Home
ಸುದ್ದಿಜಾಲ

ಗ್ರ್ಯಾಂಡ್‌ ಎಂಟ್ರಿ ಕೊಡಲು ಪೊಕೊ F6 ಫೋನ್‌ ಸಿದ್ಧ; ವಾವ್‌ ಎನಿಸುವ ಫೀಚರ್ಸ್‌!

ಪೊಕೊ ಮೊಬೈಲ್‌ ಸಂಸ್ಥೆಯು ಹೊಸದಾಗಿ ಪೊಕೊ F6 ಫೋನ್‌ ಅನ್ನು ಇದೇ ಮೇ 23 ರಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಮಾಡಲಿದೆ. ಈ ಫೋನ್‌ ಸ್ನ್ಯಾಪ್‌ಡ್ರಾಗನ್‌ 8s GEN 3 ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದೆ.

ಹೌದು, ಪೊಕೊ F6 ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ಇದೇ ಮೇ 23 ರಂದು ಬಿಡುಗಡೆ ಆಗಲಿದೆ. ಈ ಫೋನ್‌ ಲಾಂಚ್‌ ಬಗ್ಗೆ ದೈತ್ಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ತಾಣವು ಮೈಕ್ರೋ ಪೇಜ್‌ ಕೂಡಾ ತೆರೆದಿದೆ. ಲೀಕ್‌ ಮಾಹಿತಿಯಂತೆ ಈ ಫೋನ್‌ ಡ್ಯುಯಲ್‌ ಸ್ಟೀರಿಯೋ ಸ್ಪೀಕರ್ಸ್‌ ಸೌಲಭ್ಯ ಸಹ ಪಡೆದಿದೆ.

ಗ್ರ್ಯಾಂಡ್‌ ಎಂಟ್ರಿ ಕೊಡಲು ಪೊಕೊ F6 ಫೋನ್‌ ಸಿದ್ಧ; ವಾವ್‌ ಎನಿಸುವ ಫೀಚರ್ಸ್‌!

ಹಾಗೆಯೇ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಪಡೆದಿರಲಿದೆ. ಹಾಗೆಯೇ ಇದು 5000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಕೂಡಾ ಒಳಗೊಂಡಿರಲಿದೆ. ಇನ್ನುಳಿದಂತೆ ಪೊಕೊ F6 ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೊಕೊ F6 ಫೋನಿನ ನಿರೀಕ್ಷಿತ ಫೀಚರ್ಸ್‌

ಪೊಕೊ F6 ಮೊಬೈಲ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಅಲ್ಲದೇ ಇದು 12 GB RAM ವೇರಿಯಂಟ್‌ ಆಯ್ಕೆ ಮತ್ತು ಆಂಡ್ರಾಯ್ಡ್‌ 14 OS ಸಪೋರ್ಟ್‌ ಪಡೆದಿರುವ ಸಾಧ್ಯತೆಗಳು ಅಧಿಕ. ಈ ಫೋನಿನ ಡಿಸ್‌ಪ್ಲೇ 1220 x 2712 ಪಿಕ್ಸಲ್‌ ರೆಸಲ್ಯೂಶನ್ ಪಡೆದಿರಲಿದ್ದು, ಇನ್ನು ಡಿಸ್‌ಪ್ಲೇಯು 6.67 ಇಂಚಿನ ಗಾತ್ರದಲ್ಲಿ ಇರಲಿದೆ.

ಹಾಗೆಯೇ ಪೊಕೊ F6 ಮೊಬೈಲ್‌ ರೆಡ್ಮಿ ಟರ್ಬೋ 3 ನ ರೀ-ಬ್ರ್ಯಾಂಡ್‌ ಆಗಿರಲಿದೆ ಎಂದು ಕೆಲವು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಅದರಂತೆ ಫೋನ್ F6 ಗಾಗಿ ನಿರೀಕ್ಷಿಸಲಾದ ಅದೇ ಚಿಪ್‌ಸೆಟ್ ಅನ್ನು ಹೊಂದಿದೆ ಮತ್ತು 12 GB RAM ಮತ್ತು 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.

ಇನ್ನು ರೆಡ್ಮಿ ಟರ್ಬೋ 3 ಫೋನ್‌ 6.67 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಇದರ ಈ ಡಿಸ್‌ಪ್ಲೇಯು 120 Hz ರಿಫ್ರೆಶ್ ರೇಟ್‌, ಡಾಲ್ಬಿ ವಿಷನ್ ಮತ್ತು ಹೆಚ್‌ಡಿಆರ್‌ 10+ ಪ್ರಮಾಣೀಕರಣದೊಂದಿಗೆ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಫೋನ್‌ 20 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಫೋನ್‌ನ ಎರಡು ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಅನ್ನು ಪಡೆದಿರಲಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಸಹ ಹೊಂದಿರಲಿದ್ದು, 90W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಪೊಕೊ F6 ಮೊಬೈಲ್‌ ಇದೇ ಮೇ 23 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಇನ್ನು ಪೊಕೊ X6 5G ಮೊಬೈಲ್‌ ಬ್ಲ್ಯಾಕ್‌ ಹಾಗೂ ಟೈಟಾನಿಮ್‌ ಕಲರ್‌ ಆಯ್ಕೆಯಲ್ಲಿ ಮಾರುಕಟ್ಟೆ ಪ್ರವೇಶ ಮಾಡಲಿದೆ ಎಂದು ಹೇಳಲಾಗಿದೆ.

Best Mobiles in India

English summary
POCO F6 is set to launch in India on may 23. Expected Specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+