Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
ಪೊಕೊ (Poco) ಕಂಪೆನಿಯು ಸ್ಮಾರ್ಟ್‌ಫೋನ್‌ಗಳ ವಲಯದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಈ ನಡುವೆ ಪೊಕೊ ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಸ್ಟೈಲಸ್ ಮತ್ತು ಕೀಬೋರ್ಡ್‌ನೊಂದಿಗೆ ಸಿದ್ಧಪಡಿಸುತ್ತಿದೆ ಎಂದು ತಿಳಿದುಬಂದಿದೆ.
ಹೌದು, ಶಿಯೋಮಿಯ ಉಪ-ಬ್ರಾಂಡ್ ಆಗಿರುವ ಪೊಕೊ ತನ್ನ ಮೊದಲ ಟ್ಯಾಬ್ಲೆಟ್ (Tablet) ಅನ್ನು ವಿಶೇಷ ರೀತಿಯಲ್ಲಿ ಲಾಂಚ್ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಟ್ಯಾಬ್ಲೆಟ್ ಬ್ರ್ಯಾಂಡ್ ಪೊಕೊ ಮಾಡೆಲ್ ಎಂಬ ಉತ್ಪನ್ನದ ಹೆಸರಿನಲ್ಲಿ ಯುರೋಪಿಯನ್ ಇಇಸಿ ಪ್ರಮಾಣೀಕರಣ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದೆ. ಹಾಗಿದ್ರೆ, ಇದು ಏನೆಲ್ಲಾ ಫೀಚರ್ಸ್ ಪಡೆದಿರಲಿದೆ ಬನ್ನಿ ನೋಡೋಣ.

ಪೊಕೊ ಟ್ಯಾಬ್ಲೆಟ್: ಇದೀಗ ಪೊಕೊ ಟ್ಯಾಬ್ಲೆಟ್‌ಗಾಗಿ ಬಿಡಿಭಾಗಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದ್ದು, ಪೊಕೊ ಬ್ರ್ಯಾಂಡ್‌ನ ಅಡಿಯಲ್ಲಿ ಕಾಣಿಸಿಕೊಂಡಿರುವ ಈ ಡಿವೈಸ್ ಈ ತಿಂಗಳ ಆರಂಭದಲ್ಲಿ 2407CMPBCG ಮಾದರಿ ಸಂಖ್ಯೆಯೊಂದಿಗೆ ಎಫ್‌ಸಿಸಿ ಡೇಟಾಬೇಸ್‌ನಲ್ಲಿ ಲಭ್ಯ ಇದೆ. ಈಗ, ಅದೇ ಸ್ಟೈಲಸ್ ಮಾದರಿ ಸಂಖ್ಯೆಯು ಐಎಮ್‌ಡಿಯ ಪಟ್ಟಿಯಲ್ಲಿ ಮಾದರಿ ಸಂಖ್ಯೆ 24071KB3FG ಹೊಂದಿರುವ ಕೀಬೋರ್ಡ್ ಜೊತೆಗೆ ಕಾಣಿಸಿಕೊಂಡಿದೆ. ಆದ್ದರಿಂದ ಟ್ಯಾಬ್ಲೆಟ್ ಐಚ್ಛಿಕ ಖರೀದಿಗಳಾಗಿ ಲಭ್ಯವಿರುವ ಈ ಟೂಲ್ಸ್‌ನೊಂದಿಗೆ ಬರಬಹುದು ಎಂದು ನಂಬಲಾಗಿದೆ.
ಈ ನಡುವೆ ಈ ಲಿಸ್ಟ್‌ನಲ್ಲಿ ಪೊಕೊ ಟ್ಯಾಬ್ಲೆಟ್ ಅಥವಾ ಅದರ ಜೊತೆಗಿನ ಬಿಡಿಭಾಗಗಳ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಹಿಂದಿನ ವರದಿಗಳನ್ನು ಗಮನಿಸುವುದಾದರೆ ಪೊಕೊ ಟ್ಯಾಬ್ಲೆಟ್ ಅನ್ನು ಪೊಕೊ ಪ್ಯಾಡ್ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ. ಅದರಲ್ಲೂ ರೆಡ್ಮಿ ಪ್ಯಾಡ್ ಪ್ರೊ (Redmi Pad Pro) ನ ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು ಎಂದು ಸಹ ತಿಳಿದುಬಂದಿದೆ.

ಕೆಲವು ವರದಿಗಳನ್ನು ಗಮನಿಸಿದ್ರೆ ಈ ಟ್ಯಾಬ್ಲೆಟ್ 2.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 12.1 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, 8 GB ವರೆಗೆ RAM ಮತ್ತು 256 GB ವರೆಗೆ ಇಂಟರ್ ಸ್ಟೋರೇಜ್ ಬಲ ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೆ ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 10,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಮತ್ತು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾವನ್ನು ಹೊಂದಿರಬಹುದು ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದ್ದು, ಈ ಡಿವೈಸ್ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಕ್ವಾಡ್ ಸ್ಪೀಕರ್ ಅನ್ನು ಇದರಲ್ಲಿ ಕಾಣಬಹುದಾಗಿದೆಯಂತೆ.

ಹಾಗೆಯೇ ನಿಖರವಾದ ಲಾಂಚ್ ದಿನಾಂಕ ಮತ್ತು ಬೆಲೆ ವಿವರಗಳು ಇನ್ನೂ ತಿಳಿದಿಲ್ಲವಾದರೂ, ಡಿವೈಸ್ ಮತ್ತು ಅದರ ಟೂಲ್ಸ್‌ಗಳು ಬಹು ಪ್ರಮಾಣೀಕರಣಗಳ ಮೂಲಕ ಕಾಣಿಸಿಕೊಂಡಿವೆ. ಇದರಿಂದಾಗಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ಈ ಟ್ಯಾಬ್ಲೆಟ್ ಮಾರುಕಟ್ಟೆಗೆ ಎಂಟ್ರಿ ನೀಡಬಹುದು ಎಂದು ಹೇಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ನೀವು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.
ಪೊಕೊ F6 ಕ್ಯಾಮೆರಾ ಮತ್ತು ಬೆಲೆ ವಿವರ ಲೀಕ್: ಈ ನಡುವೆ ಪೊಕೊ F6 ಲಾಂಚ್ ಕುರಿತು ವದಂತಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ IMX920 ಪ್ರಾಥಮಿಕ ಕ್ಯಾಮೆರಾ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದ್ದು, ಸುಮಾರು 40,000 ರೂ. ಗಳ ಬೆಲೆಯಲ್ಲಿ ಈ ಫೋನ್ ಲಭ್ಯ ಇರಬಹುದು ಎಂದು ಊಹಿಸಲಾಗಿದೆ.


Click it and Unblock the Notifications








