POCO C65: ಸುನಾಮಿ ಸೃಷ್ಟಿಸಲಿದೆ ಪೊಕೊ C65! 8GB RAM, 50MP ಕ್ಯಾಮೆರಾ.. ಬಜೆಟ್ ಬೆಲೆ!
ಪೊಕೊ ಸ್ಮಾರ್ಟ್‌ಫೋನ್‌ಗಳು (POCO smartphone) ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ಭಿನ್ನ ಅನುಕೂಲ ನೀಡುತ್ತಿದ್ದು, ಈ ನಡುವೆ ಬಹು ನಿರೀಕ್ಷಿತ ಹೊಸ ಪೊಕೊ ಫೋನ್‌ನ ಫೀಚರ್ಸ್ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಲಿದೆ.
ಹೌದು, ಪೊಕೊ ಫೋನ್‌ಗಳಿಗೆ ಇತ್ತೀಚಿಗೆ ಹೆಚ್ಚಿನ ಬೇಡಿಕೆ ನಿರ್ಮಾಣವಾಗುತ್ತಿದೆ. ಈ ನಡುವೆ ಪೊಕೊ ಜಾಗತಿಕವಾಗಿ ಸಿ ಸರಣಿಯಲ್ಲಿ ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್ ಆದ ಪೊಕೊ C65 (POCO C65) ಅನ್ನು ಘೋಷಣೆ ಮಾಡಿದೆ. ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್, 8GB RAM ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿ ಹೊಂದುವ ಮೂಲಕ ಬಜೆಟ್ ಬೆಲೆಯ ವಿಭಾಗದಲ್ಲಿ ಈ ಫೋನ್ ಅಗ್ರ ಸ್ಥಾನ ಪಡೆಯಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಪೊಕೊ C65 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 6.74 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 20.6:9 ಆಕಾರ ಅನುಪಾತದೊಂದಿಗೆ ಅತ್ಯುತ್ತಮ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ 90Hz ರಿಫ್ರೆಶ್ ರೇಟ್ ಆಯ್ಕೆ ನೀಡಲಾಗಿದ್ದು, ಈ ಮೂಲಕ ಅತ್ಯುತ್ತಮ ಸ್ಕ್ರೋಲಿಂಗ್ ಅನುಭವ ಪಡೆದುಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಫೋನ್ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.
ಪೊಕೊ C65 ಸ್ಮಾರ್ಟ್‌ಫೋನ್ ಪ್ರೊಸಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G85 12nm ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ARM ಮಾಲಿ-G52 2EEMC2 ಜಿಪಿಯು ಶಕ್ತಿ ಈ ಫೋನ್‌ನಲ್ಲಿ ಇದೆ. ಉಳಿದಂತೆ ಇದು 6GB RAM ಜೊತೆಗೆ 128GB ಇಂಟರ್ ಸ್ಟೋರೇಜ್ ಹಾಗೂ 8GB RAM + 8GB ವರ್ಚುವಲ್ RAM ಜೊತೆಗೆ 256GB ಇಂಟರ್ ಸ್ಟೋರೇಜ್‌ನ ವೇರಿಯಂಟ್ ನಲ್ಲಿ ಕಂಡುಬಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಂಡು 1TB ವರೆಗೆ ಸ್ಟೋರೇಜ್ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಈ ಫೋನ್ ಆಂಡ್ರಾಯ್ಡ್ 13 ಓಎಸ್‌ನಲ್ಲಿ ರನ್ ಆಗಲಿದೆ.

ಪೊಕೊ C65 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಇನ್ನು ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ ವಿಶೇಷ ಎನಿಸಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಈ ನೆನ್ಸರ್ ಮೂಲಕ ಅತ್ಯುತ್ತಮ ಫೋಟೋಗಳು ಹಾಗೂ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. ಅದರಲ್ಲೂ ವಿಡಿಯೋ ಕರೆಯಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಳ್ಳಬಹುದು.
ಪೊಕೊ C65 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 18W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಮೂಲಕ ಅತ್ಯುತ್ತಮ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್( Side-mounted fingerprint sensor), 3.5mm ಆಡಿಯೋ ಜಾಕ್, ಎಫ್‌ಎಮ್ ರೇಡಿಯೋ, ಡ್ಯುಯಲ್ 4G VoLTE, ವೈ-ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್ +, ಮೈಕ್ರೋ ಯುಎಸ್‌ಬಿ ಪೋರ್ಟ್‌ನ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

ಪೊಕೊ C65 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಇನ್ನು ಈ ಸ್ಮಾರ್ಟ್‌ಫೋನ್‌ನ 6GB + 128GB ಮಾದರಿಗೆ USD 129 (ಭಾರತದಲ್ಲಿ ಅಂದಾಜು 10,725 ರೂ.ಗಳು.) ಮತ್ತು 8GB + 256GB ಮಾದರಿಯ ಬೆಲೆ USD 149 (ಭಾರತದಲ್ಲಿ ಅಂದಾಜು 12,390 ರೂ.ಗಳು). ಈ ಫೋನ್ ಕಪ್ಪು, ನೀಲಿ ಮತ್ತು ನೇರಳೆ (Black, blue and purple) ಬಣ್ಣದ ಆಯ್ಕೆಯಲ್ಲಿ ಕಂಡುಬಂದಿದ್ದು, ನೋಡಲು ಆಕರ್ಷಕವಾಗಿದೆ.


Click it and Unblock the Notifications








