Poco: ಶೀಘ್ರದಲ್ಲೇ ಲಾಂಚ್ ಆಗಲಿದೆ ಪೊಕೊ F6 ಸ್ಮಾರ್ಟ್‌ಫೋನ್: ನಿರೀಕ್ಷಿತ ಫೀಚರ್ಸ್ ಏನು?
ಪೊಕೊ ಸ್ಮಾರ್ಟ್‌ಫೋನ್‌ಗಳು (Poco smartphone) ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಿವೆ. ಈ ನಡುವೆ ಪೊಕೊ ಹೊಸ ಫೋನ್ ಅನ್ನು ಅನಾವರಣ ಮಾಡಲಿದೆ ಎಂದು ತಿಳಿದುಬಂದಿದೆ.
ಹೌದು, ಪೊಕೊ ಇನ್ನೇನು ಕೆಲವೇ ದಿನಗಳಲ್ಲಿ ಪೊಕೊ F6 ಸ್ಮಾರ್ಟ್‌ಫೋನ್ (Poco F6 smartphone) ಅನ್ನು ಅನಾವರಣ ಮಾಡಲಿದೆ ಎಂದು ತಿಳಿದುಬಂದಿದೆ. ಡೆಡ್‌ಪೂಲ್ ವಿಶೇಷ ಆವೃತ್ತಿಯನ್ನು ROM ಕೋಡ್‌ನಲ್ಲಿ ಗುರುತಿಸಲಾಗಿದ್ದು, ಈ ಮೂಲಕ ಈ ಫೋನ್ ವಿಶೇಷ ಫೀಚರ್ಸ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.ಹಾಗಿದ್ರೆ ಈ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ?, ಯಾವಾಗ ಲಾಂಚ್ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪೊಕೊ F6 ಸ್ಮಾರ್ಟ್‌ಫೋನ್: ಶಿಯೋಮಿ ಇತ್ತೀಚೆಗೆ ಚೀನಾದಲ್ಲಿ ರೆಡ್ಮಿ ಟರ್ಬೋ 3 ಅನ್ನು ಲಾಂಚ್ ಮಾಡಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಸದ್ಯಕ್ಕೆ ಇದು ಚೀನಾದಲ್ಲಿ ಮಾತ್ರ ಲಭ್ಯವಿದೆ. ಅದಾಗ್ಯೂ ಮುಂಬರುವ ದಿನಗಳಲ್ಲಿ ಇದು ಜಾಗತಿಕವಾಗಿ ಪೊಕೊ ಬ್ರ್ಯಾಂಡ್ ಅಡಿಯಲ್ಲಿ ಕಾಣಿಸಿಕೊಳ್ಳಿದೆ ಎಂದು ತಿಳಿದುಬಂದಿದೆ. ಅಂದರೆ ಈ ರೆಡ್ಮಿ ಟರ್ಬೋ 3 ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಪೊಕೊ F6 ಎಂಬ ಹೆಸರಿನಲ್ಲಿ ಲಾಂಚ್ ಆಗಬಹುದು ಎಂದು ತಿಳಿದುಬಂದಿದೆ.
ಈ ನಡುವೆ ಪೊಕೊ F6 IMEI ಡೇಟಾಬೇಸ್‌ನಲ್ಲಿ ಮಾದರಿ ಸಂಖ್ಯೆಗಳು 24069PC21I ಮತ್ತು 24069PC21G ನೊಂದಿಗೆ ಕಾಣಿಸಿಕೊಂಡಿತ್ತು. ಇದು ಕ್ರಮವಾಗಿ ಭಾರತೀಯ ಮತ್ತು ಜಾಗತಿಕ ರೂಪಾಂತರಗಳನ್ನು ಪ್ರತಿನಿಧಿಸುತ್ತದೆ. ಈಗ ಪೊಕೊ F6 ಮಾನಿಕರ್ ಜೊತೆಗೆ ರೆಡ್ಮಿ ಟರ್ಬೋ 3 ROM ನಲ್ಲಿ ಭಾರತೀಯ ಮಾದರಿ ಸಂಖ್ಯೆಯ ಉಲ್ಲೇಖಗಳನ್ನು ಮೂಲಗಳು ಕಂಡುಕೊಂಡಿವೆ. ಅದರಂತೆ ಪೊಕೊ F6 ಡೆಡ್‌ಪೂಲ್ ಆವೃತ್ತಿಯಂತೆ ತೋರುತ್ತಿದೆ. ಇದಕ್ಕೆ ಕಾರಣ ಹೈಪರ್ ಓಎಸ್ ನಲ್ಲೂ ಈ ಫೋನ್ ಕಾಣಿಸಿಕೊಂಡಿದೆ.

ಪೊಕೊ F6 ಡೆಡ್‌ಪೂಲ್ ಆವೃತ್ತಿಯ ವಿವರಗಳು ಕಡಿಮೆ ಇದ್ದರೂ ಇದು ಪ್ರಮಾಣಿತ ಪೊಕೊ F6 ಗೆ ಹೋಲಿಸಬಹುದಾದ ಫೀಚರ್ಸ್ ಆಯ್ಕೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಿಂದಿನ ವದಂತಿಗಳ ಪ್ರಕಾರ, ಪೊಕೊ F6 ಜುಲೈನಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಬಹುದು ಅಲ್ಲದೆ ಭಾರತವು ಅದನ್ನು ಸ್ವೀಕರಿಸುವ ಮೊದಲ ಮಾರುಕಟ್ಟೆಯಾಗಿರಲಿದೆ ಎಂದೂ ಸಹ ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ.
ರೆಡ್ಮಿ ಟರ್ಬೋ 3 ಫೀಚರ್ಸ್: ರೆಡ್ಮಿ ಟರ್ಬೋ 3 ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಅಂದರೆ 50 ಮೆಗಾಪಿಕ್ಸೆಲ್ ಮುಖ್ಯ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಆನ್ನು ಈ ಫೋನ್‌ನಲ್ಲಿ ಕಾಣಬಹುದು. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 20 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದೆ.

ಇದರೊಂದಿಗೆ 16GB RAM ಮತ್ತು 1TB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಅಧಿಕ ಬಿಸಿಯಾಗುವುದನ್ನು ತಡೆಯಲು ಇದು ಸುಧಾರಿತ ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ತ್ವರಿತ ಚಾರ್ಜಿಂಗ್‌ಗಾಗಿ 90W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ಇದರ ಜೊತೆಗೆ ಈ ಫೋನ್ ಹೈಪರ್ಓಎಸ್ ಅನ್ನು ರನ್ ಮಾಡಲಿದ್ದು, ಟಚ್‌ಲೆಸ್ ನಿಯಂತ್ರಣಕ್ಕಾಗಿ ಏರ್ ಗೆಸ್ಚರ್ಸ್ ಫೀಚರ್ಸ್ ಆಯ್ಕೆ ಪಡೆದಿಕೊಂಡಿದೆ.


Click it and Unblock the Notifications








