Home
ಸುದ್ದಿಜಾಲ

ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌ ಇರುವ ಈ ಮೊಬೈಲ್‌ನ ಆಫರ್‌ ಬೆಲೆ ತಿಳಿದ್ರೆ, ವಾವ್‌ ಅಂತೀರಾ!

ಅಮೆಜಾನ್‌ ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival Sale) ಅನ್ನು ಘೋಷಿಸಿದೆ. ಇದೇ ಸೆಪ್ಟೆಂಬರ್ 27 ರಿಂದ ಶುರುವಾಗಲಿರುವ ಈ ಸೇಲ್‌ನಲ್ಲಿ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಡಿಸ್ಕೌಂಟ್‌ ಪಡೆದುಕೊಂಡಿವೆ. ಅವುಗಳ ಪೈಕಿ ಪೊಕೊ M6 ಪ್ರೊ 5G (POCO M6 Pro 5G) ಸ್ಮಾರ್ಟ್‌ಫೋನ್‌ ಬಿಗ್ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಹುಬ್ಬೇರಿಸಿ ನೋಡುವಂತೆ ಆಗಿದೆ.

ಹೌದು, ಅಮೆಜಾನ್‌ ತಾಣದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರೆಡ್ಮಿ ಪೊಕೊ M6 ಪ್ರೊ 5G (POCO M6 Pro 5G) ಫೋನ್ ಶೇ. 24% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 6 GB + 128 GB ವೇರಿಯಂಟ್‌ 12,999ರೂ. ಗಳ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಗ್ರಾಹಕರು ಬ್ಯಾಂಕ್‌, ಎಕ್ಸ್‌ಚೇಂಜ್ ಹಾಗೂ ಇತರೆ ಆಫರ್‌ ಸಹ ಖರೀದಿ ಮಾಡಬಹುದಾಗಿದೆ.

ಸ್ನ್ಯಾಪ್‌ಡ್ರಾಗನ್‌ ಇರುವ ಈ ಮೊಬೈಲ್‌ನ ಆಫರ್‌ ಬೆಲೆ ತಿಳಿದ್ರೆ, ವಾವ್‌ ಅಂತೀರಾ!

ಈ ಮೊಬೈಲ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಅಲ್ಲದೇ 50 ಮೆಗಾ ಪಿಕ್ಸಲ್‌ ಸೆನ್ಸಾರ್ ಕ್ಯಾಮೆರಾ ಪಡೆದಿದ್ದು, ಇದು ಪವರ್‌ ಬ್ಲ್ಯಾಕ್ ಹಾಗೂ ಫಾರೆಸ್ಟ್‌ ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಪೊಕೊ M6 ಪ್ರೊ 5G ಮೊಬೈಲ್‌ನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಪೊಕೊ M6 ಪ್ರೊ 5G - ಫೀಚರ್ಸ್‌

ಪೊಕೊ M6 ಪ್ರೊ 5G ಮೊಬೈಲ್‌ 6.79 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು 2460 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸೌಲಭ್ಯ ಹೊಂದಿದೆ. ಹಾಗೆಯೇ ಇದರೊಂದಿಗೆ 90Hz ಅಡಾಪ್ಟಿವ್ ರಿಫ್ರೆಶ್ ರೇಟ್ ಪಡೆದಿದ್ದು, 91% ಸ್ಕ್ರೀನ್ ಟು ಬಾಡಿ ಅನುಪಾತ ಹಾಗೂ 550 nits ಬ್ರೈಟ್‌ನೆಸ್‌ ಸೌಲಭ್ಯ ಹೊಂದಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸಹ ಇದೆ.

ಪೊಕೊ M6 ಪ್ರೊ 5G ಮೊಬೈಲ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಸೌಲಭ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಒಳಗೊಂಡಿದೆ. ಹಾಗೆಯೇ ಇದು 6GB + 64GB ಹಾಗೂ 6GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇದರ ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಇದೆ.

ಪೊಕೊ M6 ಪ್ರೊ 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿರುವ ಜೊತೆಗೆ ಎಲ್‌ಇಡಿ ಫ್ಲಾಶ್ ಲೈಟ್‌ ಆಯ್ಕೆ ಕೂಡಾ ಒಳಗೊಂಡಿದೆ. ಇನ್ನು ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್‌ ಆಯ್ಕೆ ಪಡೆದಿದೆ. ಹಾಗೆಯೇ ಇದರ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ.

ಪೊಕೊ M6 ಪ್ರೊ 5G ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, 18W ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್‌ ಕಾಣಬಹುದಾಗಿದೆ. ಇದರ ಜೊತೆಗೆ ಈ ಫೋನ್‌ 8.17mm ಸ್ಲಿಮ್ ರಚನೆ ಪಡೆದಿದ್ದು, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ ಆಯ್ಕೆ ಸೌಲಭ್ಯ ಹೊಂದಿದೆ. ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಇದೆ.

Best Mobiles in India

English summary
POCO M6 Pro 5G now available at big discount price tag. check out details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+