5000mAh ಬ್ಯಾಟರಿ ಇರುವ ಈ ಅಗ್ಗದ ಮೊಬೈಲ್ ಈಗ ಮತ್ತಷ್ಟು ಅಗ್ಗ!
ಜನಪ್ರಿಯ ಪೊಕೊ ಫೋನ್ ಕಂಪನಿಯು ಭಿನ್ನ ಶ್ರೇಣಿಯಲ್ಲಿ ಕೆಲವು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಸಂಸ್ಥೆಯ ಪೊಕೊ M6 ಪ್ಲಸ್ 5G ಮೊಬೈಲ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರು ಚಿತ್ತ ಸೆಳದಿದ್ದು, ಈ ಫೋನ್ ಅಗ್ಗದ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಸದ್ಯ ಪೊಕೊ M6 ಪ್ಲಸ್ 5G (POCO M6 Plus 5G) ಮೊಬೈಲ್ ಫ್ಲಿಪ್ಕಾರ್ಟ್ ತಾಣದಲ್ಲಿ ಭಾರೀ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯ.
ಹೌದು, ಫ್ಲಿಪ್ಕಾರ್ಟ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ಪೊಕೊ M6 ಪ್ಲಸ್ 5G (POCO M6 Plus 5G) ಸ್ಮಾರ್ಟ್ಫೋನ್ ಶೇ. 28% ರಷ್ಟು ನೇರ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನಿನ 6GB + 128GB ಸ್ಟೋರೇಜ್ನ ವೇರಿಯಂಟ್ 11,499ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಸಬಹುದು. ಅಂದಹಾಗೆ ಇದು ಸ್ನ್ಯಾಪ್ಡ್ರಾಗನ್ 4s (Snapdragon 4s) ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿದೆ.

ಇನ್ನು ಪೊಕೊ M6 ಪ್ಲಸ್ 5G ಮೊಬೈಲ್ 5,000mAh ಬ್ಯಾಟರಿ ಬ್ಯಾಕ್ಅಪ್ ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ವೈರ್ಡ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಅಲ್ಲದೇ 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ಪಡೆದಿದೆ. ಇನ್ನುಳಿದಂತೆ ಪೊಕೊ M6 ಪ್ಲಸ್ 5G (POCO M6 Plus 5G) ಫೋನಿನ ಇತರೆ ಫೀಚರ್ಸ್ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಪೊಕೊ M6 ಪ್ಲಸ್ 5G - ಫೀಚರ್ಸ್
ಪೊಕೊ M6 ಪ್ಲಸ್ 5G ಮೊಬೈಲ್ 6.79 ಇಂಚಿನ LCD ಡಿಸ್ಪ್ಲೇ ಅನ್ನು ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಡಿಸ್ಲ್ಪೇಯು 2400 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 550 ನಿಟ್ಗಳ ಗರಿಷ್ಠ ಬ್ರೈಟ್ನೆಸ್ ಅನ್ನು ಹೆಚ್ಚಿನ ಬ್ರೈಟ್ನೆಸ್ (450 ನಿಟ್ಗಳ ವಿಶಿಷ್ಟ ಬ್ರೈಟ್ನೆಸ್) ಮೋಡ್ನಲ್ಲಿ ಹೊಂದಿದೆ.
ಪೊಕೊ M6 ಪ್ಲಸ್ 5G ಮೊಬೈಲ್ Qualcomm Snapdragon 4 Gen 2 AE ಚಿಪ್ಸೆಟ್ ಪ್ರೊಸೆಸರ್ನಿಂದ ಕೆಲಸ ಮಾಡಲಿದೆ. ಎಲ್ಲಾ ಗ್ರಾಫಿಕ್ಸ್ ತೀವ್ರವಾದ ಕಾರ್ಯಗಳನ್ನು ನಿರ್ವಹಿಸಲು Adreno A613 GPU ನೊಂದಿಗೆ ಜೋಡಿಸಲಾಗಿದೆ. ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ಹೊಂದಿದೆ.
ಪೊಕೊ M6 ಪ್ಲಸ್ 5G ಮೊಬೈಲ್ Samsung ISOCELL HM6 ಸೆನ್ಸಾರ್ ಜೊತೆಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರ ಜೊತೆಗೆ, 2ಎಂಪಿ ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13 ಎಂಪಿ ಫ್ರಂಟ್ ಕ್ಯಾಮೆರಾ ಕೂಡ ಇದೆ.
ಪೊಕೊ M6 ಪ್ಲಸ್ 5G ಮೊಬೈಲ್ 5,030mAh ಬ್ಯಾಟರಿ ಬ್ಯಾಕ್ಅಪ್ ಸೌಲಭ್ಯ ಪಡೆದಿದೆ. ಅಲ್ಲದೇ ಇದು 33W ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು. IR ಬ್ಲಾಸ್ಟರ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ಪಡೆದುಕೊಂಡಿದೆ.
ಪೊಕೊ M6 ಪ್ಲಸ್ 5G ಫೋನ್ ಆಂಡ್ರಾಯ್ಡ್ 14 ಆಧಾರಿತ ಇತ್ತೀಚಿನ ಹೈಪರ್ ಓಎಸ್ನಲ್ಲಿ ಕಾರ್ಯ ನಿರ್ವಹಿಸುತ್ತದೆ. 2 ವರ್ಷಗಳ ಓಎಸ್ ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ಪ್ಯಾಚ್ಗಳೊಂದಿಗೆ ಬರುತ್ತದೆ. 5G, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.1, ಜಿಪಿಎಸ್ + ಗ್ಲೋನಾಸ್, ಯುಎಸ್ಬಿ ಟೈಪ್-ಸಿ ನಂತಹ ಸೌಲಭ್ಯ ಹೊಂದಿದೆ.


Click it and Unblock the Notifications