Poco: ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಪೊಕೊದ ಈ ಫೋನ್‌ಗಳು! ಬೆಲೆ ಎಷ್ಟು ಗೊತ್ತಾ?
ಪೊಕೊ (Poco) ಭಾರತದಲ್ಲಿ ಭದ್ರ ನೆಲೆ ಕಂಡುಕೊಳ್ಳುತ್ತಿದೆ. ಈ ಕಾರಣಕ್ಕೆ ಇಲ್ಲಿ ಪೊಕೊದ ಫೋನ್‌ಗಳು ಹೆಚ್ಚು ಹೆಚ್ಚು ಸೇಲ್ ಆಗುತ್ತಿದ್ದು, ಇದರೊಂದಿಗೆ ಈಗಾಗಲೇ ಅನಾವರಣ ಆಗಿರುವ ಎರಡು ಹೊಸ ಫೋನ್‌ಗಳು ಹೊಸ ಬಣ್ಣದಲ್ಲಿ ಮತ್ತೆ ಲಾಂಚ್ ಆಗಿವೆ.
ಹೌದು, ಪೊಕೊ ಭಾರತದಲ್ಲಿ ಪೊಕೊ ಸಿ65 ಮತ್ತು ಪೊಕೊ ಎಂ6 5ಜಿ (Poco C65 and Poco M6 5G) ಎಂಬ ಬಜೆಟ್ ಸ್ಮಾರ್ಟ್‌ಫೋನ್‌ಗಳ ಹೊಸ ಬಣ್ಣದ ಆವೃತ್ತಿಯನ್ನು ಅನಾವರಣ ಮಾಡಿದ್ದು, ಈ ಫೋನ್‌ಗಳನ್ನು ಖರೀದಿ ಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಹಾಗೆಯೇ ಹೊಸ ಬಣ್ಣದ ಫೋನ್‌ಗಳನ್ನು ನೀವು ಫೆಬ್ರವರಿ 16 ರಿಂದ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಯಾವ ಬಣ್ಣದಲ್ಲಿ ಕಾಣಿಸಿಕೊಂಡಿವೆ?, ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪೊಕೊ ಸಿ65 ಮತ್ತು ಪೊಕೊ ಎಂ6 5ಜಿ: ಪೊಕೊ ಸಿ65 ಹಾಗೂ ಪೊಕೊ ಎಂ6 5ಜಿ ಸ್ಮಾರ್ಟ್‌ಫೋನ್‌ಗಳು ಈಗ ಪಾಸ್ಟಲ್ ಗ್ರೀನ್ ಮತ್ತು ಪೋಲಾರಿಸ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿವೆ. ಹಾಗೆಯೇ ಈ ಹೊಸ ಬಣ್ಣ ಹೊಂದಿರುವ ಫೋನ್‌ಗಳು 16 ರಂದು ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಆಗಲಿದೆ. ಪೊಕೊ ಸಿ65 ಕೈಗೆಟುಕುವ 4ಜಿ ವಿಭಾಗದಲ್ಲಿ ಸ್ಪರ್ಧಿಸಿದರೆ , ಪೊಕೊ ಎಂ6 ಬಜೆಟ್ ಬೆಲೆಯಲ್ಲಿ 5ಜಿ ಫೋನ್‌ಗಳ ವಿಭಾಗದಲ್ಲಿ ಸ್ಪರ್ಧಿಸಲಿದೆ.
ಪೊಕೊ ಸಿ65 ಮತ್ತು ಪೊಕೊ ಎಂ6 5ಜಿ ಹೊಸ ಕಲರ್ ವೇರಿಯಂಟ್ ಬೆಲೆ: ಭಾರತದಲ್ಲಿ ಪೊಕೊ ಸಿ65 ಸ್ಮಾರ್ಟ್‌ಫೋನ್‌ನ ಮೂಲ ವೇರಿಯಂಟ್ ಅಂದರೆ 4ಜಿಬಿ/128ಜಿಬಿ ಗೆ 7,499 ರೂ.ಗಳ ಬೆಲೆ ನಿಗದಿ ಮಾಡಿದ್ರೆ 6ಜಿಬಿ/128ಜಿಬಿ ಮತ್ತು 8ಜಿಬಿ/256ಜಿಬಿ ವೇರಿಯಂಟ್‌ಗಳು ಕ್ರಮವಾಗಿ 8,299 ರೂ.ಗಳು ಹಾಗೂ 9,499 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಈ ಫೋನ್ ಪಾಸ್ಟಲ್ ಬ್ಲೂ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಜೊತೆಗೆ ಪಾಸ್ಟಲ್ ಗ್ರೀನ್ ಬಣ್ಣದಲ್ಲಿ ಲಭ್ಯ ಇದೆ.

ಪೊಕೊ ಎಂ6 5ಜಿ ಸ್ಮಾರ್ಟ್‌ಫೋನ್ ವಿಚಾರಕ್ಕೆ ಬಂದರೆ 4ಜಿಬಿ/128ಜಿಬಿ ವೇರಿಯಂಟ್ 9,499 ರೂ.ಗಳ ಬೆಲೆ ಹೊಂದಿದ್ರೆ 6ಜಿಬಿ/128ಜಿಬಿ ಮತ್ತು 8ಜಿಬಿ/256ಜಿಬಿ ಸ್ಟೋರೇಜ್ ವೇರಿಯಂಟ್ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 10,499 ರೂ.ಗಳು ಮತ್ತು 11,999 ರೂ.ಗಳ ಬೆಲೆ ಹೊಂದಿದೆ. ಅದರಂತೆ ಈ ಫೋನ್ ಓರಿಯನ್ ಬ್ಲೂ ಮತ್ತು ಗ್ಯಾಲಕ್ಟಿಕ್ ಬ್ಲ್ಯಾಕ್ ಬಣ್ಣದ ಜೊತೆಗೆ ಹೊಸ ಪೋಲಾರಿಸ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.
ಪೊಕೊ ಸಿ65 ಫೀಚರ್ಸ್: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ ಜಿ85 ಪ್ರೊಸೆಸರ್ ಬಲ ಹಾಗೂ ಮಾಲಿ-ಜಿ52 ಎಂಪಿ2 ಜಿಪಿಯು ನೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ 90ಹರ್ಟ್ಜ್ ರಿಫ್ರೆಶ್ ರೇಟ್‌ನೊಂದಿಗೆ 6.74 ಇಂಚಿನ ಹೆಚ್‌ಡಿ+ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಅಲ್ಲದೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಯೂನಿಟ್ ಮತ್ತು ಆಕ್ಸಿಲರಿ ಲೆನ್ಸ್ ಕಾಣಬಹುದಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಇದರೊಂದಿಗೆ ಈ ಬಜೆಟ್ ಬೆಲೆಯ ಫೋನ್ 18 ವ್ಯಾಟ್ಸ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಫೋನ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆ ಪಡೆದಿದೆ. ಇದರ ಜೊತೆಗೆ MIUI 14 ಆಧಾರಿತ ಆಂಡ್ರಾಯ್ಡ್ 13 ಓಎಸ್ ಅನ್ನು ಈ ಫೋನ್ ರನ್ ಮಾಡಲಿದೆ.

ಪೊಕೊ ಎಂ6 5ಜಿ ಫೀಚರ್ಸ್: ಮತ್ತೊಂದು ಫೋನ್‌ನ ಫೀಚರ್ಸ್ ಬಗ್ಗೆ ತಿಳಿಯುವುದಾದರೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸಲಿದ್ದು, ಮಾಲಿ-ಜಿ57 ಎಂಸಿ 2 ಗ್ರಾಪಿಕ್ಸ್ ಕಾರ್ಡ್ ಬಲ ಪಡೆದಿದೆ. ಇದರ ಜೊತೆಗೆ 1ಟಿಬಿ ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಬೆಂಬಲ ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು ದ್ವಿತೀಯ ಎಐ ಲೆನ್ಸ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ.
ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಶೂಟರ್ ಇದೆ. ಅಲ್ಲದೆ ಈ ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ಅನ್ನು ರನ್ ಮಾಡಲಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಒಳಗೊಂಡಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಫೋನ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ 6.74 ಇಂಚಿನ ಹೆಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಉಳಿದಂತೆ ಈ ಫೋನ್ 18 ವ್ಯಾಟ್ಸ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ.


Click it and Unblock the Notifications








