Home
ಸುದ್ದಿಜಾಲ

ಈ ಬೊಂಬಾಟ್‌ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಮುಂಚೂಣಿಯ ಆನ್‌ಲೈನ್‌ ಮಾರುಕಟ್ಟೆ ಆಗಿ ಗುರುತಿಸಿಕೊಂಡಿರುವ ಅಮೆಜಾನ್‌ ಇ ಕಾಮರ್ಸ್‌ ಸ್ಮಾರ್ಟ್‌ಫೋನ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌ ಘೋಷಿಸುತ್ತಾ ಸಾಗಿದೆ. ಆ ಪೈಕಿ 5G ಲೆವೆಲ್‌ ಮಾದರಿಯ ಮೊಬೈಲ್‌ಗಳಿಗೂ ಅತ್ಯುತ್ತಮ ರಿಯಾಯಿತಿ ಲಭ್ಯ ಮಾಡಿದ್ದು, ಪೊಕೊ X5 5G ಮೊಬೈಲ್‌ ಭಾರೀ ಡಿಸ್ಕೌಂಟ್‌ ಬೆಲೆಯಲ್ಲಿ ಅಧಿಕ ಗಮನ ಸೆಳೆಯುವಂತಿದೆ.

ಹೌದು, ಅಮೆಜಾನ್‌ ವೆಬ್‌ಸೈಟ್‌ ನಲ್ಲಿ ಪೊಕೊ X5 5G ಮೊಬೈಲ್‌ ಶೇ. 33% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ 15,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಫೋನಿಗೆ ಲಭ್ಯ ಇತರೆ ಎಲ್ಲ ಆಫರ್‌ಗಳನ್ನು ಸೇರಿದರೆ ಈ ಫೋನ್‌ ಅನ್ನು ಮತ್ತಷ್ಟು ಆಕರ್ಷಕ ಬೆಲೆಗೆ ಖರೀದಿಸಲು ಅವಕಾಶ ಇದೆ.

ಈ ಬೊಂಬಾಟ್‌ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಅಂದಹಾಗೆ ಪೊಕೊ X5 5G ಮೊಬೈಲ್‌ ಸ್ನಾಪ್ಡ್ರಾಗನ್ 695 ಪ್ರೊಸೆಸರ್‌ ಪವರ್ ಹೊಂದಿದ್ದು, 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಪಡೆದಿದೆ. ಇನ್ನು ಈ ಫೋನ್‌ ಬ್ಲ್ಯಾಕ್, ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನುಳಿದಂತೆ ಪೊಕೊ X5 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಈ ಬೊಂಬಾಟ್‌ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಡಿಸ್‌ಪ್ಲೇ ಡಿಸೈನ್‌ ಹಾಗೂ ರಚನೆ

ಪೊಕೊ X5 5G ಫೋನ್‌ 6.67 ಇಂಚಿನ ಫುಲ್‌ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ. ಹಾಗೆಯೇ 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಹಾಗೂ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಸಪೋರ್ಟ್‌ ಪಡೆದುಕೊಂಡಿರುವ ಈ ಫೋನ್‌, 1200nits ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಈ ಮೊಬೈಲ್‌ ಡಿಸ್‌ಪ್ಲೇ ವೀಕ್ಷಣೆ ಮಾಡಬಹುದು.

ಈ ಬೊಂಬಾಟ್‌ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ!

ಯಾವ ಪ್ರೊಸೆಸರ್‌ ಪವರ್ ಲಭ್ಯ

ಪೊಕೊ ಸಂಸ್ಥೆಯ ಈ ಮೊಬೈಲ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿದ್ದು, 8GB RAM ಹಾಗೂ 256GB ಆಂತರೀಕ ಸ್ಟೋರೇಜ್‌ ಸೇರಿದಂತೆ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಈ ಫೋನ್ 5GB ಯ ಹೆಚ್ಚುವರಿ ಟರ್ಬೊ RAM ವಿಸ್ತರಣೆ ಸೌಲಭ್ಯವನ್ನೂ ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ

ಪೊಕೊ X5 5G ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರಲ್ಲಿ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದ ಆಯ್ಕೆ ಲಭ್ಯ. ಇದರೊಂದಿಗೆ ಹೆಚ್‌ಡಿಆರ್‌ ಫೀಚರ್ಸ್‌, ನೈಟ್ ಮೋಡ್ ಮತ್ತು ಕ್ಯಾಪ್ಚರ್ ಮೋಡ್‌ಗಳನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿದೆ.

ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

ಪೊಕೊ X5 ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದು 33W ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಈ ಮೂಲಕ 22 ನಿಮಿಷಗಳಲ್ಲಿ ಫೋನ್‌ ಅನ್ನು ಸಂಪೂರ್ಣವಾಗಿ ಚಾರ್ಜಿಂಗ್‌ ಮಾಡಿಕೊಳ್ಳಲು ಪೂರಕವಾಗಿದೆ. ಈ ಫೋನ್ ಸೂಪರ್ನೋವಾ ಗ್ರೀನ್, ವೈಲ್ಡ್ಕ್ಯಾಟ್ ಬ್ಲೂ ಮತ್ತು ಜಾಗ್ವಾರ್ ಬ್ಲಾಕ್‌ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

ಮೆಮೊರಿ ಆಯ್ಕೆ ಹಾಗೂ ಕಲರ್ ಮಾಹಿತಿ
ಪೊಕೊ X5 ಫೋನ್‌ 8GB RAM ಹಾಗೂ 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಹಾಗೆಯೇ ಈ ಫೋನ್‌ ಬ್ಲ್ಯಾಕ್, ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಲು ಲಭ್ಯ.

Best Mobiles in India

English summary
ಪೊಕೊ X5 5G ಮೊಬೈಲ್‌ ಶೇ. 33% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ 15,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+