Home
ಸುದ್ದಿಜಾಲ

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್‌: ಬೊಂಬಾಟ್‌ ಫೀಚರ್ಸ್‌, ಬಜೆಟ್‌ ಬೆಲೆ!

ಪೊಕೊ ಫೋನ್‌ಗಳಿಗೆ (Poco phone) ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ಕಂಪೆನಿಯ ಕೆಲವು ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದು, ಈ ನಡುವೆ ಬಜೆಟ್‌ ಬೆಲೆಯಲ್ಲಿ ಲಭ್ಯ ಆಗಿರುವ 5G ಫೋನ್‌ ಭಾರೀ ಸಂಚಲನವನ್ನೇ ಸೃಷ್ಟಿಮಾಡಿದೆ. ಈ ಫೋನ್ ಸ್ನಾಪ್‌ಡ್ರಾಗನ್ 4 ಜನ್‌ 2 ಪ್ರೊಸೆಸರ್‌ ಬಲ ಪಡೆದಿದೆ.

ಹೌದು, ಪೊಕೊ ಇದೀಗ ಬಜೆಟ್‌ ಬೆಲೆಯಲ್ಲಿ ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ (Poco M6 Pro 5G Smartphone) ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಆಯ್ಕೆ ಇರುವ ಡಿಸ್‌ಪ್ಲೇ ಹೊಂದಿದ್ದು, 1TB ವರೆಗೂ ವಿಸ್ತರಣೆ ಮಾಡಬಹುದಾದ ಸ್ಟೋರೇಜ್‌ ಗೆ ಬೆಂಬಲ ನೀಡಲಿದೆ. ಹಾಗಿದ್ರೆ, ಈ ಹೊಸ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು?, ಬ್ಯಾಂಕ್‌ ಆಫರ್‌ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್‌: ಬೊಂಬಾಟ್‌ ಫೀಚರ್ಸ್‌, ಬಜೆಟ್‌ ಬೆಲೆ!

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್ 6.79 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 2460 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 30/48/60/90Hz ಅಡಾಪ್ಟಿವ್ ರಿಫ್ರೆಶ್ ರೇಟ್ ಆಯ್ಕೆ ಹೊಂದಿದ್ದು, 91% ಸ್ಕ್ರೀನ್-ಟು-ಬಾಡಿ ಅನುಪಾತ, 550 ನಿಟ್ಸ್‌ ಪೀಕ್ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಇದೆ.

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಬಲ ಹೊಂದಿದ್ದು, ಈ ಮೂಲಕ ಉತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡಬಹುದಾಗಿದೆ. ಜೊತೆಗೆ ಅಡ್ರಿನೋ 613 ಜಿಪಿಯು ಬಲ ಸಹ ಇದೆ. ಉಳಿದಂತೆ ಈ ಫೋನ್ MIUI 14 ಜೊತೆಗೆ ಆಂಡ್ರಾಯ್ಡ್‌ 13 ಅನ್ನು ರನ್ ಮಾಡುತ್ತದೆ.

ಇನ್ನು ಸ್ಟೋರೇಜ್‌ ವಿಚಾರಕ್ಕೆ ಬರುವುದಾದರೆ 6GB ವರೆಗಿನ RAM ಆಯ್ಕೆಯೊಂದಿಗೆ 6GB ವರ್ಚುವಲ್ RAM ಅನ್ನು ಆಯ್ಕೆಯನ್ನೂ ಸಹ ನೀಡಲಾಗಿದೆ. ಹಾಗೆಯೇ 128GB ವರೆಗೆ ಇಂಟರ್‌ ಸ್ಟೋರೇಜ್‌ ಆಯ್ಕೆ ನೀಡಲಾಗಿದ್ದು, ಮೈಕ್ರೊ ಎಸ್‌ಡಿ ಕಾರ್ಡ್‌ ಬಳಕೆ ಮಾಡುವ ಮೂಲಕ ಬರೋಬ್ಬರಿ 1TB ವರೆಗೆ ಅನ್ನು ವಿಸ್ತರಣೆ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಪೊಕೊ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹಾಗೂ ಸಿಂಗಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 50 ಮೆಗಾಪಿಕ್ಸೆಲ್‌ನ ಹಿಂಬದಿಯ ಪ್ರಮುಖ ಕ್ಯಾಮರಾ ಹೊಂದಿದ್ದು, ಇದು ಎಲ್‌ಇಡಿ ಫ್ಲಾಶ್ ಲೈಟ್‌ ಆಯ್ಕೆ ಪಡೆದಿದೆ. ಜೊತೆಗೆ f/2.4 ಅಪರ್ಚರ್ ಆಯ್ಕೆಯ 2 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್‌ ಇದೆ. ಇನ್ನು f/2.0 ಅಪರ್ಚರ್ ನೊಂದಿಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಆಯ್ಕೆ ನೀಡಲಾಗಿದೆ.

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 18W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಉಳಿದಂತೆ ಈ ಫೋನ್ 8.17mm ಸ್ಲಿಮ್ ಆಗಿದ್ದು, ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್‌ ನೊಂದಿಗೆ ಪ್ಯಾಕ್‌ ಆಗಿದೆ. ಅಷ್ಟು ಮಾತ್ರವಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಈ ಫೋನ್‌ ನಲ್ಲಿ ಮತ್ತಷ್ಟು ವಿಶೇಷ ಎನಿಸಿದೆ.

ಇದರೊಂದಿಗೆ 3.5 ಎಂಎಂ ಆಡಿಯೊ ಜಾಕ್, ಬಾಟಮ್ ಫೈರಿಂಗ್ ಲೌಡ್‌ಸ್ಪೀಕರ್, 5G SA / NSA, ಡ್ಯುಯಲ್ 4G VoLTE, ವೈ-ಫೈ 6 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್‌ + GLONASS, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಬೆಂಬಲ ಪಡೆದಿದೆ.

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್‌: ಬೊಂಬಾಟ್‌ ಫೀಚರ್ಸ್‌, ಬಜೆಟ್‌ ಬೆಲೆ!

ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್‌ ಬೆಲೆ, ಲಭ್ಯತೆ: ಈ ಫೋನ್‌ನ 4GB+64GB ವೇರಿಯಂಟ್‌ಗೆ 10,999ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 6GB+128GB ವೇರಿಯಂಟ್‌ಗೆ 12,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಫಾರೆಸ್ಟ್ ಗ್ರೀನ್ ಮತ್ತು ಪವರ್ ಬ್ಲಾಕ್ ಬಣ್ಣಗಳಲ್ಲಿ ಈ ಫೋನ್‌ ಕಾಣಿಸಿಕೊಂಡಿದೆ. ಈ ಫೋನ್‌ಗಳನ್ನು ನೀವು ಆಗಸ್ಟ್ 9 ರಿಂದ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಿಂದ ಖರೀದಿ ಮಾಡಬಹುದು. ಇದರೊಂದಿಗೆ ICICI ಬ್ಯಾಂಕ್ ಕಾರ್ಡ್‌ಗಳೊಂದಿಗೆ 1,000ರೂ.ಗಳ ತ್ವರಿತ ರಿಯಾಯಿತಿ ಇದೆ.

Best Mobiles in India

English summary
Poco has just launched the Poco M6 Pro 5G smartphone in India at a budget price. This phone is powered by Octa Core Snapdragon 4 Gen 2 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+