POCO: ನಿಮಗೆ ಹೆಚ್ಚುವರಿ ಸೇವೆ ನೀಡಲು ಕೈ ಜೋಡಿಸಿದ ಏರ್‌ಟೆಲ್, ಪೊಕೊ! ಫ್ರೀ ಡೇಟಾ..
ಉತ್ತಮವಾದ ಡೇಟಾ ಇದ್ದರೆ ಮಾತ್ರ ಯಾವುದೇ ಸ್ಮಾರ್ಟ್‌ಫೋನ್ ಅನ್ನು ಬಳಕೆ ಮಾಡಲು ಖುಷಿ ಎನಿಸುತ್ತದೆ. ಡೇಟಾ ಏನಾದರೂ ಇಲ್ಲ ಎಂದರೆ ಅದು ನಿಷ್ಕ್ರಿಯ ಡಿವೈಸ್‌ನಂತೆ. ಈ ಕಾರಣಕ್ಕೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಅತ್ಯುತ್ತಮವಾದ ಹೊಸ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಿವೆ. ಇದರ ಭಾಗವಾಗಿ ಈಗ ಪೊಕೊ ಹಾಗೂ ಏರ್‌ಟೆಲ್ (Poco,Airtel) ಹೊಸ ಸಂಚಲನವನ್ನೇ ಉಂಟು ಮಾಡಿವೆ.
ಹೌದು, ಪೊಕೊ ಸಂಸ್ಥೆಗೂ ಏರ್‌ಟೆಲ್‌ಗೂ ಏನು ಸಂಬಂಧ ಎಂದು ನೀವು ಅಂದುಕೊಂಡಿರಬಹುದು. ಆದರೆ ಸಂಬಂಧ ಇದೆ. ಅಂದರೆ ಏರ್‌ಟೆಲ್ ಭಾರತೀಯ ಟೆಲಿಕಾಂ ಉದ್ಯಮದ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿದ್ದು, ಪೊಕೊ ಸಹ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಬ್ರಾಂಡ್ ಆಗಿದೆ. ಅದರಂತೆ ಪೊಕೊ ಮತ್ತು ಏರ್‌ಟೆಲ್ ಕೈಜೋಡಿಸಿದ್ದು, ಪೊಕೊದ ಈ ಫೋನ್ ಬಳಕೆದಾರರು ಏರ್‌ಟೆಲ್ ಮೂಲಕ ಅತ್ಯುತ್ತಮವಾದ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಈ ಎರಡೂ ಸಂಸ್ಥೆಗಳು ಒಂದಾಗಿ ಬಳಕೆದಾರರಿಗೆ ಏನೆಲ್ಲಾ ನೀಡುತ್ತಿವೆ ಅನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಫೋನ್ ಖರೀದಿದಾರರಿಗೆ ಬಂಫರ್ ಕೊಡುಗೆ: ಏರ್‌ಟೆಲ್ ಹಾಗೂ ಪೊಕೊ ಸಹಯೋಗದ ಭಾಗವಾಗಿ, ಏರ್‌ಟೆಲ್ ಈಗ ಪೊಕೊ M6 5G ಖರೀದಿಸುವ ಬಳಕೆದಾರರಿಗೆ ಉಚಿತ ಡೇಟಾವನ್ನು (Free data) ನೀಡುತ್ತಿದೆ. ಏರ್‌ಟೆಲ್‌ನ ಉಚಿತ ಡೇಟಾ ಪ್ರಯೋಜನವು ಹೊಸ ಬಜೆಟ್ ಬೆಲೆಯ ಪೊಕೊ M6 5G (Poco M6 5G) ಫೋನ್ ಬಳಕೆದಾರರಿಗೆ ಸಂತಸ ನೀಡಲಿದೆ. ಈ ಪೊಕೊ M6 5G ಫೋನ್ ಅನ್ನು ಕಳೆದ ವಾರ ಭಾರತದಲ್ಲಿ ಲಾಂಚ್ ಮಾಡಲಾಗಿದೆ.
ಏನಿದು ಉಚಿತ ಆಫರ್?: ಏರ್‌ಟೆಲ್ ಹಾಗೂ ಪೊಕೊದ ಹೆಚ್ಚುವರಿ ಡೇಟಾ ಆಫರ್ 22 ಡಿಸೆಂಬರ್ 2023 ರಿಂದ 31 ಮೇ 2024 ರವರೆಗೆ ಲಭ್ಯವಿರುತ್ತದೆ. ಪೊಕೊ M6 5G ಫೋನ್ ಹೊಂದಿರುವ ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರು (Airtel prepaid customers) ಈ ಆಫರ್ ಅವಧಿಯಲ್ಲಿ 50GB ಹೆಚ್ಚುವರಿ ಡೇಟಾವನ್ನು ಉಚಿತವಾಗಿ ಪಡೆಯಬಹುದಾಗಿದೆ.ಅಂದರೆ ಪೊಕೊ M6 ಅನ್ನು ಖರೀದಿಸಿದ ಬಳಿಕ ಏರ್‌ಟೆಲ್ ಪ್ರಿಪೇಯ್ಡ್ ಸಿಮ್ ಅನ್ನು ಅದಕ್ಕೆ ಅಳವಡಿಸಬೇಕು.

ಏರ್‌ಟೆಲ್ ನೆಟ್‌ವರ್ಕ್‌ಗೆ ಯಶಸ್ವಿಯಾಗಿ ಸಂಪರ್ಕಗೊಂಡ ನಂತರ, ಬಳಕೆದಾರರು ತಲಾ 10GB ಯ 5 ಮಾಸಿಕ ಕೂಪನ್‌ಗಳನ್ನು ಈ ಮೂಲಕ ಪಡೆದುಕೊಳ್ಳಲು ಅರ್ಹರಾಗುತ್ತಾರೆ. ಹಾಗೆಯೇ ರಿವಾರ್ಡ್ಸ್ ವಿಭಾಗದ ಅಡಿಯಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಡೇಟಾ ಕೂಪನ್‌ಗಳನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಹೆಚ್ಚುವರಿ ಡೇಟಾ ಪ್ರಯೋಜನವನ್ನು ಪಡೆಯಬೇಕು ಎಂದರೆ ಏರ್‌ಟೆಲ್ ಗ್ರಾಹಕರು 299 ರೂ.ಗಳ ಸಕ್ರಿಯ ಯೋಜನೆಯನ್ನು ಹೊಂದಿರಬೇಕು.
ಪೊಕೊ M6 5G ಲಭ್ಯತೆ ಮತ್ತು ಬೆಲೆ: ಇನ್ನು ಈ ಪೊಕೊ M6 5G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ (Flipkart) ಹಾಗೂ ಪೊಕೊದ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಅದರಲ್ಲಿ 4GB/ 6GB/ 8GB RAM ಮತ್ತು 128GB/ 256GB ಇಂಟರ್ ಸ್ಟೋರೇಜ್ ಆಯ್ಕೆಗಳು ಲಭ್ಯ ಇದ್ದು, ಈ ಫೋನ್‌ಗಳು ನಿಮಗೆ ಗ್ಯಾಲಕ್ಟಿಕ್ ಬ್ಲಾಕ್ ಮತ್ತು ಓರಿಯನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ಪೊಕೊ M6 5G ಸ್ಮಾರ್ಟ್‌ಫೋನ್ ಬೆಲೆ 10,499 ರೂಪಾಯಿಗಳಿಂದ ಆರಂಭ ಆಗಲಿದೆ. ಆದರೆ, ಲಾಂಚ್ ಆಫರ್‌ನ ಭಾಗವಾಗಿ ಲಭ್ಯವಿರುವ ಬ್ಯಾಂಕ್ ರಿಯಾಯಿತಿಯೊಂದಿಗೆ ಈ 5G ಫೋನ್ ಅನ್ನು 10,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಅಂದರೆ ನೀವು ಇದೀಗ ಈ ಫೋನ್ ಅನ್ನು 9,499 ರೂ. ಗಳ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ.
ಹಾಗೆಯೇ ಈ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.74 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 16GB RAM, 50 ಮೆಗಾಪಿಕ್ಸೆಲ್ ಎಐ ಡ್ಯುಯಲ್ ಕ್ಯಾಮೆರಾ, 18W ಫಾಸ್ಟ್ ಚಾರ್ಜಿಂಗ್ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನಂತಹ ಆಕರ್ಷಕ ಫೀಚರ್ಸ್ ಅನ್ನು ಈ ಫೋನ್ ಪಡೆದಿದೆ.


Click it and Unblock the Notifications








