ಇಂದು ಲಾಂಚ್ ಆಗಲಿದೆ ಪೊಕೊ F6 ಫೋನ್; ಫೀಚರ್ಸ್ ಏನು?..ಬೆಲೆ ಎಷ್ಟು?
ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಪೊಕೊ ಸಂಸ್ಥೆಯು ಹೊಸದಾಗಿ ಪೊಕೊ F6 ಫೋನ್ ಅನ್ನು ಇಂದು (ಮೇ 23 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲು ಸಕಲ ಸಜ್ಜಾಗಿದೆ.ಇನ್ನು ಈ ಮೊಬೈಲ್ ಸ್ನ್ಯಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದೆ.
ಹೌದು, ಪೊಕೊ F6 ಫೋನ್ ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಮೊಬೈಲ್ ಬಿಡುಗಡೆ ಬಗ್ಗೆ ದೈತ್ಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್ ತಾಣವು ಮೈಕ್ರೋ ಪೇಜ್ ಸಹ ತೆರೆದಿದೆ. ಲಭ್ಯ ಆಗಿರುವ ಕೆಲವು ಲೀಕ್ ಮಾಹಿತಿ ಪ್ರಕಾರ ಈ ಫೋನ್ 12 GB RAM ಮತ್ತು 512 GB ಹಾಗೂ ಡ್ಯುಯಲ್ ಸ್ಟೀರಿಯೋ ಸ್ಪೀಕರ್ಸ್ ಪಡೆದಿರಲಿದೆ.

ಅಲ್ಲದೇ ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದ್ದು, ಜೊತೆಗೆ 20 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನಿರೀಕ್ಷಿಸಲಾಗಿದೆ. ಇದರೊಂದಿಗೆ ಇದು 5000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಒಳಗೊಂಡಿರಲಿದೆ. ಹಾಗಾದರೇ ಪೊಕೊ F6 ಮೊಬೈಲ್ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೊಕೊ F6 ನಿರೀಕ್ಷಿತ ಫೀಚರ್ಸ್ ಹೀಗಿವೆ
ಪೊಕೊ F6 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಅಲ್ಲದೇ ಇದು 12 GB RAM ವೇರಿಯಂಟ್ ಆಯ್ಕೆ ಮತ್ತು ಆಂಡ್ರಾಯ್ಡ್ 14 OS ಸಪೋರ್ಟ್ ಪಡೆದಿರುವ ಸಾಧ್ಯತೆಗಳು ಅಧಿಕ. ಈ ಫೋನಿನ ಡಿಸ್‌ಪ್ಲೇ 1220 x 2712 ಪಿಕ್ಸಲ್ ರೆಸಲ್ಯೂಶನ್ ಪಡೆದಿರಲಿದ್ದು, ಇನ್ನು ಡಿಸ್‌ಪ್ಲೇಯು 6.67 ಇಂಚಿನ ಗಾತ್ರದಲ್ಲಿ ಇರಲಿದೆ.
ಹಾಗೆಯೇ ಪೊಕೊ F6 ಸ್ಮಾರ್ಟ್‌ಫೋನ್ ರೆಡ್ಮಿ ಟರ್ಬೋ 3 ನ ರೀ-ಬ್ರ್ಯಾಂಡ್ ಆಗಿರಲಿದೆ ಎಂದು ಕೆಲವು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಅದರಂತೆ ಫೋನ್ F6 ಗಾಗಿ ನಿರೀಕ್ಷಿಸಲಾದ ಅದೇ ಚಿಪ್‌ಸೆಟ್ ಅನ್ನು ಹೊಂದಿದೆ ಮತ್ತು 12 GB RAM ಮತ್ತು 512 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.
ಇನ್ನು ರೆಡ್ಮಿ ಟರ್ಬೋ 3 ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಇದರ ಈ ಡಿಸ್‌ಪ್ಲೇಯು 120 Hz ರಿಫ್ರೆಶ್ ರೇಟ್, ಡಾಲ್ಬಿ ವಿಷನ್ ಮತ್ತು ಹೆಚ್‌ಡಿಆರ್ 10+ ಪ್ರಮಾಣೀಕರಣದೊಂದಿಗೆ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಫೋನ್ 20 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಎರಡು ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಅನ್ನು ಪಡೆದಿರಲಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಸಹ ಪಡೆದಿರಲಿದ್ದು, 90W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಪೊಕೊ F6 ಸ್ಮಾರ್ಟ್‌ಫೋನ್ ಇದೇ ಮೇ 23 ರಂದು ಅಧಿಕೃತವಾಗಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಪೊಕೊ X6 5G ಮೊಬೈಲ್ ಬ್ಲ್ಯಾಕ್ ಹಾಗೂ ಟೈಟಾನಿಮ್ ಕಲರ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿದೆ.


Click it and Unblock the Notifications








