128GB ಸ್ಟೋರೇಜ್ ಇರುವ ಈ ಫೋನಿನ ಆಫರ್ ಬೆಲೆ ಕೇಳಿದ್ರೆ, OMG ಅಂತೀರಾ!
ಫ್ಲಿಪ್‌ಕಾರ್ಟ್ ತಾಣದಲ್ಲಿ ಮೊಬೈಲ್ ಬೊನಾಂಜಾ ಸೇಲ್ ಲೈವ್ ಇದ್ದು, ಈ ಮಾರಾಟ ಮೇಳದಲ್ಲಿ ಎಲ್ಲ ಮಾದರಿಯ ಮೊಬೈಲ್‌ಗಳಿಗೆ ರಿಯಾಯಿತಿ ತಿಳಿಸಲಾಗಿದೆ. ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾಂಜಾ ಸೇಲ್ ಮೇಳದಲ್ಲಿ ಪೊಕೊ ಸಂಸ್ಥೆಯ ಪೊಕೊ X5 5G ಫೋನ್ ಕೂಡಾ ಆಕರ್ಷಕ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಖುಷಿ ಎನಿಸಿದೆ.
ಹೌದು, ಫ್ಲಿಪ್‌ಕಾರ್ಟ್ ಸಂಸ್ಥೆಯು ಮೊಬೈಲ್ಸ್ ಬೊನಾಂಜಾ ಸೇಲ್ ಇದೇ ಡಿಸೆಂಬರ್ 6 ರ ವರೆಗೂ ಲೈವ್ ಇರಲಿದೆ. ಸದ್ಯ ಈ ಸೇಲ್ ನಲ್ಲಿ ಪೊಕೊ X5 5G (128GB) ಫೋನ್ ಮೇಲೆ ಶೇ. 26% ರಷ್ಟು ಆಫರ್ ಲಭ್ಯ ಮಾಡಿದ್ದು, ಖರೀದಿದಾರರು 18,999ರೂ. ಗಳಿಗೆ ಕೊಳ್ಳಬಹುದಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರುವ ಇತರೆ ಕೊಡುಗೆ ಪಡೆದರೇ ಈ ಫೋನ್ ಅನ್ನು 17,999ರೂ. ಗಳಿಗೂ ಖರೀದಿಸಲು ಚಾನ್ಸ್ ಇದೆ.

ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಹೊಂದಿದೆ. ಇನ್ನು ಈ ಫೋನ್ ಬ್ಲ್ಯಾಕ್, ಬ್ಲೂ ಹಾಗೂ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಪೊಕೊ X5 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.
ಪೊಕೊ X5 5G - ಫೀಚರ್ಸ್ ಮಾಹಿತಿ ಹೀಗಿವೆ
ಪೊಕೊ X5 5G ಮೊಬೈಲ್ 6.67 ಇಂಚಿನ ಫುಲ್‌ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ. ಹಾಗೆಯೇ 120hz ಸ್ಕ್ರೀನ್ ರಿಫ್ರೆಶ್ ರೇಟ್ ಹಾಗೂ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಸಪೋರ್ಟ್ ಪಡೆದುಕೊಂಡಿರುವ ಈ ಫೋನ್, 1200nits ಗರಿಷ್ಠ ಬ್ರೈಟ್‌ನೆಸ್ ಒದಗಿಸಲಿದೆ. ಈ ಮೊಬೈಲ್ ಡಿಸ್‌ಪ್ಲೇ ವೀಕ್ಷಣೆ ಮಾಡಬಹುದು.
ಹಾಗೆಯೇ ಪೊಕೊ X5 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿದ್ದು, 8GB RAM ಹಾಗೂ 256GB ಆಂತರೀಕ ಸ್ಟೋರೇಜ್ ಸೇರಿದಂತೆ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಈ ಫೋನ್ 5GB ಯ ಹೆಚ್ಚುವರಿ ಟರ್ಬೊ RAM ವಿಸ್ತರಣೆ ಸೌಲಭ್ಯವನ್ನೂ ಕೂಡಾ ಪಡೆದಿದೆ.
ಈ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಪಡೆದಿದೆ.ಉಳಿದಂತೆ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದ ಆಯ್ಕೆ ಲಭ್ಯ. ಇದರೊಂದಿಗೆ ಹೆಚ್‌ಡಿಆರ್ ಫೀಚರ್ಸ್, ನೈಟ್ ಮೋಡ್ ಮತ್ತು ಕ್ಯಾಪ್ಚರ್ ಮೋಡ್‌ಗಳನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ನೀಡಲಾಗಿದೆ.
ಅಂದಹಾಗೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆಇದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಒಳಗೊಂಡಿದೆ. ಈ ಮೂಲಕ 22 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜಿಂಗ್ ಮಾಡಿಕೊಳ್ಳಲು ಪೂರಕವಾಗಿದೆ. ಹಾಗೆಯೇ ಈ ಫೋನ್ ಸೂಪರ್ನೋವಾ ಗ್ರೀನ್, ವೈಲ್ಡ್ಕ್ಯಾಟ್ ಬ್ಲೂ ಮತ್ತು ಜಾಗ್ವಾರ್ ಬ್ಲಾಕ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ.
ಇದಲ್ಲದೇ ಪೊಕೊ X5 ಮೊಬೈಲ್ 8GB RAM ಹಾಗೂ 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಹಾಗೆಯೇ ಗ್ರಾಹಕರು ಈ ಫೋನ್ ಬ್ಲ್ಯಾಕ್, ಬ್ಲೂ ಹಾಗೂ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದು.


Click it and Unblock the Notifications








