Smartphones:48MP ಗಿಂತಲೂ ಹೆಚ್ಚಿನ ಕ್ಯಾಮೆರಾ ಸಾಮರ್ಥ್ಯದ 10 ಸಾವಿರದ ಒಳಗಿರುವ ಸ್ಮಾರ್ಟ್‌ಫೋನ್‌ಗಳಿವು!
ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಬಳಕೆದಾರರಿಗೆ ವಿವಿಧ ರೀತಿಯ ಅಗತ್ಯತೆಗಳನ್ನು ಪೂರೈಸುವ ಕೆಲಸ ಮಾಡುತ್ತವೆ. ಅದರಂತೆ ಬಜೆಟ್ ಬೆಲೆಯಿಂದ ದುಬಾರಿ ಬೆಲೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಲಭ್ಯ ಇದ್ದು, ಈ ಫೋನ್‌ಗಳ ವಿಭಾಗದಲ್ಲಿ ಭಾರತದಲ್ಲಿ ಬಜೆಟ್ ಬೆಲೆಯ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ.
ಹೌದು, ಬಜೆಟ್ ಬೆಲೆಯ ಫೋನ್‌ಗಳನ್ನು ವಿವಿಧ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಅನಾವರಣ ಮಾಡಿಕೊಂಡು ಬಂದಿವೆ. ಅದರಲ್ಲಿ ರಿಯಲ್‌ಮಿ, ಪೊಕೊ, ಐಟೆಲ್, ಸ್ಯಾಮ್‌ಸಂಗ್ ಕಂಪೆನಿ ಸೇರಿದಂತೆ ಅನೇಕ ಕಂಪೆನಿಯ ಫೋನ್‌ಗಳು 10 ಸಾವಿರದ ಒಳಗೆ ಬೆಲೆ ಹೊಂದಿರುವ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿವೆ. ಅದರಲ್ಲಿ ಪ್ರಮುಖವಾದ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಹಾಗೂ ಅವುಗಳ ಬೆಲೆ ಮತ್ತು ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪೊಕೊ C55: ಪೊಕೊ (Poco C55) ಸ್ಮಾರ್ಟ್‌ಫೋನ್‌ಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅದರಂತೆ ಈ ಪೊಕೊ C5 ಸ್ಮಾರ್ಟ್‌ಫೋನ್ 6,499 ರೂ.ಗಳ ಬೆಲೆಯಲ್ಲಿ ಲಭ್ಯ ಇದ್ದು, ಇದು ಹಿಲಿಯೊ G85 ಪ್ರೊಸೆಸರ್ ಬಲ, 4 GB RAM, 64 GB ಇಂಟರ್ ಸ್ಟೋರೇಜ್ ಆಯ್ಕೆ ಮತ್ತು 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 10W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಫೋನ್ 50 MP ರಿಯರ್ ಹಾಗೂ 5MP ಸೆಲ್ಫಿ ಕ್ಯಾಮೆರಾ ಹೊಂದಿದೆ.
ಪೊಕೊ M6 5G: ಈ ಸ್ಮಾರ್ಟ್‌ಫೋನ್ (Poco M6 5G) ಅನ್ನು ನೀವು 9,999 ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇದು 50 MP ನೊಂದಿಗೆ ಡ್ಯುಯಲ್ ರಿಯರ್ ಹಾಗೂ 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದರ ಜೊತೆಗೆ 6.74 ಇಂಚಿನ 720 x 1650 ಪಿಕ್ಸೆಲ್ ಸ್ಕ್ರೀನ್ ಸಾಮರ್ಥ್ಯದ 90 Hz ರಿಫ್ರೆಶ್ ರೇಟ್‌ನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್ ಬಲ, 4 GB RAM, 128 GB ಇಂಟರ್ ಸ್ಟೋರೇಜ್ ಆಯ್ಕೆ ಮತ್ತು 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿಲ ಕಾಣಬಹುದಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8: ಈ ಫೋನ್ (Infinix Smart 8) 7,499 ರೂ.ಗಳ ಬೆಲೆ ಹೊಂದಿದ್ದು, 50 MP ಡ್ಯುಯಲ್ ರಿಯರ್ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಹಿಲಿಯೊ G36 ಪ್ರೊಸೆಸರ್ ಬಲದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4 GB RAM, 64 GB ಇಂಟರ್ ಸ್ಟೋರೇಜ್ ಬೆಂಬಲ, 5000 mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 10W ಫಾಸ್ಟ್ ಚಾರ್ಜಿಂಗ್ ಬೆಂಬಲದ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದು. ಪ್ರಮುಖವಾಗಿ ಈ ಫೋನ್ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 90 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ.
ರಿಯಲ್‌ಮಿ C53: ಈ ಫೋನ್ (Realme C53) ಅನ್ನು ನೀವು 9,449 ರೂ.ಗಳ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದ್ದು, 6.74 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಮತ್ತು 90 Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ 4 GB RAM, 128 GB ಇಂಟರ್ ಸ್ಟೋರೇಜ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಅಲ್ಲದೆ 108 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಶಿಯೋಮಿ ರೆಡ್ಮಿ 13C 4G: ಈ ಸ್ಮಾರ್ಟ್‌ಫೋನ್ (Xiaomi Redmi 13C 4G) 8,999 ರೂ.ಗಳ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದು, ಹಿಲಿಯೊ G85 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಜೊತೆಗೆ 6.74 ಇಂಚಿನ 720 x 1600 ಪಿಕ್ಸೆಲ್ ಸಾಮರ್ಥ್ಯದ 90 Hz ರಿಫ್ರೆಶ್ ರೇಟ್ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ಪಡೆದುಕೊಂಡಿದೆ. ಮುಖ್ಯವಾಗಿ ಈ ಫೋನ್ 50 MP + 2 MP + 0.08 MP ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ N55: ಈ ಸ್ಮಾರ್ಟ್‌ಫೋನ್ (Realme Narzo N55) 9,749 ರೂ.ಗಳ ಆಫರ್ ಬೆಲೆಗೆ ಲಭ್ಯ ಇದ್ದು, 6.72 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 90 Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮ ಎನಿಸಿದ್ದು, 64 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಮೂಲಕ ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್ ಆಗಿ ಗುರುತಿಸಿಕೊಂಡಿದೆ.


Click it and Unblock the Notifications








