ಇಂದು POCO M6 Plus 5G ಸೇಲ್; ಬೆಲೆದ ಅಗ್ಗ, ಬೊಂಬಾಟ್ ಫೀಚರ್ಸ್!
ಜನಪ್ರಿಯ ಪೊಕೊ (POCO) ಕಂಪನಿಯ ಹೊಸ ಪೊಕೊ M6 ಪ್ಲಸ್ (Poco M6 Plus) ಮೊಬೈಲ್ ಮೀಡ್‌ರೇಂಜ್ ದರದ ಫೋನ್ ಆಗಿದೆ. ಈಗಾಗಲೇ ಗ್ರಾಹಕರ ಗಮನ ಸೆಳೆದಿರುವ ಈ ಸ್ಟೈಲಿಶ್ ಫೋನ್ ಇಂದು ಆಗಷ್ಟ್ 5 ರಂದು ಅಧಿಕೃತ ಫ್ಲಿಪ್‌ಕಾರ್ಟ್ ಇ ಕಾಮರ್ಸ್ (Flipkart) ವೆಬ್‌ಸೈಟ್ ಮೂಲಕ ಫಸ್ಟ್ ಮಾರಾಟ ಶುರು ಮಾಡಲಿದೆ. ಇದು ಅಗ್ಗದ ದರದಲ್ಲಿ ಕಾಣಿಸಿಕೊಂಡಿದ್ದರೂ ಸಹ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಈ ಫೋನ್ 5,030mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ನಲ್ಲಿ ಪೊಕೊ M6 ಪ್ಲಸ್ ( Poco M6 Plus) ಮೊಬೈಲ್ ಆಗಷ್ಟ್ 5 ರಂದು ಮಾರಾಟ (sale) ಶುರು ಮಾಡಲಿದೆ. ಈ ಮೊಬೈಲ್ Qualcomm Snapdragon 4 Gen 2 AE ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, 108 ಮೆಗಾ ಪಿಕ್ಸಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ.

ಹಾಗೆಯೇ ಪೊಕೊ M6 ಪ್ಲಸ್ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 13,499ರೂ. ಗಳು ಆಗಿದೆ. ಇನ್ನುಳಿದಂತೆ ಪೊಕೊ M6 ಪ್ಲಸ್ 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಪೊಕೊ M6 ಪ್ಲಸ್ 5G ಫೀಚರ್ಸ್
ಪೊಕೊ M6 ಪ್ಲಸ್ 5G ಮೊಬೈಲ್ 6.79 ಇಂಚಿನ LCD ಡಿಸ್ಪ್ಲೇ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಡಿಸ್ಲ್ಪೇಯು 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 550 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೆಚ್ಚಿನ ಬ್ರೈಟ್‌ನೆಸ್ (450 ನಿಟ್‌ಗಳ ವಿಶಿಷ್ಟ ಬ್ರೈಟ್‌ನೆಸ್) ಮೋಡ್‌ನಲ್ಲಿ ಹೊಂದಿದೆ.
ಪೊಕೊ M6 ಪ್ಲಸ್ 5G ಮೊಬೈಲ್ Qualcomm Snapdragon 4 Gen 2 AE ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಎಲ್ಲಾ ಗ್ರಾಫಿಕ್ಸ್ ತೀವ್ರವಾದ ಕಾರ್ಯಗಳನ್ನು ನಿರ್ವಹಿಸಲು Adreno A613 GPU ನೊಂದಿಗೆ ಜೋಡಿಸಲಾಗಿದೆ. ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ಹೊಂದಿದೆ.
ಪೊಕೊ M6 ಪ್ಲಸ್ 5G ಮೊಬೈಲ್ Samsung ISOCELL HM6 ಸೆನ್ಸಾರ್ ಜೊತೆಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರ ಜೊತೆಗೆ, 2ಎಂಪಿ ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13ಎಂಪಿ ಫ್ರಂಟ್ ಕ್ಯಾಮೆರಾ ಕೂಡ ಇದೆ.
ಪೊಕೊ M6 ಪ್ಲಸ್ 5G ಮೊಬೈಲ್ 5,030mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಅಲ್ಲದೇ ಇದು 33W ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು. IR ಬ್ಲಾಸ್ಟರ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ಪಡೆದುಕೊಂಡಿದೆ.
ಪೊಕೊ M6 ಪ್ಲಸ್ 5G ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಇತ್ತೀಚಿನ ಹೈಪರ್‌ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. 2 ವರ್ಷಗಳ ಓಎಸ್ ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ಪ್ಯಾಚ್‌ಗಳೊಂದಿಗೆ ಬರುತ್ತದೆ. 5G, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.1, ಜಿಪಿಎಸ್ + ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ನಂತಹ ಸೌಲಭ್ಯ ಹೊಂದಿದೆ.


Click it and Unblock the Notifications








