ಕಡಿಮೆ ಬೆಲೆಗೆ ಹೊಸ 5G ಮೊಬೈಲ್ ಬೇಕಿದ್ರೆ, ಈ ಆಫರ್ ನಿಮಗಾಗಿ!
ಇ ಕಾಮರ್ಸ್ ದೊಡ್ಡಣ್ಣ ಅಮೆಜಾನ್ (Amazon) ವೆಬ್‌ಸೈಟ್‌ನಲ್ಲಿ ಇದೀಗ ಡಿಸ್ಕೌಂಟ್‌ಗಳ ಕಿಟಕಿ ತೆರೆದಿದೆ. ಈ ಮಾರಾಟದಲ್ಲಿ ಕೆಲವು ಜನಪ್ರಿಯ ಮೊಬೈಲ್‌ಗಳು ಸಖತ್ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಆಗಲಿವೆ. ಆ ಪೈಕಿ ಅಮೆಜಾನ್ ತಾಣದಲ್ಲಿ ಪೊಕೊ ಸಂಸ್ಥೆಯು ಪೊಕೊ M6 5G (POCO M6 5G) ಮೊಬೈಲ್ ಭಾರೀ ಜಬರ್ದಸ್ತ್ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಒಳಗೊಂಡಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಪೊಕೊ M6 5G (POCO M6 5G) ಫೋನ್ ಶೇ. 33% ನೇರ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 4GB RAM + 64GB ವೇರಿಯಂಟ್ 7,999ರೂ. ಗಳ ಸಖತ್ ಡಿಸ್ಕೌಂಟ್ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಗ್ರಾಹಕರು ಎಕ್ಸ್‌ಚೇಂಜ್ ಆಫರ್ ಸಹ ಪಡೆದುಕೊಂಡರೆ, ಈ ಫೋನ್ ಅನ್ನು ಇನ್ನಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸಬಹುದು.

ಪೊಕೊ ಸಂಸ್ಥೆಯ ಈ 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳನ್ನು ಇದು ಪಡೆದಿದೆ. ಅಮೆಜಾನ್‌ನಲ್ಲಿ ಪೊಕೊ M6 5G ಅನ್ನು ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದು ಹಾಗಾದರೇ ಪೊಕೊ M6 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಪೊಕೊ M6 5G ಮೊಬೈಲ್ ಫೀಚರ್ಸ್ ಹೀಗಿವೆ
ಪೊಕೊ M6 5G ಫೋನ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದ್ದು, 600nits ಗರಿಷ್ಠ ಬ್ರೈಟ್‌ನೆಸ್ ಒದಗಿಸಲಿದೆ. ಇನ್ನು ಡಿಸ್‌ಪ್ಲೇ 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಬೆಂಬಲ ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಒಳಗೊಂಡಿದೆ.
ಪೊಕೊ M6 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯ ಮಾಡುತ್ತದೆ. ಇದರ ಜೊತೆಗೆ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್ ವೇರಿಯೆಂಟ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಇದೆ.
ಪೊಕೊ M6 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ಕ್ಯಾಮೆರಾ ಜೊತೆಗೆ PDAF ಮತ್ತು LED ಫ್ಲ್ಯಾಷ್ ಅನ್ನು ಆಯ್ಕೆ ಕೂಡಾ ಲಭ್ಯ. ಇನ್ನು ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಪೊಕೊ M6 5G ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ Wi-Fi 5, ಡ್ಯುಯಲ್ ಸಿಮ್, 5G, ಬ್ಲೂಟೂತ್ 5.3, ಮತ್ತು GPS ಸಪೋರ್ಟ್ ಒಳಗೊಂಡಿದೆ.


Click it and Unblock the Notifications








