Home
ಸುದ್ದಿಜಾಲ

ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಈ ಸ್ಟೈಲಿಶ್‌ ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ!

ಮೊಬೈಲ್‌ ಮಾರುಕಟ್ಟೆಯಲ್ಲಿನ ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಪೊಕೊ (POCO) ಸಹ ಒಂದಾಗಿದೆ. ಇನ್ನು ಸಂಸ್ಥೆಯ ಇತ್ತೀಚಿನ ಜನಪ್ರಿಯ ಫೋನ್‌ಗಳಲ್ಲಿ ಒಂದೆನಿಸಿರುವ ಪೊಕೊ F6 5G (POCO F6 5G) ಕೆಲವು ಅತ್ಯುತ್ತಮ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಆದರೆ ಇದೀಗ ಈ ಫೋನ್‌ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಆಕರ್ಷಕ ಬೆಲೆ ಇಳಿಕೆ ಪಡೆದಿದ್ದು, ಖರೀದಿದಾರರು ಅಚ್ಚರಿಯಿಂದ ನೋಡುವಂತೆ ಮಾಡಿದೆ.

ಹೌದು, ಲೀಡಿಂಗ್ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಇದೀಗ ಪೊಕೊ F6 5G (POCO F6 5G) ಫೋನ್‌ ಬೆಲೆಯಲ್ಲಿ ಸುಮಾರು 2000ರೂ. ಗಳ ಡಿಸ್ಕೌಂಟ್‌ ತಿಳಿಸಿದೆ. ಅಂದಹಾಗೆ ಈ ಫೋನ್‌ 8GB + 256 GB, 8GB + 256 GB ಮತ್ತು 12 GB + 512 GB ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಈ ಮೂರು ವೇರಿಯಂಟ್‌ಗಳ ಬೆಲೆಯಲ್ಲಿ ಸಹ ರಿಯಾಯಿತಿ ಲಭ್ಯ ಇದೆ.

ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಈ ಸ್ಟೈಲಿಶ್‌ ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ!

ಇನ್ನು 8GB/256GB ವೇರಿಯಂಟ್‌ ಆಫರ್‌ ದರ 27,999ರೂ. ಗಳು ಆಗಿದೆ. ಹಾಗೆಯೇ 12GB/256GB ವೇರಿಯಂಟ್‌ ಫೋನಿನ ಬೆಲೆಯು 29,999ರೂ. ಗಳು ಆಗಿದೆ. ಅದೇ ರೀತಿ 12GB/512GB ಸ್ಟೋರೇಜ್‌ ವೇರಿಯಂಟ್‌ 31,999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್‌ ಟೈಟಾನಿಮ್‌ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯ. ಹಾಗಾದರೇ ಪೊಕೊ F6 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೊಕೊ F6 ಫೀಚರ್ಸ್‌ ಮಾಹಿತಿ

ಪೊಕೊ F6 ಸ್ಮಾರ್ಟ್‌ಫೋನ್‌ 6.67 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇಯು 2712 x 1220 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇಯು 2400 nits ಬ್ರೈಟ್ನೆಸ್‌ ಸಪೋರ್ಟ್‌ ಹೊಂದಿದ್ದು, ಇದರ ಜೊತೆಗೆ 120Hz ರಿಫ್ರೆಶ್‌ ರೇಟ್‌ ಬೆಂಬಲ ಸಹ ಇದೆ. ಅಲ್ಲದೇ HRD+, ಡಾಲ್ಬಿ ವಿಷನ್‌ ಆಯ್ಕೆಗಳು ಇವೆ.

ಪೊಕೊ F6 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 OS ಸಪೋರ್ಟ್‌ ಸಹ ಇದೆ. ಇನ್ನು ಈ ಫೋನ್‌ ಮೂರು ವೇರಿಯಂಟ್‌ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB + 256 GB, 8GB + 256 GB ಮತ್ತು 12 GB + 512 GB ಸ್ಟೋರೇಜ್‌ ವೇರಿಯಂಟ್‌ ಸಾಮರ್ಥ್ಯದ ಆಯ್ಕೆಯಲ್ಲಿ ಇವೆ.

ಪೊಕೊ F6 ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಅನ್ನು ಪಡೆದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 20 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಸೌಲಭ್ಯವನ್ನು ನೀಡಲಾಗಿದೆ.

ಪೊಕೊ F6 ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 90W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಹಾಗೆಯೇ ಇದು 120W ಫಾಸ್ಟ್‌ ಚಾರ್ಜಿಂಗ್ ಅಡಾಪ್ಟರ್ ವ್ಯವಸ್ಥೆ ಸಹ ಪಡೆದಿದ್ದು, ಸುಮಾರು 35 ನಿಮಿಷಗಳಲ್ಲಿ ಬ್ಯಾಟರಿ ಪೂರ್ಣ 100% ಚಾರ್ಜ್ ಮಾಡಲಿದೆ ಎಂದು ಹೇಳಲಾಗಿದೆ.

Best Mobiles in India

English summary
POCO F6 received Massive discount in flipkart India. should you buy it? know the price and specifications details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+