Home
ಸುದ್ದಿಜಾಲ

Poco: ಶೀಘ್ರದಲ್ಲೇ ಲಾಂಚ್‌ ಆಗಲಿದೆ ಪೊಕೊ F6! ಫೀಚರ್ಸ್‌ ಏನಿರಲಿದೆ?

ಪೊಕೊ ಸ್ಮಾರ್ಟ್‌ಫೋನ್‌ಗಳು (Poco smartphone) ಭಾರತವೂ ಸೇರಿದಂತೆ ಜಾಗತಿಕವಾಗಿ ದೊಡ್ಡ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಪೊಕೊ F6 ಮತ್ತು ಪೊಕೊ F6 ಪ್ರೊ (Poco F6 and Poco F6 Pro) ಸ್ಮಾರ್ಟ್‌ಫೋನ್‌ಗಳು ಜಾಗತಿಕವಾಗಿ ಶೀಘ್ರದಲ್ಲೇ ಲಾಂಚ್‌ ಆಗಲಿದೆ ಎನ್ನಲಾಗಿದೆ. ಅದರಂತೆ ಈ ಫೋನ್ NBTC ಪ್ರಮಾಣೀಕರಣ ಸೈಟ್‌ನಲ್ಲಿ ಗುರುತಿಸಿಕೊಂಡಿದೆ.

ಹೌದು, ಪೊಕೊ F6 ಮತ್ತು ಪೊಕೊ F6 ಪ್ರೊ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಲೀಕ್‌ ಆಗಿವೆ. ಇದರಿಂದಾಗಿ ಈ ಫೋನ್‌ ಯಾವಾಗ ಲಾಂಚ್‌ ಆಗಲಿದೆ ಎಂದು ಗ್ರಾಹಕರು ಕಾತುರದಿಂದ ಕಾದು ಕುಳಿತಿದ್ದಾರೆ. ಈ ನಡುವೆ ಮಾರ್ಚ್‌ನಲ್ಲಿ ಥೈಲ್ಯಾಂಡ್‌ನ NBTC ಪ್ರಮಾಣೀಕರಣ ಸೈಟ್‌ನಲ್ಲಿ ಪ್ರೊ ವೇರಿಯಂಟ್ ಕಾಣಿಸಿಕೊಂಡ ನಂತರ, ಪ್ರಮಾಣಿತ F6 ಫೋನ್ ಸಹ ಅಲ್ಲಿ ಕಾಣಿಸಿಕೊಂಡಿದೆ. ಹಾಗಿದ್ರೆ ಬನ್ನಿ ಈ ಫೋನ್‌ನ ಕೆಲವು ಪ್ರಮುಖ ಮಾಹಿತಿ ತಿಳಿದುಕೊಳ್ಳೋಣ.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಪೊಕೊ F6! ಫೀಚರ್ಸ್‌ ಏನಿರಲಿದೆ?...

ಪೊಕೊ F6 ಫೋನ್ NBTC ಸೈಟ್‌ನಲ್ಲಿ: ಪೊಕೊ F6 ಮಾದರಿ ಸಂಖ್ಯೆ 24069PC12G ಯೊಂದಕಗೆ ಪ್ರಮಾಣೀಕರಣ ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಕೊನೆಯಲ್ಲಿ "G" ಅನ್ನು ಉಲ್ಲೇಖ ಮಾಡಿದ್ದು, ಇದು ಜಾಗತಿಕ ರೂಪಾಂತರದ ಸುಳಿವು ನೀಡುತ್ತದೆ. ಆದರೂ NBTC ಪ್ರಮಾಣೀಕರಣವು ಡಿವೈಸ್‌ನ ಯಾವುದೇ ನಿರ್ದಿಷ್ಟತೆಗಳು ಅಥವಾ ನಿಯತಾಂಕಗಳನ್ನು ಬಹಿರಂಗಪಡಿಸಿಲ್ಲ.

ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 12 GB RAM ಮತ್ತು ಆಂಡ್ರಾಯ್ಡ್‌ 14 OS ನೊಂದಿಗೆ ಈ ಫೋನ್‌ ಗೀಕ್‌ಬೆಂಚ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಪ್ರೊಸೆಸರ್ ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1844 ಅಂಕಗಳನ್ನು ಮತ್ತು ಮಲ್ಟಿ-ಕೋರ್‌ನಲ್ಲಿ 4799 ಅಂಕಗಳನ್ನು ಗಳಿಸಿದೆ.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಪೊಕೊ F6! ಫೀಚರ್ಸ್‌ ಏನಿರಲಿದೆ?...

ಇನ್ನು ಪೊಕೊ F6 ಫೋನ್‌ ರೆಡ್ಮಿ ಟರ್ಬೋ 3 ನ ಮರುಬ್ರಾಂಡ್ ಆಗಿರುತ್ತದೆ ಎಂದು ಕೆಲವು ವದಂತಿಗಳಿವೆ. ಅದರಂತೆ ಫೋನ್ F6 ಗಾಗಿ ನಿರೀಕ್ಷಿಸಲಾದ ಅದೇ ಚಿಪ್‌ಸೆಟ್ ಅನ್ನು ಹೊಂದಿದೆ ಮತ್ತು 12 GB ವರೆಗೆ LPDDR5x RAM ಮತ್ತು 512 GB ವರೆಗಿನ UFS 4.0 ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗೆಯೇ ಟರ್ಬೋ 3 ಫೋನ್‌ 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌, ಡಾಲ್ಬಿ ವಿಷನ್ ಮತ್ತು ಹೆಚ್‌ಡಿಆರ್‌ 10+ ಪ್ರಮಾಣೀಕರಣದೊಂದಿಗೆ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಅನ್ನು ಹೊಂದಿದೆ. ಆದರೆ ವದಂತಿಗಳನ್ನು ನಂಬುವುದಾದರೆ, ಪೊಕೊ F6 ಮ್ಯಾಕ್ರೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಬಹುದು ಎಂದು ಹೇಳಲಾಗಿದೆ ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ ಹೊಂದಿದ್ದು, 90W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಈ ನಡುವೆ ಪೊಕೊ F6 ನ ಡೆಡ್‌ಪೂಲ್ ವಿಶೇಷ ಆವೃತ್ತಿಯನ್ನು ಹೈಪರ್‌ಓಎಸ್ ಕೋಡ್‌ಬೇಸ್‌ನಲ್ಲಿ ಗುರುತಿಸಲಾಗಿದ್ದು, ಅದಾಗ್ಯೂ ಇದರ ಬಗ್ಗೆ ಹೆಚ್ಚಿನ ವಿವರಗಳು ಕಂಡುಬಂದಿಲ್ಲ. ಪೊಕೊ F6 ಜೂನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಮುಂಬರುವ ದಿನಗಳಲ್ಲಿ ನಾವು ಈ ಫೋನ್‌ನ ಪ್ರಮುಖ ಫೀಚರ್ಸ್‌ ಮತ್ತು ಇನ್ನಿತರೆ ಮಾಹಿತಿಯನ್ನು ತಿಳಿಸಲಿದ್ದೇವೆ. ಇದಕ್ಕಾಗಿ ನೀವು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಪೊಕೊ F6! ಫೀಚರ್ಸ್‌ ಏನಿರಲಿದೆ?...

ಪೊಕೊ X6 5G ಲಾಂಚ್‌: ಪೊಕೊ X6 5G (Poco X6 5G) ಸ್ಮಾರ್ಟ್‌ಫೋನ್‌ನ ಸ್ಕೈಲೈನ್ ಬ್ಲೂ ಬಣ್ಣದ ವೇರಿಯಂಟ್‌ ಫೋನ್ ಅನ್ನು ಇದೀಗ ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. ಈ ಫೋನ್ ಮೊದಲು ಸ್ನೋಸ್ಟಾರ್ಮ್ ವೈಟ್ ಮತ್ತು ಮಿರರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇತ್ತು. ಹಾಗೆಯೇ ಇದಕ್ಕೆ 18,999 ರೂ.ಗಳಿಂದ ಪ್ರಾರಂಭವಾಗುತ್ತದೆ.
Best Mobiles in India

English summary
A lot of information has already leaked about the Poco F6 and Poco F6 Pro smartphones. Meanwhile, after the Pro variant surfaced on Thailand's NBTC certification ite in March, the standard F6 phone has also surfaced there.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+