Home
ಸುದ್ದಿಜಾಲ

ಅಗ್ಗದ ಪೊಕೊ M3 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಏರಿಕೆ!

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಪೊಕೊ ಬ್ರ್ಯಾಂಡ್‌ ಈಗಾಗಲೇ ಭಿನ್ನ ಪ್ರೈಸ್‌ನಲ್ಲಿ ಕೆಲವು ಮಾಡೆಲ್‌ ಸ್ಮಾರ್ಟ್‌ಫೋನ್ ಪರಿಚಯಿಸಿ ಸೈ ಅನಿಸಿಕೊಂಡಿದೆ. ಆ ಪೈಕಿ ಸಂಸ್ಥೆಯ ಇತ್ತೀಚಿಗಿನ ಪೊಕೊ M3 ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿತ್ತು. ಆದ್ರೆ ಇದೀಗ ಪೊಕೊ M3 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.

ಸ್ಮಾರ್ಟ್‌ಫೋನ್‌

ಹೌದು, ಪೊಕೊ ಕಂಪೆನಿ ತನ್ನ ಜನಪ್ರಿಯ ಪೊಕೊ M3 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ 500ರೂ. ಹೆಚ್ಚಳ ಆಗಿದೆ. ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ಮತ್ತು 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. 64GBಯ ಬೇಸ್‌ ವೇರಿಯಂಟ್‌ ದರದವು 11,499ರೂ. ಆಗಿದೆ ಹಾಗೆಯೇ 128GB ಸ್ಟೋರೇಜ್‌ ವೇರಿಯಂಟ್‌ ದರವು 12,499ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವುದು ಹೈಲೈಟ್‌ ಆಗಿದೆ. ಇನ್ನುಳಿದಂತೆ ಯಾವೆಲ್ಲಾ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

ಪೊಕೊ M3 ಸ್ಮಾರ್ಟ್‌ಪೋನ್‌ 1,080x2,400 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಗಿದ್ದು, 60 Hz ರೀಫ್ರೇಶ್ ರೇಟ್ ಅನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್‌ ಸೌಲಭ್ಯವನ್ನು ಪಡೆದಿದೆ.

ಯಾವ ಪ್ರೊಸೆಸರ್‌

ಯಾವ ಪ್ರೊಸೆಸರ್‌

ಪೊಕೊ M3 ಸ್ಮಾರ್ಟ್‌ಪೋನ್‌ ಸ್ನ್ಯಾಪ್‌ಡ್ರಾಗನ್ 662 SOC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಬೆಂಬಲವನ್ನು ಪಡೆದಿದೆ. 6GB RAM ಮತ್ತು 64GB ಹಾಗೂ 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. ಇದಲ್ಲದೆ ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳಬಹುದಾದ ಅವಕಾಶ ಇದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಪೊಕೊ M3 ಸ್ಮಾರ್ಟ್‌ಪೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2ಎಂಪಿ ಕ್ಯಾಮೆರಾ ಸೆನ್ಸಾರ್‌, ಮೂರನೇ ಕ್ಯಾಮೆರಾ 2ಎಂಪಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಪೊಕೊ M3 ಸ್ಮಾರ್ಟ್‌ಪೋನ್‌ 6000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್ V5.0, GPS, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Poco M3 Price Hike: Two Variants Now Cost More In Offline, Online Markets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+