ಭಾರೀ ಬೆಲೆ ಇಳಿಕೆ ಕಂಡ ಪೊಕೊ M4 ಪ್ರೊ ಫೋನ್!..ಖರೀದಿಗೆ ಯೋಗ್ಯವೇ?
ಪೊಕೊ ಮೊಬೈಲ್ ಖರೀದಿಸುವ ಗ್ರಾಹಕರೇ ಇಲ್ಲಿ ಗಮನಿಸಿ. ಇ ಕಾಮರ್ಸ್ ತಾಣ ಅಮೆಜಾನ್ ನಲ್ಲಿ ಪೊಕೊ M4 ಪ್ರೊ ಸ್ಮಾರ್ಟ್‌ಫೋನ್ ಈಗ ಬೊಂಬಾಟ್ ರಿಯಾಯಿತಿ ಪಡೆದಿದೆ. ಈ ಮೂಲಕ ಪೊಕೊ M4 ಪ್ರೊ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಮತ್ತಷ್ಟು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಪೊಕೊ M4 ಪ್ರೊ ಸ್ಮಾರ್ಟ್‌ಫೋನ್ 36% ರಷ್ಟು ರಿಯಾಯಿತಿ ಪಡೆದಿದ್ದು, 13,999ರೂ. ಗಳ ರಿಯಾಯಿತಿ ಬೆಲೆಗೆ ಖರೀದಿಗೆ ಲಭ್ಯವಾಗಲಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕೊಡುಗೆಯಿಂದಾಗಿ ಈ ಫೋನ್ 21,999 ರೂ. ಗಳಿಗೆ ಖರೀದಿಸಬಹುದಾಗಿದೆ.

ಪೊಕೊ M4 ಪ್ರೊ ಮೊಬೈಲ್ 8GB RAM ಸ್ಟೋರೇಜ್ ವೇರಿಯಂಟ್ ಆಫರ್‌ನಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G96 SoC ಪ್ರೊಸೆಸರ್ ಪವರ್ ಪಡೆದಿದೆ. ಇನ್ನುಳಿದಂತೆ ಪೊಕೊ M4 ಪ್ರೊ ಮೊಬೈಲ್ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೊಕೊ M4 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಮಾಹಿತಿ : ಪೊಕೊ M4 ಪ್ರೊ ಮೊಬೈಲ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ HD+ ಅಮೋಲೆಡ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಜೊತೆಗೆ 1,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಒಳಗೊಂಡಿದ್ದು, 180Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಇದರೊಂದಿಗೆ ಡಿಸ್‌ಪ್ಲೇಯು 409ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ.
ಪೊಕೊ M4 ಪ್ರೊ ಪ್ರೊಸೆಸರ್ ಪವರ್ ಯಾವುದು : ಪೊಕೊ M4 ಪ್ರೊ ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G96 SoC ಪ್ರೊಸೆಸರ್ ಪಡೆದಿದ್ದು, ಆಂಡ್ರಾಯ್ಡ್ 11 ಸಪೋರ್ಟ್ ನೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 6GB RAM ಮತ್ತು 64 GB, 6GB RAM + 128 GB , 8 GB RAM + 256 GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಯನ್ನು ಪಡೆದಿದೆ.
ಇದರ ಜೊತೆಗೆ ಈ ಫೋನ್ 11GB ವರೆಗೆ ಲಭ್ಯವಿರುವ ಮೆಮೊರಿ ವಿಸ್ತರಿಸಲು ಡೈನಾಮಿಕ್ RAM ವಿಸ್ತರಣೆ ಪಡೆದಿದೆ. ಹಾಗೆಯೇ ಮೈಕ್ರೋ ಎಸ್ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶ ಸಹ ಇದೆ.
ಪೊಕೊ M4 ಪ್ರೊ ಕ್ಯಾಮೆರಾ ಸೆನ್ಸಾರ್ : ಈ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಹಾಗೂ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಪಡೆದಿದೆ. ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.
ಪೊಕೊ M4 ಪ್ರೊ ಬ್ಯಾಟರಿ ಮತ್ತು ಇತರೆ ಸೌಲಭ್ಯ : ಪೊಕೊ M4 ಪ್ರೊ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಇದಕ್ಕೆ ಪೂರಕವಾಗಿ 33W ಫಾಸ್ಟ್ ಚಾರ್ಜಿಂಗ್ ಸಫೋರ್ಟ್ ಪಡೆದಿದೆ. ಇದರೊಂದಿಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G LTE, Wi-Fi 802.11 a/b/g/n, ಬ್ಲೂಟೂತ್ v5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು IR ಬ್ಲಾಸ್ಟರ್ ಸಪೋರ್ಟ್ ಇದೆ.


Click it and Unblock the Notifications








