Home
ಸುದ್ದಿಜಾಲ

5G smartphone: 10 ಸಾವಿರದೊಳಗೆ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ ಬೇಕೆ? ಇಲ್ಲಿವೆ ನೋಡಿ

ಈಗಂತೂ 5G ಸ್ಮಾರ್ಟ್‌ಫೋನ್‌ಗಳಿಗೆ (5G smartphone) ಎಲ್ಲಿಲ್ಲದ ಬೇಡಿಕೆ ಭಾರತದಲ್ಲಿ ನಿರ್ಮಾಣ ಆಗಿದೆ. ಈಗಾಗಲೇ 5G ಬೆಂಬಲಿತ ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವಲ್ಲಿ ಯಶಸ್ವಿಯಾಗಿವೆ. ಈ ನಡುವೆ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್‌ ಹಾಗೂ ಜಿಯೋ ಸಹ ಬಹುಪಾಲು 5G ವಿಸ್ತರಣೆಯನ್ನು ಪೂರ್ಣಗೊಳಿವೆ.

ಹೌದು, 5G ಸ್ಮಾರ್ಟ್‌ಫೋನ್‌ ಅಂದಾಕ್ಷಣ ನಿಮ್ಮ ಗಮನಕ್ಕೆ ಬರುವುದು ಹೆಚ್ಚಿನ ಬೆಲೆ ಹೊಂದಿರುತ್ತವೆ ಎಂಬುದು. ಆದರೆ, ಪ್ರಮುಖ ಬ್ರ್ಯಾಂಡ್‌ನ 5G ಸ್ಮಾರ್ಟ್‌ಫೋನ್‌ಗಳು ನಿಮಗೆ ಹತ್ತು ಸಾವಿರಕ್ಕೂ ಕಡಿಮೆ ಬೆಲೆಗೆ ಲಭ್ಯ ಇವೆ. ಅದರಲ್ಲಿ ಪೊಕೊ, ಐಟೆಲ್‌, ಲಾವಾ ಸೇರಿದಂತೆ ಇತರೆ ಕಂಪೆನಿಗಳ 5G ಫೋನ್‌ಗಳಿಗೆ ಬೇಡಿಕೆ ಇದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳು ಈ ಬೆಲೆಗೆ ಲಭ್ಯ ಇವೆ?, ಇವುಗಳ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ನೋಡೋಣ ಬನ್ನಿ.

10 ಸಾವಿರದೊಳಗೆ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ ಬೇಕೆ? ಇಲ್ಲಿವೆ ನೋಡಿ

ಪೊಕೊ M6 ಪ್ರೊ 5G : ಈ ಸ್ಮಾರ್ಟ್‌ಫೋನ್‌ (Poco M6 Pro 5G) ಅನ್ನು ನೀವು ಆಫರ್ ಬೆಲೆ 9,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 6.79 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 90 Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆಯುವ ಮೂಲಕ ಅತ್ಯುತ್ತಮವಾದ ವೀಕ್ಷಣೆಯ ಅನುಭವವನ್ನು ನೀಡಲಿದೆ. ಜೊತೆಗೆ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಬಲ, 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾದ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದೆ.

ಐಟೆಲ್‌ P55 5G : ಈ ಸ್ಮಾರ್ಟ್‌ಫೋನ್ (Itel P55 5G) ಸಹ 9,999 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು 6.6 ಇಂಚಿನ ಡಿಸ್‌ಪ್ಲೆ ಹೊಂದಿದ್ದು, 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹಾಗೂ 90 Hz ರಿಫ್ರೆಶ್‌ ರೆಟ್‌ ಆಯ್ಕೆಯೊಂದಿಗೆ ಡೈಮೆನ್ಸಿಟಿ 6080, ಆಕ್ಟಾ ಕೋರ್ ಪ್ರೊಸೆಸರ್‌ ಬಲ ಹಾಗೂ 6 GB RAM, 128 GB ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದೆ. ಜೊತೆಗೆ 50 MP ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದೆ.

10 ಸಾವಿರದೊಳಗೆ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ ಬೇಕೆ? ಇಲ್ಲಿವೆ ನೋಡಿ

ಲಾವಾ ಬ್ಲೇಜ್ 5G: ಈ ಫೋನ್ (Lava Blaze 5G) ನಿಮಗೆ 9,499ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹಾಗೂ 90 Hz ರಿಫ್ರೆಶ್‌ ರೇಟ್‌ ಮೂಲಕ ಉತ್ತಮ ಎನಿಸಿದೆ. ಉಳಿದಂತೆ ಡೈಮೆನ್ಸಿಟಿ 700 5G ಪ್ರೊಸೆಸರ್ ಬಲದೊಂದಿಗೆ 4 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 50 MP + 2 MP ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ರಚನೆ ಹೊಂದಿದೆ. ಇದರೊಂದಿಗೆ ಈ ಫೋನ್‌ ಸಹ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಉತ್ತಮ ಬ್ಯಾಕಪ್‌ ನೀಡಲಿದೆ.

10 ಸಾವಿರದೊಳಗೆ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ ಬೇಕೆ? ಇಲ್ಲಿವೆ ನೋಡಿ

ವಿವೋ T2x 5G : ಈ ಸ್ಮಾರ್ಟ್‌ಫೋನ್‌ (Vivo T2x 5G) ನಿಮಗೆ 11,999 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇ-ಕಾಮರ್ಸ್‌ ಸೈಟ್‌ನಲ್ಲಿನ ಕೆಲವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಂಡು ಹತ್ತು ಸಾವಿರದಲ್ಲಿ ಖರೀದಿ ಮಾಡಬಹುದು. ಈ ಫೋನ್ 6.58 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹಾಗೂ ವಾಟರ್ ಡ್ರಾಪ್ ನಾಚ್ ಶೈಲಿಯ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಡೈಮೆನ್ಸಿಟಿ 6020 ಪ್ರೊಸೆಸರ್‌, 4 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಉತ್ತಮ ಎನಿಸಿದೆ. ಇದರೊಂದಿಗೆ 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

Best Mobiles in India

English summary
In the 5G smartphone segment, Poco M6 Pro 5G, Itel P55 5G, Lava Blaze 5G, Vivo T2x 5G phones can be purchased for less than ten thousand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+