Home
ಸುದ್ದಿಜಾಲ

ಭಾರತದಲ್ಲಿ ಪೊಕೊ X5 5G ಸ್ಮಾರ್ಟ್‌ಫೋನ್‌ ಲಾಂಚ್; ಆಫರ್‌ ಬೆಲೆ ಎಷ್ಟು?

ಸುಧಾರಿತ ಫೀಚರ್ಸ್‌ಗಳೊಂದಿಗೆ ಲಾಂಚ್‌ ಆಗುವ ಪೊಕೊ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆಯೇ ಇದೆ. ಅದರಂತೆ ಪೊಕೊ ಕಂಪೆನಿಯು ಹೊಸ ಹಾಗೂ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಈ ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಪೊಕೊ X5 5G (Poco X5 5G) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಇಂದು ಅನಾವರಣ ಮಾಡಲಾಗಿದೆ. ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಹಾಗಿದ್ರೆ, ಇದರ ಆಫರ್‌ ಬೆಲೆ ಎಷ್ಟು?, ಹಾಗೂ ಇದರ ಆಕರ್ಷಕ ಫೀಚರ್ಸ್‌ಗಳು ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಪೊಕೊ X5 5G ಸ್ಮಾರ್ಟ್‌ಫೋನ್‌ ಲಾಂಚ್; ಆಫರ್‌ ಬೆಲೆ ಎಷ್ಟು?

ಈ ಹೊಸ ಪೊಕೊ X5 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್‌ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ. ಹಾಗೆಯೇ 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಹಾಗೂ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲವನ್ನು ಪಡೆದುಕೊಂಡಿರುವ ಈ ಫೋನ್‌, 1200nits ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಈ ಮೂಲಕ ಎಂತಹ ಸೂರ್ಯನ ಬೆಳಕಿನ ಪ್ರಖರತೆಯಲ್ಲೂ ಸ್ಪಷ್ಟವಾಗಿ ಮೊಬೈಲ್‌ ಡಿಸ್‌ಪ್ಲೇ ವೀಕ್ಷಣೆ ಮಾಡಬಹುದು.

ಇದರ ಪ್ರೊಸೆಸರ್‌ ವಿಷಯಕ್ಕೆ ಬರುವುದಾದರೆ ಈ ಪೊಕೊ X5 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಸೇರಿದಂತೆ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ 5GB ಯ ಹೆಚ್ಚುವರಿ ಟರ್ಬೊ RAM ವಿಸ್ತರಣೆ ಸೌಲಭ್ಯವನ್ನೂ ಒದಗಿಸಲಾಗಿದೆ.

ಕ್ಯಾಮೆರಾ ಆಯ್ಕೆಯಲ್ಲಿ ಪೊಕೊ X5 5G ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಹೆಚ್‌ಡಿಆರ್‌ ಫೀಚರ್ಸ್‌, ನೈಟ್ ಮೋಡ್ ಮತ್ತು ಕ್ಯಾಪ್ಚರ್ ಮೋಡ್‌ಗಳನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಉದ್ದೇಶಕ್ಕೆ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.

ಭಾರತದಲ್ಲಿ ಪೊಕೊ X5 5G ಸ್ಮಾರ್ಟ್‌ಫೋನ್‌ ಲಾಂಚ್; ಆಫರ್‌ ಬೆಲೆ ಎಷ್ಟು?

ಪೊಕೊ X5 5G ಬ್ಯಾಟರಿ ವಿಷಯದಲ್ಲಂತೂ ಈ ಫೋನ್‌ ಉತ್ತಮವಾಗಿದೆ. ಈ ಪೊಕೊ X5 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಈ ಮೂಲಕ 22 ನಿಮಿಷಗಳಲ್ಲಿ ಫೋನ್‌ ಅನ್ನು ಸಂಪೂರ್ಣವಾಗಿ ಚಾರ್ಜಿಂಗ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಇದರ ಬೆಲೆ ಹಾಗೂ ಆಫರ್‌ಗಳ ಬಗ್ಗೆಯೂ ತಿಳಿದುಕೊಳ್ಳೋಣ.

ಪೊಕೊ X5 5G ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಎರಡು ವೇರಿಯಂಟ್‌ನಲ್ಲಿ ಲಾಂಚ್‌ ಮಾಡಲಾಗಿದ್ದು, 6GB+128GB ವೇರಿಯಂಟ್‌ ಫೋನ್‌ಗೆ 18,999 ರೂ. ಗಳ ಬೆಲೆ ನಿಗದಿ ಮಾಡಿದ್ದರೆ, 8GB+256GB ವೇರಿಯಂಟ್‌ನ ಫೋನ್‌ಗೆ 20,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಈ ಫೋನ್ ಸೂಪರ್ನೋವಾ ಗ್ರೀನ್, ವೈಲ್ಡ್ಕ್ಯಾಟ್ ಬ್ಲೂ ಮತ್ತು ಜಾಗ್ವಾರ್ ಬ್ಲಾಕ್‌ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ.

ಭಾರತದಲ್ಲಿ ಪೊಕೊ X5 5G ಸ್ಮಾರ್ಟ್‌ಫೋನ್‌ ಲಾಂಚ್; ಆಫರ್‌ ಬೆಲೆ ಎಷ್ಟು?

ಈ ಫೋನ್‌ ಅನ್ನು ನೀವು ಮಾರ್ಚ್ 21 ರಿಂದ ಖರೀದಿ ಮಾಡಬಹುದಾಗಿದ್ದು, ಆರಂಭಿಕ ಕೊಡುಗೆಯಾಗಿ ಫ್ಲಿಪ್‌ಕಾರ್ಟ್‌ ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಫೋನ್‌ ಖರೀದಿ ಮಾಡುವ ಗ್ರಾಹಕರು 2,000ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ವಿನಿಮಯ ಆಫರ್‌ನಲ್ಲೂ ಹೆಚ್ಚುವರಿ 2,000ರೂ. ಗಳನ್ನು ನೀಡಲಾಗುತ್ತಿದ್ದು, ಈ ಮೂಲಕ ಈ ಫೋನ್‌ ಅನ್ನು ಭಾರೀ ಆಫರ್‌ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ.

Best Mobiles in India

English summary
Poco X5 5G smartphone was unveiled in India today. This phone will be powered by Snapdragon 695 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+