Home
ಸುದ್ದಿಜಾಲ

Poco: ಪೊಕೊ X5 ಪ್ರೊಗೆ ಎಂತಹ ಡಿಸ್ಕೌಂಟ್‌ ಗೊತ್ತಾ!? ನಿಬ್ಬೆರಗಾಗ್ತೀರಾ!

ಪೊಕೊ (Poco) ಫೋನ್‌ಗಳು ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಭಾರತೀಯರ ನೆಚ್ಚಿನ ಫೋನ್‌ಗಳಾಗುತ್ತಿವೆ. ಈ ಫೋನ್‌ಗಳು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಉತ್ತಮ ಕ್ಯಾಮೆರಾ ಫೀಚರ್ಸ್‌ ಹೊಂದಿರುವುದರಿಂದ ಗ್ರಾಹಕರು ಈ ಫೋನ್‌ಗಳನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡಲು ಮುಂದಾಗುತ್ತಾರೆ.

ಹೌದು, ಪೊಕೊ ಫೋನ್‌ಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಜನಪ್ರಿಯತೆಯ ಸಾಲಿನಲ್ಲಿ ಇರುವ ಪೊಕೊ X5 ಪ್ರೊ (Poco X5 Pro) ಫೋನ್‌ ಅನ್ನು ನೀವು ಈಗ ಭಾರೀ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಪಾಕೆಟ್‌ನಲ್ಲಿನ ಹಣ ಸೇವ್‌ ಆಗಲಿದೆ. ಈ ಫೋನ್ 120Hz ರಿಫ್ರೆಶ್ ರೇಟ್‌ ಮತ್ತು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. ಹಾಗಿದ್ರೆ, ಇದರ ಆಫರ್ ವಿವರ ಹಾಗೂ ಈ ಬೆಲೆಗೆ ಈ ಫೋನ್‌ ಯೋಗ್ಯವೇ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

Poco: ಪೊಕೊ X5 ಪ್ರೊಗೆ ಎಂತಹ ಡಿಸ್ಕೌಂಟ್‌ ಗೊತ್ತಾ!? ನಿಬ್ಬೆರಗಾಗ್ತೀರಾ!

ಪೊಕೊ X5 ಪ್ರೊ ಗೆ ಆಫರ್‌: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Flipkart Big Billion Days Sale) ಈ ಫೋನ್‌ಗೆ ಭಾರೀ ಆಫರ್‌ ನೀಡಲಾಗಿದೆ. ಅಂದರೆ 22,999 ರೂ.ಗಳ ಈ ಫೋನ್‌ ಬೆಲೆಗೆ ಈಗ 16,499ರೂ.ಗಳಿಗೆ ಇಳಿದಿದೆ. ಈ ಮೂಲಕ 6,500 ರೂಪಾಯಿಗಳನ್ನು ಉಳಿತಾಯ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಇನ್ನೂ ಹೆಚ್ಚಿನ ಆಫರ್‌ ನೀಡಲಾಗುತ್ತಿದ್ದು, ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಲು ಸಾಧ್ಯವಾಗುತ್ತದೆ. ಹಾಗಿದ್ರೆ, ಈ ಆಫರ್‌ ಬೆಲೆಗೆ ಈ ಫೋನ್‌ ಯೋಗ್ಯವೇ ಎಂಬುದನ್ನು ನೋಡೋಣ ಬನ್ನಿ.

ಬಜೆಟ್‌ ಬೆಲೆಯಲ್ಲಿ ಫೋನ್‌ ಹುಡುಕುತ್ತಿದ್ದವರಿಗೆ ಸೂಕ್ತ ಆಯ್ಕೆ: ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ ಫೋನ್‌ ಹುಡುಕುತ್ತಿದ್ದರೆ ಈ ಫೋನ್‌ ಬೆಸ್ಟ್‌. ಈ ಡಿವೈಸ್‌ ಸಾಧನವು ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್ ಅನ್ನು ಹೊಂದಿದ್ದು, 20,000 ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಇದು ಕಂಡುಬರುವುದಿಲ್ಲ. ಗೇಮಿಂಗ್ ಪವರ್‌ಹೌಸ್ ಅಲ್ಲದಿದ್ದರೂ, ಇದು ಹೆಚ್ಚಿನ ಕಾರ್ಯಗಳನ್ನು ಅದ್ಭುತವಾಗಿ ನಿರ್ವಹಿಸುತ್ತದೆ.

ಇದರೊಂದಿಗೆ ಈ ಫೋನ್ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಅತ್ಯುತ್ತಮ ಬಣ್ಣದ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ. ಇದು ಫುಲ್‌ ಹೆಚ್‌ಡಿ + ರೆಸಲ್ಯೂಶನ್ ಅನ್ನು ಹೊಂದುವುದರ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಉಳಿದಂತೆ ಡೈನಾಮಿಕ್ 120Hz ರಿಫ್ರೆಶ್ ರೇಟ್‌ ಮತ್ತು ಡಾಲ್ಬಿ ವಿಷನ್ ಅನ್ನು ಈ ಫೋನ್‌ ಬೆಂಬಲಿಸುತ್ತದೆ.

ಹಾಗೆಯೇ ಕ್ಯಾಮೆರಾ ರಚನೆ ವಿಚಾರಕ್ಕೆ ಬಂದರೆ ಇದು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಆಯ್ಕೆ ಪಡೆಯುವ ಮೂಲಕ ಕ್ಯಾಮೆರಾ ಪ್ರಿಯರಿಗೆ ನೆಚ್ಚಿನ ಫೋನ್‌ ಆಗಿದೆ. ಈ ಮೂಲಕ ನೀವು ಇನ್‌ಸ್ಟಾಗ್ರಾಮ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಿಗೆ ಆಕರ್ಷಕವಾಗಿರುವ ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು.

ಮುಖ್ಯವಾಗಿ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, ಈ ಮೂಲಕ ದೀರ್ಘ ಬ್ಯಾಕಪ್‌ ನೀಡಲಿದೆ. 67W ವೇಗದ ಚಾರ್ಜ ರ್‌ ಬೆಂಬಲ ಪಡೆದಿದ್ದು, ಕೇವಲ 15 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗಲಿದೆ. ಹೀಗಾಗಿ ಈ ಫೋನ್‌ ಈ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ ಹಾಗೂ ಅತ್ಯುತ್ತಮ ಬ್ಯಾಟರಿ ಸೌಲಭ್ಯವನ್ನು ಕೊಡುತ್ತಿದೆ.

ಆದರೂ ಸಹ ಕೆಲವು ಸಮಸ್ಯೆಗಳು ಈ ಫೋನ್‌ನಲ್ಲಿ ಇವೆ. ಅಂದರೆ ಬಹಳಷ್ಟು ಬ್ಲೋಟ್‌ವೇರ್‌ಗಳೊಂದಿಗೆ ಈ ಫೋನ್‌ ರವಾನೆಯಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಕೆಲವು ಪೂರ್ವ-ಸ್ಥಾಪಿತ ಆಪ್‌ಗಳು ನಿಮಗೆ ಕಿರಿಕಿರಿ ಉಂಟು ಮಾಡಬಹುದು. ಇದರಲ್ಲಿ ಕೆಲವು ಆಪ್‌ಗಳನ್ನಂತೂ ಅನ್‌ಇನ್‌ಸ್ಟಾಲ್‌ ಮಾಡಲು ಸಾಧ್ಯವೇ ಇಲ್ಲ. ಕ್ಲೀನರ್ ಇಂಟರ್ಫೇಸ್ ಅನ್ನು ಬಯಸುವ ಬಳಕೆದಾರರಿಗೆ MIUI ಕಿರಿಕಿರಿಯುಂಟುಮಾಡಬಹುದು.

Poco: ಪೊಕೊ X5 ಪ್ರೊಗೆ ಎಂತಹ ಡಿಸ್ಕೌಂಟ್‌ ಗೊತ್ತಾ!? ನಿಬ್ಬೆರಗಾಗ್ತೀರಾ!

ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಹಳೆಯ ಆಂಡ್ರಾಯ್ಡ್ 12 ಓಎಸ್‌ನಲ್ಲಿ ರನ್‌ ಆಗಲಿದೆ ಎನ್ನುವುದು ನಿಮ್ಮ ಗಮನಕ್ಕೆ ಇರಲಿ. ಇದನ್ನು ಕೇವಲ ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳಿಗೆ ಸೀಮಿತಗೊಳಿಸುತ್ತದೆ. ಇದರರ್ಥ ಬಳಕೆದಾರರು ಆಂಡ್ರಾಯ್ಡ್ 14 ಓಎಸ್‌ಗೆ ಮಾತ್ರ ಪ್ರವೇಶವನ್ನು ಪಡೆಯಲಿದ್ದಾರೆ. ಅದೇನೇ ಇದ್ದರೂ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸೇಲ್‌ನಲ್ಲಿ ಈ ಫೋನ್‌ ನಿಮಗೆ ಅಗ್ಗದ ದರದಲ್ಲಿ ಲಭ್ಯ ಆಗುತ್ತಿರುವುದಂತೂ ಸಂತಸದ ವಿಷಯ. ಹಣ ಉಳಿಸಬೇಕು ಎನ್ನುವವರಿಗೆ ಇದಕ್ಕಿಂತ ಬೇರೆ ಆಯ್ಕೆ ಬೇಕೆ? .

Best Mobiles in India

English summary
Poco X5 Pro phone available at a very low price in flipkart. This phone supports 120Hz refresh rate and Dolby Vision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+