Home
ಸುದ್ದಿಜಾಲ

ಬಿಗ್‌ ಆಫರ್‌!..ಈ ಜನಪ್ರಿಯ ಮೊಬೈಲ್‌ ಈಗ 10,000ರೂ. ಒಳಗೆ ಖರೀದಿಗೆ ಲಭ್ಯ!

ಪ್ರಮುಖ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಪೈಕಿ ಫ್ಲಿಪ್‌ಕಾರ್ಟ್‌ ತಾಣವು ಸಹ ಒಂದಾಗಿದೆ. ಈ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ಏನಾದರೊಂದು ಸೇಲ್‌ ಮೇಳ ಆಯೋಜಿಸುತ್ತ ಸಾಗಿದೆ. ಸದ್ಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಬಜೆಟ್‌ ಬೆಲೆಯಲ್ಲಿ ಇತ್ತೀಚಿಗೆ ಲಾಂಚ್‌ ಆಗಿರುವ ಪೊಕೊ M6 5G ಸ್ಮಾರ್ಟ್‌ಫೋನ್‌ ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಪೊಕೊ M6 5G ಸ್ಮಾರ್ಟ್‌ಫೋನ್‌ ಶೇ. 26% ರಷ್ಟು ನೇರ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 4 GB RAM + 128 GB ಸ್ಟೋರೇಜ್‌ ವೇರಿಯಂಟ್‌ ರಿಯಾಯಿತಿಯಲ್ಲಿ 9,499ರೂ. ಗಳ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇಷ್ಟೆ ಅಲ್ಲದೇ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಲಭ್ಯ ಇತರೆ ಆಫರ್‌ಗಳನ್ನು ಕೂಡಾ ಗ್ರಾಹಕರು ಪಡೆಯಬಹುದಾಗಿದೆ.

ಬಿಗ್‌ ಆಫರ್‌!..ಈ ಜನಪ್ರಿಯ ಮೊಬೈಲ್‌ ಈಗ 10,000ರೂ. ಒಳಗೆ ಖರೀದಿಗೆ ಲಭ್ಯ!

ಅಂದಹಾಗೆ ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಹಾಗೆಯೇ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆಗಳನ್ನು ಇದು ಒಳಗೊಂಡಿದೆ. ಇನ್ನುಳಿದಂತೆ ಪೊಕೊ M6 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಪೊಕೊ M6 5G ಫೋನಿನ ಫೀಚರ್ಸ್‌ ಮಾಹಿತಿ

ಪೊಕೊ ಸಂಸ್ಥೆಯ ಈ ಮೊಬೈಲ್‌ 6.74 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡಲಿದ್ದು, 600nits ಗರಿಷ್ಠ ಬ್ರೈಟ್‌ನೆಸ್‌ ಒದಗಿಸಲಿದೆ. ಇನ್ನು ಡಿಸ್‌ಪ್ಲೇ 180Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಬೆಂಬಲ ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಒಳಗೊಂಡಿದೆ.

ಬಿಗ್‌ ಆಫರ್‌!..ಈ ಜನಪ್ರಿಯ ಮೊಬೈಲ್‌ ಈಗ 10,000ರೂ. ಒಳಗೆ ಖರೀದಿಗೆ ಲಭ್ಯ!

ಅದೇ ರೀತಿ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ MIUI 14 ನಲ್ಲಿ ಕಾರ್ಯ ಮಾಡುತ್ತದೆ. ಇದರ ಜೊತೆಗೆ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಇದೆ.

ಪೊಕೊ ಸಂಸ್ಥೆಯ ಈ 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇನ್ನು ಕ್ಯಾಮೆರಾ ಜೊತೆಗೆ PDAF ಮತ್ತು LED ಫ್ಲ್ಯಾಷ್ ಅನ್ನು ಆಯ್ಕೆ ಕೂಡಾ ಲಭ್ಯ. ಇನ್ನು ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಪೊಕೊ ಕಂಪನಿಯ ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್‌ ಚಾರ್ಜಿಂಗ್ ಅನ್ನು ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ Wi-Fi 5, ಡ್ಯುಯಲ್ ಸಿಮ್, 5G, ಬ್ಲೂಟೂತ್ 5.3, ಮತ್ತು GPS ಸಪೋರ್ಟ್‌ ಒಳಗೊಂಡಿದೆ.

ಪೊಕೊ M6 5G ಮೊಬೈಲ್‌ 4GB RAM + 128GB, 6GB RAM + 128GB ಹಾಗೂ 8GB RAM + 256GB ಸ್ಟೋರೇಜ್‌ ಆಯ್ಕೆಯಲ್ಲಿ ಗ್ರಾಹಕರು ಖರೀದಿಸಬಹುದು. ಇನ್ನು ಈ ಮೊಬೈಲ್‌ ಓರಿಯನ್ ಬ್ಲೂ ಮತ್ತು ಗ್ಯಾಲಕ್ಟಿಕ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಸಿಗಲಿದ್ದು, ಖರೀದಿದಾದರು ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಕೊಳ್ಳಬಹುದು.

Best Mobiles in India

English summary
POCO M6 5G available at huge price drop in India. Now available under Rs 10,000 in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+