Home
ಸುದ್ದಿಜಾಲ

Poco: ಪೊಕೊದ ಈ ಫೇಮಸ್‌ ಸ್ಮಾರ್ಟ್‌ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್: 12GB RAM... ಟ್ರಿಪಲ್‌ ಕ್ಯಾಮೆರಾ!

ಸ್ಮಾರ್ಟ್‌ಫೋನ್‌ಗಳ (smartphone) ವಿಭಾಗದಲ್ಲಿ ಇತ್ತೀಚಿಗೆ ಪೊಕೊ (Poco) ಫೋನ್‌ಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ಫೋನ್‌ಗಳು ಬಜೆಟ್ ಬೆಲೆಯಿಂದ ದುಬಾರಿ ಬೆಲೆವರೆಗೂ ಲಭ್ಯ ಇದ್ದು, ಈ ಮೂಲಕ ಗ್ರಾಹಕರು ಅವರ ಅಗತ್ಯಕ್ಕೆ ತಕ್ಕಂತೆ ಈ ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಪೊಕೊದ ಈ ಫೋನ್‌ಗೆ ಭಾರೀ ಪೊಕೊದ ಈ ಫೋನ್‌ಗೆ ಭಾರೀ ಆಫರ್ ನೀಡಲಾಗಿದೆ.

ಹೌದು, ಪೊಕೊ F4 5G ಸ್ಮಾರ್ಟ್‌ಫೋನ್‌ಗೆ (Poco F4 5G) ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆಯೊಂದಿಗೆ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ಈ ಫೋನ್‌ಗೆ ಇರುವ ಆಫರ್ ಏನು?, ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪೊಕೊದ ಈ ಫೇಮಸ್‌ ಸ್ಮಾರ್ಟ್‌ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್ !

ಪೊಕೊ F4 5G ಆಫರ್ ವಿವರ: 12GB RAM ಆಯ್ಕೆಯ ಈ ಸ್ಮಾರ್ಟ್‌ಫೋನ್ ಪ್ರಮುಖ ಇ-ಕಾಮರ್ಸ್ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ (flipkart) 15% ರಿಯಾಯಿತಿಯೊಂದಿಗೆ ಕಾಣಿಸಿಕೊಂಡಿದೆ. ಅಂದರೆ ಇದರ ಸಾಮಾನ್ಯ ದರ 39,999ರೂ.ಗಳಾಗಿದ್ದು, ನೀವೀಗ ಇದನ್ನು 33,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.ಇಷ್ಟೇ ಅಲ್ಲದೆ ಬ್ಯಾಂಕ್‌ ಆಫರ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಇನ್ನು ಬ್ಯಾಂಕ್‌ ವಿಚಾರಕ್ಕೆ ಬಂದರೆ ಈ ಸ್ಮಾರ್ಟ್‌ಫೋನ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಹಾಗೂ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸೇರಿದಂತೆ ಅನೇಕ ಬ್ಯಾಂಕ್‌ ಆಫರ್ ನೀಡಲಾಗಿದೆ.

ಪೊಕೊದ ಈ ಫೇಮಸ್‌ ಸ್ಮಾರ್ಟ್‌ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್ !

ಪೊಕೊ F4 5G ಡಿಸ್‌ಪ್ಲೇ ಮಾಹಿತಿ: ಇನ್ನು ಈ ಫೋನ್‌ ಈ ಬೆಲೆಯಲ್ಲಿ ಯೋಗ್ಯವೇ ಎಂದು ತಿಳಿಯಬೇಕು ಅಂದುಕೊಂಡರೆ ಇದರ ಫೀಚರ್ಸ್‌ ಬಗ್ಗೆ ತಿಳಿಯುವುದು ಅಗತ್ಯ. ಅದರಂತೆ ಈ ಸ್ಮಾರ್ಟ್‌ಫೋನ್ 6.6 ಇಂಚಿನ ಸೂಪರ್ ಅಮೋಲೆಡ್‌ FHD+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಪಂಚ್-ಹೋಲ್ ನಾಚ್ ಶೈಲಿ ಪಡೆದುಕೊಂಡಿದೆ. ಇದರೊಂದಿಗೆ 395 PPI ನ ಪಿಕ್ಸೆಲ್ ಸಾಂದ್ರತೆಯೊಂದಿ 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹಾಗೂ120Hz ಫ್ರೇಮ್ ರೇಟ್‌ ಆಯ್ಕೆಯನ್ನು ಪಡೆದಿದೆ. ಅಷ್ಟೇ ಅಲ್ಲದೆ ಟಚ್ ಇಂಟರ್‌ಫೇಸ್‌ಗಾಗಿ 360Hz ಟಚ್ ಮಾದರಿಯನ್ನು ಹೊಂದಿದೆ.

ಪೊಕೊ F4 5G ಪ್ರೊಸೆಸರ್‌ ವಿವರ: ಇನ್ನು ಈ ವಿಶೇಷ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಇದು 3.2GHz ಗಡಿಯಾರದ ವೇಗದೊಂದಿಗೆ ವರ್ಧಿತ ಕ್ರಿಯೋ 585 ಸಿಪಿಯು ಮೂಲಕ ಪ್ಯಾಕ್‌ ಆಗಿದೆ. ಇದರೊಂದಿಗೆ ಉತ್ತಮ ಗೇಮಿಂಗ್‌ಗಾಗಿ 12GB RAM ಮತ್ತು ಅಡ್ರಿನೋ 650 ಜಿಪಿಯು ಆಯ್ಕೆ ಪಡೆದುಕೊಂಡಿದೆ. ಪರಿಣಾಮ ಎಲ್ಲಾ ವಿಚಾರದಲ್ಲೂ ಬಳಕೆದಾರರು ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ.

ಪೊಕೊದ ಈ ಫೇಮಸ್‌ ಸ್ಮಾರ್ಟ್‌ಫೋನ್‌ಗೆ ಭಾರೀ ಬ್ಯಾಂಕ್‌ ಆಫರ್ !

ಪೊಕೊ F4 5G ಕ್ಯಾಮೆರಾ ರಚನೆ: ಇನ್ನು ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಆಯ್ಕೆಯೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಕಾನ್ಫಿಗರೇಶನ್ ಪಡೆದಿದ್ದು, ಅದರಲ್ಲಿ f/1.8 ದ್ಯುತಿರಂಧ್ರದೊಂದಿಗೆ 64MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಸೆನ್ಸರ್‌ ಮತ್ತು 2MP ಮ್ಯಾಕ್ರೋ ಸೆನ್ಸರ್‌ ಅನ್ನು ಈ ಫೋನ್‌ ಹೊಂದಿದೆ, ಇದರೊಂದಿಗೆ ಸೆಲ್ಫಿಗಾಗಿ 20MP ಕ್ಯಾಮೆರಾ ಆಯ್ಕೆಯನ್ನು ಈ ಫೋನ್‌ ಪಡೆದುಕೊಂಡಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Poco F4 5G smartphone get best discount on flipkart. The smartphone features a 64-megapixel main camera with an AMOLED display option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+