ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದ ಈ ಫೋನ್ ಈಗ 8,749ರೂ. ಗಳಿಗೆ ಲಭ್ಯ!
ಪೊಕೊ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಫೋನ್‌ಗಳ ಮೂಲಕ ಗಮನ ಸೆಳೆದಿದೆ. ಪೊಕೊ ಭಿನ್ನ ಶ್ರೇಣಿಯ ಮೊಬೈಲ್‌ಗಳ ಆಯ್ಕೆ ಗ್ರಾಹಕರಿಗೆ ನೀಡಿದ್ದು, ಅವುಗಳಲ್ಲಿ ಆಕರ್ಷಕ ಫೀಚರ್ಸ್‌ನಿಂದ ಸದ್ದು ಮಾಡಿದ್ದ ಪೊಕೊ M5 ಸ್ಮಾರ್ಟ್‌ಫೋನ್ ಈಗ ಮತ್ತೆ ಸುದ್ದಿ ಮಾಡಿದೆ. ಇದೀಗ ಈ ಫೋನ್ ಭರ್ಜರಿ ರಿಯಾಯಿತಿ ಪಡೆದಿದ್ದು, ಗ್ರಾಹಕರು OMG ಎನ್ನುವಂತೆ ಮಾಡಿದೆ.
ಹೌದು, ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಪೊಕೊ M5 ಸ್ಮಾರ್ಟ್‌ಫೋನ್ 45% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್ 15,999ರೂ. ಗಳ ದರ ಪಡೆದಿದ್ದು, ಆದ್ರೆ ಆಫರ್‌ನಲ್ಲಿ 8,749ರೂ. ಗಳಿಗೆ ಗ್ರಾಹಕರು ಖರೀದಿ ಮಾಡಬಹುದು. ಅದಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳಿಂದ ಕೊಡುಗೆ ಸಹ ಲಭ್ಯ.

ಅಂದಹಾಗೆ ಪೊಕೊ M5 ಫೋನ್ ಮೀಡಿಯಾ ಟೆಕ್ ಹಿಲಿಯೋ G99 SoC ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಜೊತೆಗೆ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಬ್ಯಾಟರಿ 5,000 mAh ಸಾಮರ್ಥ್ಯದ ಬ್ಯಾಕ್‌ಅಪ್ ಪಡೆದಿದೆ. ಇನ್ನುಳಿದಂತೆ ಪೊಕೊ M5 ಮೊಬೈಲ್‌ನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೊಕೊ M5 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಪೊಕೊ M5 ಫೋನ್ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 30Hz ನಿಂದ 90Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಈ ಡಿಸ್‌ಪ್ಲೇ 240Hz, DCI-P3 ಬಣ್ಣದ ಹರವುಗಳ ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ.
ಪೊಕೊ M5 ಪ್ರೊಸೆಸರ್ ಕಾರ್ಯವೈಖರಿ : ಪೊಕೊ M5 ಫೋನ್ ಆಕ್ಟಾ ಕೋರ್ 6nm ಮೀಡಿಯಾ ಟೆಕ್ ಹಿಲಿಯೋ G99 SoC ಪ್ರೊಸೆಸರ್ ಸಾಮರ್ಥ್ಯ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಸಪೋರ್ಟ್‌ನೊಂದಿಗೆ ಕೆಲಸ ಮಾಡುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಅನ್ನು ಹೊಂದಿದೆ. ಇದಲ್ಲದೆ ಟರ್ಬೊ RAM ಫೀಚರ್ಸ್ ಅನ್ನು ಬಳಸಿಕೊಂಡು RAM ಅನ್ನು ವಿಸ್ತರಿಸಲು ಅವಕಾಶ ಮಾಡುತ್ತದೆ
ಪೊಕೊ M5 ಕ್ಯಾಮೆರಾ ಸೆನ್ಸಾರ್ ರಚನೆ ಮಾಹಿತಿ : ಪೊಕೊ M5 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಪೊಕೊ M5 ಬ್ಯಾಟರಿ ಮತ್ತು ಇತರೆ ಆಯ್ಕೆಗಳು : ಪೊಕೊ M5 ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಅನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಈ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಪ್ಲೇಟೈಮ್ ಅನ್ನು ಒದಗಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5, GPS/ A-GPS, ಇನ್‌ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಪಡೆದಿದೆ.


Click it and Unblock the Notifications








