Home
ಸುದ್ದಿಜಾಲ

ಅಧಿಕ RAM ಇರುವ ಈ ಮೊಬೈಲ್‌ ಈಗ ಭರ್ಜರಿ ಡಿಸ್ಕೌಂಟ್‌ ಬೆಲೆಗೆ ಲಭ್ಯ!

ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಮಾರಾಟ ಮೇಳಗಳ ಮೂಲಕ ಗ್ರಾಹಕರುನ್ನು ತನ್ನತ್ತ ಸೆಳೆಯುತ್ತವೆ. ಇನ್ನು ಕೆಲವೊಮ್ಮೆ ಯಾವುದೇ ಸೇಲ್ ಇಲ್ಲದೇ ವೇಳಯು ಕೆಲವು ಆಯ್ದ ಮೊಬೈಲ್‌ಗಳಿಗೆ ಆಕರ್ಷಕ ರಿಯಾಯಿತಿ ನೀಡುತ್ತದೆ. ಸದ್ಯ ಪೊಕೊ X5 5G ಫೋನ್‌ ಬೊಂಬಾಟ್‌ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಪೊಕೊ X5 5G ಮೊಬೈಲ್‌ ಶೇ 13% ರಷ್ಟು ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೊಬೈಲ್‌ನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 24,999ರೂ. ಆಗಿದ್ದು, ಅದಾಗ್ಯೂ, ಗ್ರಾಹಕರು ಲಭ್ಯ ಇರುವ ಎಲ್ಲ ಬ್ಯಾಂಕ್ ಕೊಡುಗೆ ಪಡೆದುಕೊಂಡರೆ ಈ ಮೊಬೈಲ್‌ ಮತ್ತಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಅಧಿಕ RAM ಇರುವ ಈ ಮೊಬೈಲ್‌ ಈಗ ಭರ್ಜರಿ ಡಿಸ್ಕೌಂಟ್‌ ಬೆಲೆಗೆ ಲಭ್ಯ!

ಪೊಕೊ X5 5G ಸ್ಮಾರ್ಟ್‌ಫೋನ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್‌ ಪವರ್ ಪಡೆದುಕೊಂಡಿದ್ದು, 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಹೊಂದಿದೆ. ಇನ್ನು ಈ ಫೋನ್‌ ಬ್ಲ್ಯಾಕ್, ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಇನ್ನುಳಿದಂತೆ ಪೊಕೊ X5 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ ಹಾಗೂ ಡಿಸೈನ್

ಪೊಕೊ X5 5G ಮೊಬೈಲ್‌ 6.67 ಇಂಚಿನ ಫುಲ್‌ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಹೊಂದಿದೆ. ಹಾಗೆಯೇ 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಹಾಗೂ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಸಪೋರ್ಟ್‌ ಪಡೆದುಕೊಂಡಿರುವ ಈ ಫೋನ್‌, 1200nits ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಈ ಮೊಬೈಲ್‌ ಡಿಸ್‌ಪ್ಲೇ ವೀಕ್ಷಣೆ ಮಾಡಬಹುದು.

ಅಧಿಕ RAM ಇರುವ ಈ ಮೊಬೈಲ್‌ ಈಗ ಭರ್ಜರಿ ಡಿಸ್ಕೌಂಟ್‌ ಬೆಲೆಗೆ ಲಭ್ಯ!

ಪ್ರೊಸೆಸರ್‌ ಪವರ್ ಯಾವುದು

ಪೊಕೊ X5 5G ಮೊಬೈಲ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದ್ದು, 8GB RAM ಹಾಗೂ 256GB ಆಂತರೀಕ ಸ್ಟೋರೇಜ್‌ ಸೇರಿದಂತೆ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಈ ಫೋನ್ 5GB ಯ ಹೆಚ್ಚುವರಿ ಟರ್ಬೊ RAM ವಿಸ್ತರಣೆ ಸೌಲಭ್ಯವನ್ನೂ ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ

ಪೊಕೊ X5 5G ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರಲ್ಲಿ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದ ಆಯ್ಕೆ ಲಭ್ಯ. ಇದರೊಂದಿಗೆ ಹೆಚ್‌ಡಿಆರ್‌ ಫೀಚರ್ಸ್‌, ನೈಟ್ ಮೋಡ್ ಮತ್ತು ಕ್ಯಾಪ್ಚರ್ ಮೋಡ್‌ಗಳನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಅಧಿಕ RAM ಇರುವ ಈ ಮೊಬೈಲ್‌ ಈಗ ಭರ್ಜರಿ ಡಿಸ್ಕೌಂಟ್‌ ಬೆಲೆಗೆ ಲಭ್ಯ!

ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ

ಪೊಕೊ X5 ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, ಇದು 33W ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ. ಈ ಮೂಲಕ 22 ನಿಮಿಷಗಳಲ್ಲಿ ಫೋನ್‌ ಅನ್ನು ಸಂಪೂರ್ಣವಾಗಿ ಚಾರ್ಜಿಂಗ್‌ ಮಾಡಿಕೊಳ್ಳಲು ಪೂರಕವಾಗಿದೆ. ಹಾಗೆಯೇ ಈ ಫೋನ್ ಸೂಪರ್ನೋವಾ ಗ್ರೀನ್, ವೈಲ್ಡ್ಕ್ಯಾಟ್ ಬ್ಲೂ ಮತ್ತು ಜಾಗ್ವಾರ್ ಬ್ಲಾಕ್‌ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

ಮೆಮೊರಿ ಹಾಗೂ ಕಲರ್ ಮಾಹಿತಿ

ಪೊಕೊ X5 ಮೊಬೈಲ್‌ 8GB RAM ಹಾಗೂ 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಹಾಗೆಯೇ ಈ ಫೋನ್‌ ಬ್ಲ್ಯಾಕ್, ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.

Best Mobiles in India

English summary
poco x5 pro 5g available at ultimate discount price on flipkart. check offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+