Home
ಸುದ್ದಿಜಾಲ

ಪೊಕೊದ ಈ ಫೋನ್‌ಗೆ ಡಿಸ್ಕೌಂಟ್! ಈ ಬೆಲೆಗೆ ಖರೀದಿ ಮಾಡಬಹುದು ಅನ್ನೋದಕ್ಕೆ ಕಾರಣಗಳಿವು!?

ಸ್ಮಾರ್ಟ್‌ಫೋನ್ (Smartphone) ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ, ಕೆಲವು ಫೋನ್‌ಗಳು ದುಬಾರಿ ಬೆಲೆ ಹೊಂದಿರುವುದರಿಂದ ಅವುಗಳನ್ನು ಖರೀದಿ ಮಾಡುವುದು ಕೆಲವರಿಗೆ ಖಂಡಿತಾ ಕಷ್ಟ. ಆದರೆ, ನೀವು ಈಗ ಅತ್ಯುತ್ತಮ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ಫೋನ್‌ ಅನ್ನು ಅಗ್ಗದ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅದೂ ಸಹ ಪೊಕೊ X5 ಪ್ರೊ ಸ್ಮಾರ್ಟ್‌ಫೋನ್‌ ಅನ್ನು.

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಹೆಚ್ಚಿನ ಬೇಡಿಕೆ ಇರುವ ಪೊಕೊ ಫೋನ್‌ಗಳ ವಿಭಾಗದಲ್ಲಿ ಪೊಕೊ X5 ಪ್ರೊ (Poco X5 Pro) ಸ್ಮಾರ್ಟ್‌ಫೋನ್‌ಗೆ ಈಗ ದೊಡ್ಡ ರಿಯಾಯಿತಿ ನೀಡಲಾಗಿದೆ. ಈ ಫೋನ್ 5G ಫೋನ್ ಭಾರತದಲ್ಲಿ 22,999ರೂ.ಗಳ ಆರಂಭಿಕ ಬೆಲೆಯೊಂದಿಗೆ ಕಾಣಿಸಿಕೊಂಡಿತ್ತು. ಹಾಗಿದ್ರೆ, ಈ ಫೋನ್‌ ಅನ್ನು ಆಫರ್‌ ಬೆಲೆಗೆ ಖರೀದಿಸುವುದು ಉತ್ತಮವೇ?, ಅಥವಾ ಬೇಡ ಎನ್ನಲು ಕಾರಣ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಪೊಕೊದ ಈ ಫೋನ್‌ಗೆ ಡಿಸ್ಕೌಂಟ್!ಈ ಬೆಲೆಗೆ ಖರೀದಿ ಮಾಡಬಹುದು ಅನ್ನೋದಕ್ಕೆ ಕಾರಣಗಳಿವು

ಪೊಕೊ X5 ಪ್ರೊ ಗೆ ಆಫರ್: ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದರೆ 22,999ರೂ.ಗಳ ಬೆಲೆ ಹೊಂದಿರುವ ಈ ಫೋನ್‌ ಅನ್ನು ನೀವು ಈಗ 19,999 ರೂ.ಗಳಿಗೆ ಖರೀದಿ ಮಾಡಬಹುದು. ಈ ಮೂಲಕ ಮೂರು ಸಾವಿರ ಹಣ ಉಳಿತಾಯ ಆಗಲಿದೆ. ಅಷ್ಟೇ ಅಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡುವ ಮೂಲಕ ಇನ್ನಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಈ ಫೋನ್ ಖರೀದಿ ಮಾಡಲು ಇರುವ ಉತ್ತಮ ಕಾರಣಗಳೇನು?
ಈ ಸ್ಮಾರ್ಟ್‌ಫೋನ್ 6.7ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಬೆಲೆಗೆ ಇದು ಅಗತ್ಯ. ಇದರೊಂದಿಗೆ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಸಹ ಈ ಫೋನ್‌ನಲ್ಲಿದ್ದು, ಈ ಮೂಲಕ ನೀವು ಎಂತಹುದೇ ಬೆಳಕಿನಲ್ಲೂ ಅತ್ಯುತ್ತಮವಾಗಿ ವೀಕ್ಷಣೆ ಮಾಡಬಹುದಾಗಿದೆ. ಉಳಿದಂತೆ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರ ರಕ್ಷಣೆ ಪಡೆದಿದ್ದು, ಡೈನಾಮಿಕ್ 120Hz ರಿಫ್ರೆಶ್ ರೇಟ್‌ ಮತ್ತು ಡಾಲ್ಬಿ ವಿಷನ್‌ಗೆ ಬೆಂಬಲ ಹೊಂದಿದೆ.

ಇದರ ಜೊತೆಗೆ ಈ ಫೋನ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್ ಬಲ ಪಡೆದಿದ್ದು, ಬಳಕೆದಾರರಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಯಾವುದೇ ಬ್ರ್ಯಾಂಡ್ ಸಹ ಈ ಚಿಪ್‌ಸೆಟ್ ಅನ್ನು 20,000 ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳಿಗೆ ನೀಡುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿದೆ. ಹಾಗೆಯೇ ಉತ್ತಮ ಗೇಮಿಂಗ್‌ ಅನುಭವವನ್ನೂ ಸಹ ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

ಮತ್ತೊಂದು ಉತ್ತಮ ಕಾರಣ ಏನೆಂದರೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರುವುದು. ಈ ಮೂಲಕ ಬಳಕೆದಾರರು ಉತ್ತಮ ಬ್ಯಾಟರಿ ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ. ಕಂಪನಿಯು ಬಾಕ್ಸ್‌ನಲ್ಲಿ 67W ವೇಗದ ಚಾರ್ಜರ್ ಅನ್ನು ಸಹ ನೀಡುತ್ತದೆ. ಇದು ಸುಮಾರು 15 ನಿಮಿಷದಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಸುಮಾರು 50 ಪ್ರತಿಶತ ಚಾರ್ಜ್ ಮಾಡುತ್ತದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ ಉತ್ತಮ ಕ್ಯಾಮೆರಾ ಫೀಚರ್ಸ್‌ ಪಡೆದುಕೊಂಡಿದೆ. ಅಂದರೆ, ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರಿಗೆ ಈ ಫೋನ್‌ ಯೋಗ್ಯವಾಗಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿರುವ ಈ ಫೋನ್‌ 108 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌, ಇದು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್‌ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರು 4K ವಿಡಿಯೋಗಳನ್ನು ಸಹ ಶೂಟ್‌ ಮಾಡಬಹುದು.

ಖರೀದಿ ಮಾಡಬಾರದು ಎಂದರೆ ಯಾವ ಕಾರಣಕ್ಕೆ?: ಈ ಫೋನ್ ಬ್ಲೋಟ್‌ವೇರ್‌ನೊಂದಿಗೆ ಕಾಣಿಸಿಕೊಂಡಿದೆ. ಮೊದಲೇ ಇನ್‌ಸ್ಟಾಲ್‌ ಮಾಡಲಾದ ಆಪ್‌ಗಳನ್ನು ಈ ಫೋನ್‌ನಲ್ಲಿ ತೆಗೆದುಹಾಕಬಹುದು.ಆದರೆ, ಕೆಲವು ಸ್ಥಳೀಯ ಶಿಯೋಮಿ ಆಪ್‌ಗಳನ್ನು ತೆಗೆಯಲಾಗುವುದಿಲ್ಲ. ಜೊತೆಗೆ ಉತ್ತಮ ಬಳಕೆದಾರ ಇಂಟರ್ಫೇಸ್ ಗೆ ಆದ್ಯತೆ ನೀಡುವವರಿಗೆ, MIUI ಕಿರಿಕಿರಿ ಉಂಟು ಮಾಡಬಹುದು.

ಅಷ್ಟೇ ಅಲ್ಲದೆ ಈ ಮಧ್ಯಮ-ಶ್ರೇಣಿಯ ಫೋನ್ ಹೆಚ್ಚುವರಿ ಆಪ್‌ಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಕೆಲವು ತೊಂದರೆದಾಯಕ ಫೀಚರ್ಸ್‌ ಸಹ ಈ ಫೋನ್‌ನಲ್ಲಿ ಇವೆ. ಅಂದರೆ ಬಳಕೆಯಾಗದ ಆಪ್‌ಗಳಿಂದ ಸ್ಪ್ಯಾಮಿ ನೋಟಿಫಿಕೇಶನ್‌ ಬರುತ್ತವೆ. ಹಾಗೆಯೇ ಆಪ್‌ನ ಡ್ರಾಯರ್ ಅನ್ನು ಓಪನ್‌ ಮಾಡುವಾಗ ಕೆಲವು ಆಪ್‌ಗಳೊಂದಿಗೆ ಹೆಚ್ಚುವರಿ ವಿಂಡೋ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.

ಪೊಕೊದ ಈ ಫೋನ್‌ಗೆ ಡಿಸ್ಕೌಂಟ್!ಈ ಬೆಲೆಗೆ ಖರೀದಿ ಮಾಡಬಹುದು ಅನ್ನೋದಕ್ಕೆ ಕಾರಣಗಳಿವು

ಇದರೊಂದಿಗೆ ಈ ಫೋನ್‌ ಹಳೆಯ ಆಂಡ್ರಾಯ್ಡ್‌ 12 ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಕೇವಲ ಎರಡು ವರ್ಷಗಳ ಆಂಡ್ರಾಯ್ಡ್‌ ನವೀಕರಣಗಳಿಗೆ ಸೀಮಿತಗೊಳಿಸಿರುವುದು ಸಹ ಬೇಸರದ ವಿಷಯ. ಅಂದರೆ ನಿವು ಈ ಫೋನ್‌ ನಲ್ಲಿ ಆಂಡ್ರಾಯ್ಡ್‌ 14 ಓಎಸ್‌ ಅನ್ನು ಮಾತ್ರ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದಾದ ನಂತರ ಇತರೆ ಓಎಸ್‌ಗಳಿಗೆ ಇದು ಬೆಂಬಲ ನೀಡುವುದಿಲ್ಲ.

Best Mobiles in India

English summary
Poco X5 Pro smartphone has now been given a huge discount in the segment of Poco phones, this 5G phone was launched in India with a starting price of Rs 22,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+