Home
ಸುದ್ದಿಜಾಲ

Poco: ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಪೊಕೊದ ಈ ಫೋನ್‌; ಫೀಚರ್ಸ್‌ ಲೀಕ್‌

ಭಾರತದಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಿವೆ, ಆಗುತ್ತಲೇ ಇವೆ. ಈ ನಡುವೆ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ಆದ ಪೊಕೊ F6 (Poco F6) ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಅನಾವರಣ ಆಗಲಿದೆ ಎಂದು ತಿಳಿದುಬಂದಿದೆ.

ಹೌದು, ಭಾರತದ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಿಗೆ ಉತ್ತಮ ನೆಲೆಯಾಗಿದೆ. ಈ ಕಾರಣಕ್ಕೆ ಸಾಕಷ್ಟು ಹೊಸ ಫೋನ್‌ಗಳನ್ನು ಇಲ್ಲಿ ಅನಾವರಣ ಮಾಡಲಾಗುತ್ತಿದೆ. ಈ ನಡುವೆ ಪೊಕೊ F6 ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿದ್ದು, ಗ್ರಾಹಕರಲ್ಲಿ ಬಹಳ ಆಸಕ್ತಿ ಉಂಟು ಮಾಡಲಾಗಿದೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿದೆ. ಯಾವಾಗ ಲಾಂಚ್‌ ಆಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಪೊಕೊದ ಈ ಫೋನ್‌; ಫೀಚರ್ಸ್‌ ಲೀಕ್‌

ಪೊಕೊ F6 ಸ್ಮಾರ್ಟ್‌ಫೋನ್‌: ಪೊಕೊ F6 ಸ್ಮಾರ್ಟ್‌ಫೋನ್‌ ಬಗ್ಗೆ ಕಂಪನಿಯು ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲವಾದರೂ ಈ ಫೋನ್‌ ಬಗ್ಗೆ ಕೆಲವು ಮಾಹಿತಿಗಳು ಭಾರೀ ಸದ್ದು ಮಾಡುತ್ತಿವೆ. ಮೇ 2023 ರಲ್ಲಿ ಬಿಡುಗಡೆಯಾದ ಪೊಕೊ F5 ಸ್ಮಾರ್ಟ್‌ಫೋನ್‌ ಅನ್ನು ಗಮನಿಸಿದ್ರೆ ಪೊಕೊ F6 ಲಾಂಚ್‌ ಇನ್ನೂ ಕನಿಷ್ಠ ಒಂದು ತಿಂಗಳ ದೂರದಲ್ಲಿದೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ.

ಅದರಂತೆ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ ಎಂದು ತಿಳಿದುಬಂದಿದ್ದು, ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ Peridot ಎಂಬ ಸಂಕೇತನಾಮವಿರುವ ಪೊಕೊ F6 ಅನ್ನು ಹೈಪರ್‌ ಓಎಸ್‌ ಮೂಲ ಕೋಡ್‌ನಲ್ಲಿ ಗುರುತಿಸಲಾಗಿದೆ. ಇಲ್ಲಿ ಕ್ಯಾಮೆರಾ ಸೆನ್ಸರ್‌ ಅನ್ನೂ ಸಹ ಬಹಿರಂಗಪಡಿಸಲಾಗಿದೆ.

ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಪೊಕೊದ ಈ ಫೋನ್‌; ಫೀಚರ್ಸ್‌ ಲೀಕ್‌

ಅಂದರೆ ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ IMX 882 ಸೆನ್ಸರ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಸ್ IMX 355 ಸೆನ್ಸರ್‌ ಅನ್ನು ಕಾಣಬಹುದಾಗಿದೆ. ಪ್ರಮುಖವಾಗಿ ಸೆಲ್ಫಿಗಳಿಗಾಗಿ ಓಮ್ನಿವಿಷನ್‌ನಿಂದ OV20B ಸೆನ್ಸರ್‌ ಆಯ್ಕೆ ಪಡೆದಿರಲಿದೆ ಎಂದು ಕೆಲವು ಲೀಕ್‌ ಮಾಹಿತಿಗಳಿಂದ ತಿಳಿದುಬಂದಿದೆ.

ಆದರೂ ಸಹ ಈ ಪೊಕೊ F6 ಬಗ್ಗೆ ಕೆಲವು ಊಹಾಪೋಹಗಳಿವೆ. ಅಂದರೆ ಕೆಲವು ದಿನಗಳ ಹಿಂದೆ ಚೀನಾದಲ್ಲಿ ಲಾಂಚ್‌ ಆದ ಶಿಯೋಮಿ ಸಿವಿ 4 ಪ್ರೊ (Xiaomi civi 4 Pro) ನ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ರೆಡ್ಮಿ ನೋಟ್‌ 13 ಪ್ರೊ ನ (Redmi Note 13 Pro) ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಶೀಘ್ರವೇ ಲಾಂಚ್‌ ಆಗಲಿದೆ ಪೊಕೊದ ಈ ಫೋನ್‌; ಫೀಚರ್ಸ್‌ ಲೀಕ್‌

ಪೊಕೊ F6 ಫೋನ್‌ನಲ್ಲಿ ಏನನ್ನು ನಿರೀಕ್ಷಿಸಬಹುದು?: ಈ ಫೋನ್ ಶಿಯೋಮಿ ಸಿವಿ 4 ಪ್ರೊ ನ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆ ಅನ್ನೋದನ್ನೇ ನಂಬುವುದಾದರೆ ಅದೇ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿಯೂ ಕಾಣಬಹುದಾಗಿದೆ. ಅಂದರೆ ಈ ಶಿಯೋಮಿ ಸಿವಿ 4 ಪ್ರೊ ಫೋನ್ 6.55 ಇಂಚಿನ 1.5K ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್, 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 3,000 ನಿಟ್ಸ್‌ ನ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 8s ಜನ್ 3 ಚಿಪ್‌ಸೆಟ್ ಅನ್ನು ಅಡ್ರಿನೋ 735 ಜಿಪಿಯು ಜೊತೆಗೆ ಜೋಡಿಸಲಾಗಿದ್ದು, 12 GB LPPDDR5x RAM ಮತ್ತು 512 GB UFS 4.0 ಇಂಟರ್ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದು. ಇದರೊಂದಿಗೆ ಡ್ಯುಯಲ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಈ ಸ್ಮಾರ್ಟ್‌ಫೋನ್ 4,700 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದಿದೆ. ಅಲ್ಲದೆ ಆಂಡ್ರಾಯ್ಡ್ 14 ಆಧಾರಿತ ಶಿಯೋಮಿ ಹೈಪರ್‌ ಓಎಸ್‌ ಅನ್ನು ಈ ಫೋನ್‌ ರನ್‌ ಮಾಡಲಿದೆ. ಉಳಿದಂತೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌, ಅತಿಗೆಂಪು ಸೆನ್ಸರ್‌, ಹೈ-ರೆಸ್ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದಂತಹ ಫೀಚರ್ಸ್‌ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Some information about the Poco F6 smartphone has been leaked and it has created a lot of ianterest among consumers. Accordingly, it is known that this phone will be unveiled in India soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+