ಹೊಸ ಅವತಾರದಲ್ಲಿ ಲಾಂಚ್ ಆಗಿದೆ 'ಪೊಕೊ X6' ಫೋನ್!..ಭರ್ಜರಿ ಆಫರ್ ಲಭ್ಯ!
ಜನಪ್ರಿಯ ಪೊಕೊ ಮೊಬೈಲ್ ಕಂಪೆನಿಯು ಇತ್ತೀಚಿಗೆ ಪೊಕೊ X6 ಸರಣಿಯನ್ನು ಬಿಡುಗಡೆ ಮಾಡಿ ಮೊಬೈಲ್ ಪ್ರಿಯರನ್ನು ಆಕರ್ಷಿಸಿದೆ. ಇದೀಗ ಪೊಕೊ ಸಂಸ್ಥೆಯು ಪೊಕೊ X6 ಫೋನಿನಲ್ಲಿ ಹೊಸ ವೇರಿಯಂಟ್ ಆಯ್ಕೆಯನ್ನು ಲಾಂಚ್ ಮಾಡಿದ್ದು, ಅದುವೇ 12GB + 256GB ಆಗಿದೆ.
ಹೌದು, ಪೊಕೊ ಮೊಬೈಲ್ ಸಂಸ್ಥೆಯು ನೂತನವಾಗಿ 12GB + 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಂದಹಾಗೆ ಈ ಫೋನ್ ಮಿರರ್ ಬ್ಲಾಕ್ ಮತ್ತು ಸ್ನೋ ಸ್ಟಾರ್ಮ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಗ್ರಾಹಕರು ಫ್ಲಿಪ್‌ಕಾರ್ಟ್ ಈ ಕಾಮರ್ಸ್ ತಾಣದ ಮೂಲಕ ಖರೀದಿ ಮಾಡಬಹುದಾಗಿದೆ.

ಪೊಕೊ X6 ಫೋನ್ 8GB/12GB ಹಾಗೂ 256GB/512GB ಸ್ಟೋರೇಜ್ ವೇರಿಯಂಟ್ ಮಾದರಿಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್ ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 2 ಪ್ರೊಸೆಸರ್ ಪವರ್ ಸೌಲಭ್ಯ ಪಡೆದಿದ್ದು, ಇದರೊಂದಿಗೆ 5,100 mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಕೂಡಾ ಪಡೆದಿದೆ. ಹಾಗಾದರೇ ಇನ್ನುಳಿದಂತೆ ಪೊಕೊ X6 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೊಕೊ X6 ಫೋನಿನ ಫೀಚರ್ಸ್
ಪೊಕೊ X6 ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1.5K AMOLED ಮಾದರಿಯ ಸ್ಕ್ರೀನ್ ಪಡೆದಿದೆ. ಈ ಫೋನಿನ ಸ್ಕ್ರೀನ್ 120Hz ರಿಫ್ರೆಸ್ ರೇಟ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಇದು 1800 nits ಬ್ರೈಟ್ನೆಸ್ ಸೌಲಬ್ಯ ಕೂಡಾ ಪಡೆದುಕೊಂಡಿದೆ. ಇದರ ಜೊತೆಗೆ 240Hz ಟಚ್ ಸ್ಯಾಪ್ಲಿಂಗ್ ರೇಟ್ ಕೂಡಾ ಪಡೆದಿದೆ.

ಇನ್ನು ಪೊಕೊದ ಈ ಫೋನ್ ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 2 ಪ್ರೊಸೆಸರ್ ಪವರ್ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಹಾಗೂ ಅಡ್ರೆನೋ 710 GPU.ಸಪೋರ್ಟ್ ಹೊಂದಿದೆ. ಅಲ್ಲದೇ ಈ ಫೋನ್ 8GB/12GB RAM ಮತ್ತು 256GB/512GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ.
ಅಲ್ಲದೇ ಈ ಫೋನಿನ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸಲ್ ಆಗಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಮುಂಭಾದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಕೂಡಾ ಇದೆ.
ಇನ್ನು ಈ ಫೋನ್ 5,100mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದುಕೊಂಡಿದ್ದು, ಇದರ ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. ಅಲ್ಲದೇ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಇನ್‌ಫ್ರಾರೆಡ್ ಸೆನ್ಸಾರ್, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, IR ಬ್ಲಾಸ್ಟರ್ ಮತ್ತು IP54 ರೇಟಿಂಗ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು ಚಾರ್ಜಿಂಗ್‌ಗಾಗಿ USB ಟೈಪ್-C ಪೋರ್ಟ್ ಸೇರಿವೆ.
ಬೆಲೆ ಮತ್ತು ಲಭ್ಯತೆ
ಹೊಸ ಪೊಕೊ X6 ಫೋನಿನ 12GB/256GB ವೇರಿಯಂಟ್ ಬೆಲೆಯು 23,999ರೂ. ಆಗಿದ್ದು, ಗ್ರಾಹಕರು ಈ ಫೋನ್ ಅನ್ನು ಮೀರರ್ ಬ್ಲ್ಯಾಕ್ ಮತ್ತು ಸ್ನೋ ಸ್ಟಾರ್ಮ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.
ಗ್ರಾಹಕರು ICICI ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಅಥವಾ EMI ಪಾವತಿಗಳು ಅಥವಾ ಎಕ್ಸ್‌ಚೇಂಜ್ ಆಫರ್‌ಗಳನ್ನು ಬಳಸಿಕೊಂಡು ಖರೀದಿಸಿದರೆ, 3,000 ರಿಯಾಯಿತಿ ಪಡೆಯಬಹುದು. ಇನ್ನು ಈ ಹೊಸ ವೇರಿಯಂಟ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದ ಮೂಲಕ ಖರಿದಿಗೆ ಲಭ್ಯ.


Click it and Unblock the Notifications








