ಇಂದು ಬಜೆಟ್ ಬೆಲೆಯ ಪೊಕೊ X3 ಸ್ಮಾರ್ಟ್‌ಫೋನ್ ಫಸ್ಟ್ ಸೇಲ್!
ಪೊಕೊ ಮೊಬೈಲ್ ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಪರಿಚಯಿಸಿರುವ ಪೊಕೊ X3 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಸೆ.29) ಮಧ್ಯಾಹ್ನ 12ರಿಂದ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಫಸ್ಟ್ ಸೇಲ್ ಆರಂಭವಾಗಲಿದೆ. ಇನ್ನು 6,000mAh ಬ್ಯಾಟರಿ ಪವರ್ ಹಾಗೂ ಕ್ವಾಡ್ ಕ್ಯಾಮೆರಾ ಫೀಚರ್ಸ್‌ಗಳು ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಹೌದು, ಪೊಕೊ X3 ಸ್ಮಾರ್ಟ್‌ಫೋನ್ ಇಂದು ಮೊದಲ ಮಾರಾಟ ನಡೆಯಲಿದೆ. ಈ ಫೋನ್ ಕ್ವಾಡ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಸೆನ್ಸಾರ್ 64ಎಂಪಿ ಆಗಿದೆ. ಫಾಸ್ಟ್ ಚಾರ್ಜಿಂಗ್ ಬೆಂಬಲಿತ 5000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ 6GB + 64GB, 6GB + 128GB ಹಾಗೂ 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಯನ್ನು ಪಡೆದಿದೆ. ಇನ್ನು ಈ ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 16,999ರೂ ಆಗಿದೆ. ಇನ್ನುಳಿದಂತೆ ಈ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.
ಡಿಸ್‌ಪ್ಲೇ ಡಿಸೈನ್
ಪೊಕೊ X3 ಸ್ಮಾರ್ಟ್‌ಫೋನ್ 1,080x2,340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು HDR10 ಅನ್ನು ಹೊಂದಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.

ಪ್ರೊಸೆಸರ್ ಕಾರ್ಯ
ಪೊಕೊ X3 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732G SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 6GB + 64GB, 6GB + 128GB ಹಾಗೂ 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಯನ್ನ ಹೊಂದಿದೆ. ಜೊತೆಗೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ವಾಡ್ ಕ್ಯಾಮೆರಾ
ಪೊಕೊ X3 ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ IMX682 ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ 119 ಡಿಗ್ರಿ ವೈಡ್-ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್, ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯ
ಪೊಕೊ X3 ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಒಳಗೊಂಡಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಪೊಕೊ X3 ಬೇಸ್ ಮಾಡೆಲ್ 6GB RAM + 64GB ಶೇಖರಣಾ ಮಾದರಿಗೆ 16,999 ರೂ. 6GB RAM + 128GB ಶೇಖರಣಾ ಮಾದರಿಗೆ 18,499 ರೂ, ಮತ್ತು 8GB RAM + 128GB ಸ್ಟೋರೇಜ್ ಹೊಂದಿರುವ ಟಾಪ್-ಟೈರ್ ರೂಪಾಂತರದ ಬೆಲೆ 19,999.ರೂ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕೋಬಾಲ್ಟ್ ಬ್ಲೂ ಮತ್ತು ಶ್ಯಾಡೋ ಗ್ರೇ ಎಮಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಬ್ಯವಾಗಲಿದೆ.


Click it and Unblock the Notifications




