯ ಫ್ಲ್ಯಾಗ್‌ಶಿಪ್‌ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೆ ಇಳಿಕೆ ಆಗಿದೆ. 19,999ರೂ,ಗಳಿಗೆ ದೊರೆಯುತ್ತಿದ್ದ, 6GB RAM ಮತ್ತು 64GB ವೇರಿಯಂಟ್ ಮಾದರಿಯ ಈ ಸ್ಮಾರ್ಟ್‌ಫೋನಿಗ ಬೆಲೆ ಇಳಿಕೆಯಿಂದ ಕೇವಲ 17,999ರೂ.ಗಳಿಗೆ ದೊರೆಯಲಿದೆ. ಈ ಆಫರ್‌ ಇದೇ 11 ಜೂನ್ ವರೆಗೂ ಮಾತ್ರ ಲಭ್ಯವಾಗಲಿದ್ದು, ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿದೆ ಲಭ್ಯವಿರಲಿದೆ.

ಭಾರಿ ಬೆಲೆ ಇಳಿಕೆ!..'ಪೊಕೊ ಎಫ್ 1' ಖರೀದಿಗೆ ಇದುವೇ ಬೆಸ್ಟ್ ಟೈಮ್‌!

ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ ಮಲ್ಟಿಟಾಸ್ಕ್‌ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸಬಲ್ಲದು. ಮುಂದಿನ ವಾರ ಕಂಪಮನಿಯು ಬಹುನಿರೀಕ್ಷಿತ 'ಪೊಕೊ ಎಫ್‌ 2' ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಹಾಗಾದರೇ 'ಪೊಕೊ ಎಫ್‌ 1' ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್‌ ಹೇಗಿದೆ

ಡಿಸೈನ್‌ ಹೇಗಿದೆ

ಶಿಯೋಮಿಯ 'ಪೊಕೊ ಎಫ್‌1' ಸ್ಮಾರ್ಟ್‌ಫೋನ್ ಆಕರ್ಷಕ ಡಿಸೈನ್‌ ಅನ್ನು ಹೊಂದಿದ್ದು, ಇದರ ಸುತ್ತಳತೆಯು 155.50 x 75.20 x 8.80 ಆಗಿದೆ. ಹಾಗೇ ಹಗುರವಾದ ಮತ್ತು ತೆಳುವಾದ ರಚನೆಯಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ತೂಕವು 182ಗ್ರಾಂ ಆಗಿದೆ. ಬ್ಲೂ ಮತ್ತು ಗ್ರೇ ಬಣ್ಣಗಳ ಎರಡು ಆಯ್ಕೆಗಳನ್ನು ಹೊಂದಿದ್ದು, ಡಿಸ್‌ಪ್ಲೇ ಸುತ್ತಲೂ ಕಡಿಮೆ ಅಂಚಿನ ರಚನೆ ಪಡೆದುಕೊಂಡಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಕಂಪನಿಯ ಈ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್ಫೋನ್ 6.18 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1080x2246 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಫೋನಿನ ಡಿಸ್‌ಪ್ಲೇಯ ಅನುಪಾತವು 18.7:9 ರಷ್ಟಿದ್ದು, ಫೋನಿನ ಸ್ಕ್ರೀನ್‌ ರಕ್ಷಣೆಗಾಗಿ ಉತ್ತಮ ಗೊರಿಲ್ಲಾ ಗ್ಲಾಸ್‌ ನೀಡಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

2.8GHz ಆಕ್ಟಾಕೋರ್‌, ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಶಕ್ತಿಯನ್ನು ಒಳಗೊಂಡಿರುವ ಪೊಕೊ ಎಫ್‌ 1' ಸ್ಮಾರ್ಟ್‌ಫೋನ್, ಮಲ್ಟಿಟಾಸ್ಕ್‌ ಕೆಲಸಗಳನ್ನು ಸಲಿಸಾಗಿ ನಿಭಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್‌ 9 ಅಪರೇಟಿಂಗ್ ಸಿಸ್ಟಮ್ ಸಹ ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದು.

ಮೆಮೊರಿ

ಮೆಮೊರಿ

ಈ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳನ್ನು ಹೊಂದಿದ್ದು, 6GB RAM ಮತ್ತು 128GB ಆರಂಭಿಕ ವೇರಿಯಂಟ್ ಆಗಿದೆ. 6GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್ ಮತ್ತು 8GB RAM ಮತ್ತು 256GB ಟಾಪ್‌ಎಂಡ್ ವೇರಿಯಂಟ್ ಮಾದರಿಗಳಲ್ಲಿಯೂ ದೊರೆಯಲಿದೆ. ಆದರೆ 6GB RAM ಮತ್ತು 64GB ವೇರಿಯಂಟ್‌ಗೆ ಮಾತ್ರ ಈಗ ಬೆಲೆ ಇಳಿಕೆ ಆಫರ್ ಲಭ್ಯವಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್‌ ಕ್ಯಾಮೆರಾಗಳನ್ನು ಒದಗಿಸಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾಪಿಕ್ಸಲ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಸಾಮರ್ಥ್ಯದ ಉತ್ತಮ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಹಲವು ವಿಶೇಷ ಆಯ್ಕೆಗಳು ಸಹ ಇವೆ.

ಬ್ಯಾಟರಿ

ಬ್ಯಾಟರಿ

ಪೊಕೊ ಎಫ್‌ 1 ಸ್ಮಾರ್ಟ್‌ಫೋನ್‌ 4000mAh ಸಾಮರ್ಥ್ಯದ ಬಲವಾದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘ ಕಾಲದವರೆಗೂ ಬಾಳಕೆ ಒದಗಿಸುವ ಶಕ್ತಿಯನ್ನು ಪಡೆದಿದೆ. ಇದರೊಂದಿಗೆ 3.0 ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಸಹ ನೀಡಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ ಬೇಗನೇ ಚಾರ್ಜ್ ಪಡೆದುಕೊಳ್ಳಲಿದೆ.

Best Mobiles in India

English summary
company has announced another price cut for the Poco F1 base model with 6GB of RAM and 64GB of internal storage. With this price cut, it is now available for Rs. 17,999. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+