Home
ಸುದ್ದಿಜಾಲ

Poco: ಶೀಘ್ರದಲ್ಲೇ ಲಾಂಚ್‌ ಆಗಲಿದೆ ಪೊಕೊ M6 ಪ್ಲಸ್‌ 5G: ಫೀಚರ್ಸ್‌ ಏನಿರಲಿವೆ?

ಪೊಕೊ (Poco) ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಪೊಕೊ ಶೀಘ್ರದಲ್ಲೇ ಪೊಕೊ M6 ಪ್ಲಸ್‌ 5G (Poco M6 Plus 5G) ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಮುಂದಾಗಿದೆ. ಈ ಫೋನ್ ಅನ್ನು ಇದೀಗ ಹೈಪರ್‌ಓಎಸ್‌ ಕೋಡ್‌ನಲ್ಲಿ ಗುರುತಿಸಲಾಗಿದೆ.

ಹೌದು, ಪೊಕೊ ಮಧ್ಯಮ ವರ್ಗದವರಿಗೆ ಹೊಸ ಉತ್ಪನ್ನಗಳನ್ನು ನೀಡುವುದನ್ನು ಮುಂದುವರೆಸಿದ್ದು, ಹೊಸ M ಸರಣಿಯ ಸ್ಮಾರ್ಟ್‌ಫೋನ್ ಪೊಕೊ M6 ಪ್ಲಸ್ 5G ಮಾದರಿ ರೆಡ್ಮಿ ನೋಟ್‌ 13R ಮಾದರಿಯ ಮರುಹೆಸರಿಸಿದ ರೂಪಾಂತರವಾಗಿದೆ ಎಂದೂ ಸಹ ಹೇಳಲಾಗಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಏನಿರಲಿವೆ?, ಇದರ ಬೆಲೆ ಎಷ್ಟಿರಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಪೊಕೊ M6 ಪ್ಲಸ್‌ 5G: ಫೀಚರ್ಸ್‌ ಏನಿರಲಿವೆ?

ಪೊಕೊ M6 ಪ್ಲಸ್‌ 5G ಸ್ಮಾರ್ಟ್‌ಫೋನ್‌: ಪೊಕೊ M6 ಪ್ಲಸ್‌ 5G ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿವೆ. ಈ ಫೋನ್‌ ಬಗ್ಗೆ ಗಿಜ್ಮೊಚಿನಾ ವರದಿ ಮಾಡಿದೆ. ಈ ವರದಿ ಪ್ರಕಾರ, ಈ ಫೋನ್‌ ಅನ್ನು ಮೊದಲೇ ತಿಳಿಸಿದಂತೆ ಹೈಪರ್ ಓಎಸ್‌ ಕೋಡ್‌ನಲ್ಲಿ ಮಾಡೆಲ್ ಸಂಖ್ಯೆ 'N19'ಮತ್ತು 'ಬ್ರೀಜ್'ಎಂಬ ಸಂಕೇತನಾಮದೊಂದಿಗೆ ಗುರುತಿಸಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಶಿಯೋಮಿ ಮೊದಲು ಚೀನಾದಲ್ಲಿ ರೆಡ್ಮಿ ನೋಟ್ 13R ಅನ್ನು ಘೋಷಣೆ ಮಾಡಿದ್ದು, M6 ಪ್ಲಸ್ 5G ಸಂಪೂರ್ಣವಾಗಿ ಈ ಫೋನ್‌ನ ರೀಬ್ರ್ಯಾಂಡ್ ಆಗಿರಬಹುದು ಎನ್ನಲಾಗಿದೆ.

ಈ ಫೋನ್‌ನ ಕೆಲವು ಫೀಚರ್ಸ್ ಬಗ್ಗೆ ತಿಳಿಯುವುದಾದರೆ, 6.79 ಇಂಚಿನ ಐಪಿಎಸ್‌ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 550 ನಿಟ್ಸ್‌ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ ಎನ್ನಲಾಗಿದೆ. TÜV ರೈನ್‌ಲ್ಯಾಂಡ್ ಪ್ರಮಾಣೀಕರಣದೊಂದಿಗೆ ಬರಲಲಿದೆ ಎನ್ನಲಾಗಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಪೊಕೊ M6 ಪ್ಲಸ್‌ 5G ಸ್ಮಾರ್ಟ್‌ಫೋನ್ ಮಧ್ಯಮ ವಿಭಾಗದಲ್ಲಿ ಪ್ರಬಲ ಕಾರ್ಯಕ್ಷಮತೆಯನ್ನು ನೀಡುವ ಗುರಿಯನ್ನು ಹೊಂದಿದ್ದು, ಈ ಪ್ರೊಸೆಸರ್ ದೈನಂದಿನ ಬಳಕೆಯಿಂದ ಗೇಮಿಂಗ್ ಕಾರ್ಯಕ್ಷಮತೆಗೆ ವ್ಯಾಪಕ ಶ್ರೇಣಿಯಲ್ಲಿ ಹೆಚ್ಚಿನ ದಕ್ಷತೆಯನ್ನು ಒದಗಿಸುತ್ತದೆ. 12GB ವರೆಗೆ RAM ಮತ್ತು 512GB UFS 2.2 ಶೇಖರಣಾ ಬೆಂಬಲದೊಂದಿಗೆ ಇದು ಬಳಕೆದಾರರಿಗೆ ಸಾಕಷ್ಟು ಸ್ಟೋರೇಜ್‌ ಆಯ್ಕೆಯನ್ನು ನೀಡಲಿದೆ.

ಸಾಫ್ಟ್‌ವೇರ್ ವಿಚಾರಕ್ಕೆ ಬಂದರೆ ಪೊಕೊ M6 ಪ್ಲಸ್‌ 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ಹೈಪರ್‌ಓಎಸ್‌ ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದು ಡಿವೈಸ್‌ನ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಹೈಪರ್‌ ಓಎಸ್‌ ಶಿಯೋಮಿಯ ಕಸ್ಟಮೈಸ್ ಮಾಡಿದ ಆಂಡ್ರಾಯ್ಡ್‌ ಸಾಫ್ಟ್‌ವೇರ್ ಆಗಿದೆ. ಈ ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯ ಎನಿಸಿದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

ಪೊಕೊ F6 ಬೆಲೆ: ಈ ಸ್ಮಾರ್ಟ್‌ಫೋನ್‌ ಅನ್ನು ಕೆಲವು ದಿನಗಳ ಹಿಂದೆ ಲಾಂಚ್‌ ಮಾಡಲಾಗಿದೆ. ಇದು 29,999 ರೂ.ಗಳ ಬೆಲೆಯೊಂದಿಗೆ ಲಭ್ಯ ಇರಲಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು,ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ.

ಜೊತೆಗೆ ಈ ಫೋನ್ IP64 ಧೂಳು ಮತ್ತು ನೀರಿನ ಪ್ರತಿರೋಧದೊಂದಿಗೆ ಕಾಣಿಸಿಕೊಂಡಿದ್ದು, 6.67 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಜೊತೆಗೆ 2712x1220 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ, 446 PPI ಹೊಂದಿರುವ ಕ್ರಿಸ್ಟಲ್‌ರೆಸ್ ಫ್ಲೋ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಶಿಯೋಮಿ ಹೈಪರ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್‌ ಆಗಲಿದೆ.

Best Mobiles in India

English summary
Poco continues to offer new products to the middle class and the new M series smartphone Poco M6 Plus 5G model is also said to be a rebranded variant of the Redmi Note 13R model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+