Home
ಸುದ್ದಿಜಾಲ

ಇಂದು ಪೊಕೊ M6 ಪ್ರೊ 5G ಫೋನಿನ ಫಸ್ಟ್‌ ಸೇಲ್‌; ಸಖತ್‌ ಆಫರ್‌ ಇದೆ!

ಪೊಕೊ ಮೊಬೈಲ್ ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಪರಿಚಯಿಸಿರುವ ಪೊಕೊ M6 ಪ್ರೊ 5G ಮೊಬೈಲ್‌ ಬೊಂಬಾಟ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಮೊಬೈಲ್‌ ಇಂದು (ಆ 9 ರಂದು) ಮಧ್ಯಾಹ್ನ 12 ರಿಂದ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್‌ ಸೇಲ್ ಶುರು ಮಾಡಲಿದೆ. ಈ ಫೋನ್‌ ಅಗ್ಗದ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಹೌದು, ಪೊಕೊ M6 ಪ್ರೊ 5G ಮೊಬೈಲ್‌ ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಸೆನ್ಸಾರ್ 50 ಮೆಗಾ ಪಿಕ್ಸಲ್‌ ಸೆನ್ಸಾರ್ ಆಗಿದೆ. ಹಾಗೆಯೇ ಈ ಮೊಬೈಲ್‌ 6GB + 64GB ಮತ್ತು 6GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರ ಜೊತೆಗೆ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ.

ಇಂದು ಪೊಕೊ M6 ಪ್ರೊ 5G ಫೋನಿನ ಫಸ್ಟ್‌ ಸೇಲ್‌; ಸಖತ್‌ ಆಫರ್‌ ಇದೆ!

ಪೊಕೊ M6 ಪ್ರೊ 5G ಮೊಬೈಲ್‌ ಆರಂಭಿಕ 64GB ವೇರಿಯಂಟ್‌ ಬೆಲೆಯು 10,999ರೂ. ಆಗಿದ್ದು, 128GB ವೇರಿಯಂಟ್‌ ಬೆಲೆಯು 12,999ರೂ. ಆಗಿದೆ. ಇನ್ನು ಈ ಫೋನ್‌ ಪವರ್‌ ಬ್ಲ್ಯಾಕ್ ಹಾಗೂ ಫಾರೆಸ್ಟ್‌ ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪೊಕೊ M6 ಪ್ರೊ 5G ಮೊಬೈಲ್‌ ಡಿಸ್‌ಪ್ಲೇ ಹಾಗೂ ವಿನ್ಯಾಸ: ಪೊಕೊ M6 ಪ್ರೊ 5G ಫೋನ್ 6.79 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, 2460 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಇದರ ಜೊತೆಗೆ 90Hz ಅಡಾಪ್ಟಿವ್ ರಿಫ್ರೆಶ್ ರೇಟ್ ಆಯ್ಕೆ ಇದ್ದು, 91% ಸ್ಕ್ರೀನ್-ಟು-ಬಾಡಿ ಅನುಪಾತ, 550 nits ಬ್ರೈಟ್‌ನೆಸ್‌ ಸೌಲಭ್ಯ ಹೊಂದಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಇದೆ.

ಪೊಕೊ M6 ಪ್ರೊ 5G ಮೊಬೈಲ್‌ ಪ್ರೊಸೆಸರ್‌ ಯಾವುದು: ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ 6GB + 64GB ಮತ್ತು 6GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಸಹ ಇದೆ. ಅಲ್ಲದೇ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಇದೆ.

ಪೊಕೊ M6 ಪ್ರೊ 5G ಮೊಬೈಲ್‌ ಕ್ಯಾಮೆರಾ ಸೆನ್ಸಾರ್‌ ಮಾಹಿತಿ : ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ನ ಸೆನ್ಸಾರ್‌ ಅನ್ನು ಹೊಂದಿದ್ದು, ಜೊತೆಗೆ ಎಲ್‌ಇಡಿ ಫ್ಲಾಶ್ ಲೈಟ್‌ ಆಯ್ಕೆ ಸಹ ಪಡೆದಿದೆ. ಸೆಕೆಂಡಿರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್‌ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ.

ಪೊಕೊ M6 ಪ್ರೊ 5G ಮೊಬೈಲ್‌ ಬ್ಯಾಟರಿ ಹಾಗೂ ಇತರೆ ಆಯ್ಕೆಗಳ ಮಾಹಿತಿ : ಪೊಕೊ M6 ಪ್ರೊ 5G ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್‌ ಪಡೆದಿದೆ. ಅಲ್ಲದೇ ಈ ಫೋನ್‌ 8.17mm ಸ್ಲಿಮ್ ರಚನೆ ಪಡೆದಿದ್ದು, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಇದೆ.

ಮೆಮೊರಿ ಹಾಗೂ ಬೆಲೆ : 6GB + 64GB ವೇರಿಯಂಟ್‌ ಬೆಲೆಯು 10,999ರೂ. ಆಗಿದ್ದು, 6GB + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 12,999ರೂ. ಆಗಿದೆ. ಇನ್ನು ಈ ಫೋನ್‌ ಪವರ್‌ ಬ್ಲ್ಯಾಕ್ ಹಾಗೂ ಫಾರೆಸ್ಟ್‌ ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಗ್ರಾಹಕರು ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಖರೀದಿಸಬಹುದಾಗಿದೆ. ಆಯ್ದ ಬ್ಯಾಂಕ್‌ಗಳಿಂದ ಕ್ಯಾಶ್‌ಬ್ಯಾಕ್‌ ಕೊಡುಗೆ ಲಭ್ಯ ಆಗಲಿದೆ.

Best Mobiles in India

English summary
poco M6 pro 5G first sale in india today via flipkart. price, specifications and offer details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+