ಇಂದು ಈ ಸ್ಟೈಲಿಶ್ ಫೋನಿನ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಇದು ಸಖತ್ ಫೋನ್!
ಪೊಕೊ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಪೊಕೊ X6 ನಿಯೋ ಫೋನಿನ ಫಸ್ಟ್ ಸೇಲ್ ಇಂದು (ಮಾರ್ಚ್ 18 ರಂದು) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದ ಮೂಲಕ ಮಧ್ಯಾಹ್ನ 12 ರಿಂದ ಶುರುವಾಗಲಿದೆ. ಈ ಮೊಬೈಲ್ ಬಜೆಟ್ ಪ್ರೈಸ್ ಟ್ಯಾಗ್ ಪಡೆದಿದ್ದು, ಕೆಲವು ಬೊಂಬಾಟ್ ಫೀಚರ್ಸ್ ಗಳೊಂದಿಗೆ ಗ್ರಾಹಕರ ಗಮನ ಸೆಳದಿದೆ.
ಹೌದು, ಪೊಕೊ X6 ನಿಯೋ ಮೊಬೈಲ್ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೂಲಕ ಇಂದು ಫಸ್ಟ್ ಸೇಲ್ ಪ್ರಾರಂಭ ಆಗಲಿದೆ. ಈ ಮೊಬೈಲ್ 8GB + 128GB ವೇರಿಯಂಟ್ ಹಾಗೂ 12GB + 256GB ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಅಂದಹಾಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಪಡೆದಿದ್ದು, ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ.

ಪೊಕೊ X6 ನಿಯೋ ಮೊಬೈಲ್‌ನ ಆರಂಭಿಕ ವೇರಿಯಂಟ್ ಬೆಲೆಯು 15,999ರೂ. ಆಗಿದ್ದು, ಖರೀದಿದಾರರು ಈ ಮೊಬೈಲ್ ಅನ್ನು ಆಸ್ಟ್ರಲ್ ಬ್ಲ್ಯಾಕ್, ಹರೈಸನ್ ಬ್ಲೂ ಮತ್ತು ಆರೆಂಜ್ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ಪೊಕೊ X6 ನಿಯೋ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಪೊಕೊ X6 ನಿಯೋ ಫೋನ್ ಫೀಚರ್ಸ್
ಪೊಕೊದ ಈ ಮೊಬೈಲ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಪಡೆದಿದ್ದು, ಈ ಡಿಸ್‌ಪ್ಲೇಯು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz, 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ಸಪೋರ್ಟ್ ಮಾಡುತ್ತದೆ. ಜೊತೆಗೆ ಇದರ ಡಿಸ್‌ಪ್ಲೇಯು 88.9% ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿ ಇದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ.

ಹಾಗೆಯೇ ಈ ನೂತನ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ (6 nm) ಪ್ರೊಸೆಸರ್ ಪವರ್ ಪಡೆದಿದ್ದು, ಪೂರಕವಾಗಿ ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ ಇದು 8GB + 128GB ಸ್ಟೋರೇಜ್ ಹಾಗೂ 12GB + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಒಳಗೊಂಡಿದೆ.
ಪೊಕೊ X6 ನಿಯೋ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.
ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ನೀಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಪಡೆದಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋಮೀಟರ್, ಕಂಪಾಸ್ ನಂತಹ ಆಯ್ಕೆಗಳನ್ನು ಕಾಣಬಹುದಾಗಿದೆ.
ಭಾರತದಲ್ಲಿ ಪೊಕೊ X6 ನಿಯೋ ಫೋನ್ 8GB + 128GB ಸ್ಟೋರೇಜ್ ವೇರಿಯಂಟ್ ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಲಭ್ಯ. ಇನ್ನು ಈ ಫೋನ್ ಆಸ್ಟ್ರಲ್ ಬ್ಲ್ಯಾಕ್, ಹರೈಸನ್ ಬ್ಲೂ ಮತ್ತು ಆರೆಂಜ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದೇ ಮಾರ್ಚ್ 18 ರಿಂದ ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಪ್ರಾರಂಭಿಸಲಿದೆ.


Click it and Unblock the Notifications








